Advertisement

ರೈತ ಸಂಘದಿಂದ ನಾಗೇಂದ್ರ ಉಚ್ಚಾಟನೆ

11:50 PM Feb 10, 2019 | Team Udayavani |

ಮೈಸೂರು: ರೈತರ ಸಮಸ್ಯೆಗಳ ಪರಿಹಾರಕ್ಕಾಗಿ ಹೋರಾಟ ನಡೆಸಿ, ಆಳುವ ಸರ್ಕಾರವನ್ನು ಎಚ್ಚರಿಸಬೇಕಾದ ರಾಜ್ಯ ರೈತಸಂಘದಲ್ಲಿ ಕುರ್ಚಿಗಾಗಿ ಹೋರಾಟ ನಡೆದಿದೆ. ಇತ್ತೀಚೆಗೆ ಚಿತ್ರದುರ್ಗದಲ್ಲಿ ನಡೆದ ರೈತಸಂಘದ ರಾಜ್ಯ ಸಮಿತಿ ಸಭೆಯಲ್ಲಿ ಬಡಗಲಪುರ ನಾಗೇಂದ್ರ ರಾಜ್ಯಾಧ್ಯಕ್ಷರಾಗಿ ನೇಮಕವಾಗಿದ್ದರು. ಆದರೆ, ಈ ನೇಮಕವನ್ನು ಪ್ರೊ.ಎಂ.ಡಿ.ನಂಜುಂಡಸ್ವಾಮಿ ಬಣ ವಿರೋಧಿಸಿದೆ.

Advertisement

ಸಂಘಟನೆ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದಾರೆಂಬ ಆರೋಪದ ಮೇಲೆ ವಿದ್ಯಾಸಾಗರ್‌ ಅವರನ್ನು ನಂಜನಗೂಡು ತಾಲೂಕು ಅಧ್ಯಕ್ಷ ಸ್ಥಾನದಿಂದ ಉಚ್ಚಾಟನೆ ಮಾಡಲಾಗಿತ್ತು. ಇದೀಗ ವಿದ್ಯಾಸಾಗರ್‌ ಪರ ನಿಂತಿರುವ ರೈತ ಮುಖಂಡರಾದ ಪಚ್ಚೆ ನಂಜುಂಡಸ್ವಾಮಿ ಹಾಗೂ ಬಿ.ಎ.ಲಕ್ಷ್ಮೀನಾರಾಯಣಗೌಡ ಅವರು ಭಾನುವಾರ ಸುದ್ದಿಗೋಷ್ಠಿ ನಡೆಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ಬಡಲಗಪುರ ನಾಗೇಂದ್ರ ಅವರನ್ನು ಸಂಘದ ಸದಸ್ಯತ್ವದಿಂದ ಉಚ್ಚಾಟನೆ ಮಾಡಿದ್ದೇವೆ ಎಂದರು. ರೈತ ಮುಖಂಡ ಪಚ್ಚೆ ನಂಜುಂಡಸ್ವಾಮಿ ಮಾತನಾಡಿ, ಬಡಗಲಪುರ ನಾಗೇಂದ್ರ ಅವರೊಬ್ಬ ವಕೀಲರಾಗಿ ಪ್ರಜಾಪ್ರಭುತ್ವ ಹಾಗೂ ಸಂಘದ ಬೈಲಾಕ್ಕೆ ವಿರುದ್ಧವಾಗಿ ಸಂಘದ ನಂಜನಗೂಡು ತಾಲೂಕು ಅಧ್ಯಕ್ಷ ವಿದ್ಯಾಸಾಗರ್‌ ಮತ್ತು ಇತರ ಪದಾಧಿಕಾರಿ ಗಳನ್ನು ಏಕಾಏಕಿ ಸಂಘದಿಂದ ಉಚ್ಚಾಟನೆ ಮಾಡಿದ್ದಾರೆ.

13ರಂದು ರೈತೋತ್ಸವ: ವಿಶ್ವ ರೈತ ನಾಯಕ ಪ್ರೊ.ಎಂ.ಡಿ.ನಂಜುಂಡಸ್ವಾಮಿ ಅವರ ಜಯಂತಿಯ ಅಂಗವಾಗಿ ಫೆ.13ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ರೈತೋತ್ಸವ ಏರ್ಪಡಿಸಲಾಗಿದೆ. ರಾಜ್ಯದ ಎಲ್ಲಾ ಜಿಲ್ಲೆಗಳಿಂದ 40 ಸಾವಿರಕ್ಕೂ ಹೆಚ್ಚು ರೈತ ಮುಖಂಡರು ಈ ಉತ್ಸವದಲ್ಲಿ ಭಾಗವಹಿಸುವರು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next