ಗಜೇಂದ್ರಗಡ: ಸಮೀಪದ ನಾಗೇಂದ್ರಗಡ ಗ್ರಾಮದ ಜಮೀನಿನಲ್ಲಿದ್ದ ಆಕಳಿನ ಮೇಲೆ ಚಿರತೆ ದಾಳಿ ನಡೆಸಿ ಕೊಂದು ಹಾಕಿದ ಘಟನೆ ನಡೆದಿದೆ. ಗ್ರಾಮದ ನಿಂಗಪ್ಪ ಹಂಡಿ ಎಂಬುವರ ಹೊಲದಲ್ಲಿ ದನದ ಶೆಡ್‌ನಲ್ಲಿ ಕಟ್ಟಿದ್ದ ಆಕಳಿನ ಮೇಲೆ ದಾಳಿ ನಡೆಸಿದ ಚಿರತೆ ಆಕಳನ್ನು ಕೊಂದು ಹಿಂಭಾಗದ ಅರ್ಧ ಭಾಗ ತಿಂದು ಹಾಕಿದೆ.
ಕಳೆದ ತಿಂಗಳು ನೆಲ್ಲೂರ ಪ್ಯಾಟಿ ಗ್ರಾಮದಲ್ಲಿ ಚಿರತೆ ಕುದುರೆ ಮೇಲೆ ದಾಳಿ ನಡೆಸಿ ಕೊಂದು ಹಾಕಿತ್ತು. ವಿಷಯ ತಿಳಿಯುತ್ತಿದ್ದಂತೆ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾ ಧಿಕಾರಿ ದೀಪಿಕಾ ಬಾಜಪೆ, ಸಹಾಯಕ ಅರಣ್ಯ ಸಂರಕ್ಷಣಾಧಿ ಕಾರಿ ಪರಿಮಳ ವಿ.ಎಚ್. ಭೇಟಿ ನೀಡಿ ಪರಿಶೀಲನೆ ನಡೆಸಿದರು.
ನಂತರ ಸ್ಥಳಕ್ಕೆ ಶಾಸಕ ಕಳಕಪ್ಪ ಬಂಡಿ, ತಹಶೀಲ್ದಾರ್ ರಜನಿಕಾಂತ ಕೆಂಗೇರಿ, ಗಜೇಂದ್ರಗಡ ಪಿಎಸ್‌ಐ ಶರಣಬಸಪ್ಪ ಸಂಗಳದ ಭೇಟಿ ನೀಡಿ ಪರಿಶೀಲಿಸಿದರು. ಇದೇ ಸಂದರ್ಭದಲ್ಲಿ ಶಾಸಕ ಕಳಕಪ್ಪ ಬಂಡಿ ಗ್ರಾಮಸ್ಥರ ಸಮ್ಮುಖದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಸಭೆ ನಡೆಸಿದರು. ಶಾಸಕ ಕಳಕಪ್ಪ ಬಂಡಿ ಮಾತನಾಡಿ, ಈ ಹಿಂದೆ ಹಲವು ಬಾರಿ ಚಿರತೆ ದಾಳಿ ನಡೆಸಿರುವುದರಿಂದ ಈ ಭಾಗದ ಜನರು ಭಯಭೀತರಾಗಿದ್ದಾರೆ. ಹೀಗಾಗಿ ಅಲ್ಲಲ್ಲಿ ಹೆಚ್ಚು ಬೋನು ಇರಿಸಿ, ಹೆಚ್ಚಿನ ಸಿಬ್ಬಂದಿ ನಿಯೋಜನೆ ಮಾಡಿ ಎಂದು ಅರಣ್ಯ ಇಲಾಖೆ ಅ ಧಿಕಾರಿಗಳಿಗೆ ಸೂಚಿಸಿದರು.
ಉಪ ಅರಣ್ಯ ಸಂರಕ್ಷಣಾಧಿ ಕಾರಿ ದೀಪಿಕಾ ಬಾಜಪೆ ಮಾತನಾಡಿ, ಈ ಭಾಗದಲ್ಲಿ ಗುಡ್ಡ ಪ್ರದೇಶ ಇರುವುದರಿಂದ ಚಿರತೆ ಇದ್ದೇ ಇರುತ್ತದೆ. ಗುಡ್ಡದಲ್ಲಿ ಅದಕ್ಕೆ ಆಹಾರ, ನೀರಿನ ಕೊರತೆಯಾದಾಗ ಈ ರೀತಿ ಆಕಳು, ನಾಯಿಗಳ ಮೇಲೆ ದಾಳಿ ನಡೆಸುತ್ತದೆ. ಗ್ರಾಮಸ್ಥರು ಭಯಪಡುವ ಅಗತ್ಯವಿಲ್ಲ. ಚಿರತೆ ಹಿಡಿಯಲು ನಾವು ಕಾರ್ಯಾಚರಣೆ ನಡೆಸುತ್ತೇವೆ ಎಂದು ಧೈರ್ಯ ತುಂಬಿದರು. ವಲಯ ಅರಣ್ಯಾ ಧಿಕಾರಿ ರಾಜು ಗೋಂಧಕರ, ಉಪ ವಲಯ ಅರಣ್ಯಾ ಧಿಕಾರಿ ಅನ್ವರ ಕೊಲ್ಹಾರ, ಮುಖಂಡರಾದ ಶಿವಾನಂದ ಮಠದ, ನಿಂಗಪ್ಪ ಹಂಡಿ, ಶರಣಪ್ಪ ಕುರಿ, ಅಶೋಕ ಜಿಗಳೂರ, ಪರಶುರಾಮ ಹಂಡಿ, ಶಿವಯೋಗಿ ಜಿಗಳೂರ, ಬಾಳು ಗೌಡರ, ಅರಣ್ಯ ರಕ್ಷಕರಾದ ಪುಟ್ಟರಾಜ ಬಿಂಗಿ, ಈಶ್ವರ ಮರ್ತುರು, ಮಲ್ಲಪ್ಪ ಹುಲ್ಲಣ್ಣವರ ಇದ್ದರು.