Advertisement
ನಾಗರಾಜ್ ಪೊಲೀಸರ ಮುಂದೆ ಶರಣಾಗಲು ಬಯಸಿದ್ದು, ಕೆಲವು ಷರ ತ್ತುಗಳನ್ನು ನ್ಯಾಯಾಲಯದ ಮೂಲಕ ಕೇಳಿಕೊಂಡಿದ್ದಾನೆ. ಅದಕ್ಕೆ ಪೊಲೀಸ್ ಇಲಾಖೆ ಸ್ಪಂದಿಸಬೇಕು ಎಂದು ವಕೀಲರು ಮನವಿ ಮಾಡಿದ್ದಾರೆ.
Related Articles
ಈ ಮಧ್ಯೆ, ನಾಗರಾಜ್‌ನ ಮತ್ತೂಬ್ಬ ಸಹಚರ ಹಾಗೂ ಬೌನ್ಸರ್ ಹರಿಕೃಷ್ಣನನ್ನು ಆಂಧ್ರದ ವೆಲ್ಲೂರಿನಲ್ಲಿ ಪೊಲೀಸರು ಸೋಮವಾರ ಬಂಧಿಸಿದ್ದಾರೆ. ಈ ಹಿಂದೆ ಬಂಧನವಾಗಿದ್ದ ಶ್ರೀಹರಿಯ ಸಹೋದರನಾಗಿರುವ ಹರಿಕೃಷ್ಣ, ನಾಗರಾಜ್‌ಗೆ ಬೌನ್ಸರ್ ಆಗಿದ್ದ. ಶರವಣ ಮತ್ತು ಶ್ರೀನಿವಾಸ್ ನೋಟುಗಳ ಬದಲಾವಣೆಗೆ ಉದ್ಯಮಿಗಳನ್ನು ಕರೆ ತರುತ್ತಿದ್ದರು. ಈ ವೇಳೆ ಸಹೋದರರು ಸಿಸಿಬಿ ಪೊಲೀಸರ ಸೋಗಿನಲ್ಲಿ ದಾಳಿ ಮಾಡಿ ಹಣ ದರೋಡೆ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ.ಇದುವರೆಗೂ ಪ್ರಕರಣದಲ್ಲಿ ಒಟ್ಟು 8 ಆರೋಪಿಗಳ ಬಂಧನವಾಗಿದೆ.
Advertisement
ಇಂದು ಅಥವಾ ನಾಳೆ ಶರಣಾಗತಿ?ಬ್ಲ್ಯಾಕ್ ಆ್ಯಂಡ್ ವೈಟ್ ದಂಧೆ ಪ್ರಕರಣ ಸಂಬಂಧ ತನಿಖೆ ತೀವ್ರಗೊಳಿಸಿರುವ ಎಸಿಪಿ ರವಿಕುಮಾರ್, ಪ್ರಕರಣದ ರೂವಾರಿ ನಾಗನ ಬಂಧನಕ್ಕೆ ಸಾಧ್ಯವಿರುವ ಎಲ್ಲ ಮಾರ್ಗಗಳನ್ನು ಬಳಸಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಮೂಲಗಳ ಪ್ರಕಾರ ಆರೋಪಿ ನಾಗರಾಜ್ ಮಂಗಳವಾರ ಇಲ್ಲವೇ ಬುಧವಾರ ಬೆಳಗ್ಗೆ ಪೊಲೀಸರಿಗೆ ಶರಣಾಗುವ ಸಾಧ್ಯತೆಯಿದೆ. ಒಂದೊಮ್ಮೆ ಆತ ಶರಣಾಗದಿದ್ದರೆ, ಮುಂದಿನ ನಾಲ್ಕೈದು ದಿನಗಳಲ್ಲಿ ಪೊಲೀಸರೇ ಆತನನ್ನು ಬಂಧಿಸಲಿದ್ದಾರೆ ಎನ್ನಲಾಗಿದೆ. ನಾಗರಾಜ್ ಪರ ವಕೀಲರಾದ ಶ್ರೀರಾಮರೆಡ್ಡಿ ಸೋಮವಾರ ನನ್ನನ್ನು ಭೇಟಿಯಾಗಿ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲ ಷರತ್ತುಗಳನ್ನು ಹೇರಲು ಮುಂದಾದರು. ಆದರೆ, ಇದಕ್ಕೆ ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದೇನೆ.
-ರವಿಕುಮಾರ್, ಎಸಿಪಿ, ಬಾಣಸವಾಡಿ ಉಪವಿಭಾಗ