Advertisement
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಎಲ್ಲಾ 8 ವಲಯಗಳಲ್ಲೂ ಕಳೆದ ಮೂರ್‍ನಾಲ್ಕು ದಿನಗಳಿಂದ ಸಿಬ್ಬಂದಿಗಳು 402 ಕ್ಯಾಮರಾ ಅಳವಡಿಸಿದ್ದು, ಎರಡು ವರ್ಷಕ್ಕಿಂತ ಕಡಿಮೆ ಇರುವ ಚಿಕ್ಕ ಹುಲಿಗಳನ್ನು ಎಣಿಕೆ ವೇಳೆ ಗಣನೆಗೆ ತೆಗೆದುಕೊಳ್ಳದೆ ಉಳಿದಂತೆ ಹುಲಿಗಳನ್ನು ಎಣಿಕೆ ಮಾಡಲಾಗುತ್ತದೆ.
Related Articles
Advertisement
ಡಿ.ಬಿ.ಕುಪ್ಪೆ ಸುಬ್ರಹ್ಮಣ್ಯ ಸೇರಿ 8 ವಲಯಗಳಲ್ಲಿಯೂ ಆಯಾ ಆರ್‌ಎಫ್ಒಗಳ ನೇತತ್ವದಲ್ಲಿ ತರಬೇತಿ ಪಡೆದ ಸಿಬ್ಬಂದಿ ಕಾರ್ಯನಿರ್ವಹಿಸಲಿದ್ದಾರೆ. ಕಲ್ಲಹಳ್ಳ ವಲಯದ 28, ವೀರನಹೊಸಹಳ್ಳಿ ವಲಯದ 22 ಕಡೆ ಸೇರಿದಂತೆ ಉದ್ಯಾನವನದ ಎಲ್ಲೆಡೆ 201 ಕಡೆ ಸೇರಿದಂತೆ ತಲಾ ಎರಡು ಅತ್ಯಾಧುನಿಕ ತಂತ್ರಜ್ಞಾನವುಳ್ಳ 402 ಕ್ಯಾಮರಾಗಳನ್ನು ಅಳವಡಿಸಲಾಗಿದೆ.
ಹುಲಿ ಪತ್ತೆ ಕಾರ್ಯ ಹೇಗೆ: ಪ್ರತಿ ವಲಯದ ಹುಲಿಗಳ ಆವಾಸ ಸ್ಥಾನ-ಓಡಾಟ ಹಾಗೂ ವಿಸ್ತೀರ್ಣ ಗುರುತಿಸಿ ಹುಲಿಗಳು ಓಡಾಡುವ ಮಾರ್ಗದಲ್ಲಿ ಎದುರು-ಬದುರಾಗಿ ಕ್ಯಾಮರ ಅಳವಡಿಸಲಾಗುತ್ತದೆ. ಅಲ್ಲಿ ಆಧುನಿಕ ತಂತ್ರಜ್ಞಾನ ಬಳಸಿದ ಕ್ಯಾಮರಾದಲ್ಲಿ ಎಲ್ಲಾ ಪ್ರಾಣಿಯ ಓಡಾಟದ ನಿಖರ ಸಮಯ ದಾಖಲಾಗಲಿದೆ.
3-4 ದಿನಕ್ಕೊಮ್ಮೆ ಸಿಬ್ಬಂದಿ ಸ್ಥಳಕ್ಕೆ ತೆರಳಿ ಕ್ಯಾಮರಾದಿಂದ ಚಿಪ್ ಹೊರತೆಗೆದು ಸ್ಥಳದಲ್ಲೇ ಇಲಾಖೆ ವತಿಯಿಂದ ನೀಡಿರುವ ಲ್ಯಾಪ್ ಟ್ಯಾಪ್‌ನಲ್ಲೇ ಡಾಟಾ ಸಂಗ್ರಹಿಸಿ, ಅಲ್ಲೇ ಚಿಪ್ ಅಳವಡಿಸುತ್ತಾರೆ. ಒಂದೇ ಹುಲಿ 2-3 ಕಡೆಗಳಲ್ಲಿ ಕ್ಯಾಮರಾ ಟ್ರ್ಯಾಪ್ ಆಗಿದ್ದಲ್ಲಿ ಅದನ್ನೂ ಗುರುತಿಸುತ್ತಾರೆ.
ಈ ಹಿಂದೆ ಹಲವು ಎನ್‌ಜಿಒ ಸೇರಿದಂತೆ ಇತರರ ಸಹಕಾರದಿಂದ ಹುಲಿ ಗಣತಿ ಕಾರ್ಯ ನಡೆಯುತ್ತಿತ್ತು. ಕಳೆದ 3 ವರ್ಷಗಳಿಂದ ರಾಷ್ಟ್ರೀಯ ಹುಲಿ ಪ್ರಾಧಿಕಾರದ ವತಿಯಿಂದಲೇ ಇಲಾಖೆ ಅಧಿಕಾರಿಗಳು, ಆಯ್ದ ಸಿಬ್ಬಂದಿಗೆ ತರಬೇತಿ ನೀಡಿ ಕ್ಯಾಮರಾ ಟ್ರಾಪಿಂಗ್ ಗಣತಿ ನಡೆಸಲಾಗುತ್ತಿದೆ.
* ಸಂಪತ್ ಕುಮಾರ್