Advertisement

ಹೆಚ್ಚುತ್ತಿರುವ ಕೋವಿಡ್ ಸೋಂಕು ಪ್ರಕರಣ : ನಾಗರಹೊಳೆ ರಾಷ್ಟ್ರಿಯ ಉದ್ಯಾನವನ ಬಂದ್

10:07 PM Jul 09, 2020 | sudhir |

ಮೈಸೂರು: ವಿಶ್ವವಿಖ್ಯಾತ ನಾಗರಹೊಳೆ ರಾಷ್ಟ್ರಿಯ ಉದ್ಯಾನವನದಲ್ಲಿ ಕೋವಿಡ್ ಸೋಂಕು ಹರಡುವ ಹಿನ್ನೆಲೆಯಲ್ಲಿ ಗುರುವಾರದಿಂದ ಸಫಾರಿ ಬಂದ್ ಮಾಡಲಾಗಿದೆ ಎಂದು ನಾಗರಹೊಳೆ ಹುಲಿಯೋಜನೆ ನಿರ್ದೇಶಕ ಮಹೇಶ್ ಕುಮಾರ್ ತಿಳಿಸಿದ್ದಾರೆ.

Advertisement

ದೇಶದಲ್ಲಿ ಕೋವಿಡ್ ಪ್ರಕರಣಗಳು ಹೆಚ್ಚುತ್ತಿರುವುದರಿಂದಾಗಿ ಮೈಸೂರು ಮತ್ತು ಕೊಡಗು ಜಿಲ್ಲಾಧಿಕಾರಿಗಳ ಸೂಚನೆಯಂತೆ ಗುರುವಾರದಿಂದಲೇ ಸಫಾರಿ ಬಂದ್ ಮಾಡಲಾಗಿದ್ದು. ಉದ್ಯಾನವನಕ್ಕೆ ದೇಶವಿದೇಶಗಳಿಂದ ಬರುವ ಪ್ರವಾಸಿಗರು ಸುತ್ತಮುತ್ತಲಿನ ಹೊಂ ಸ್ಟೇ. ರೆಸಾಟ್೯ ಹಾಗೂ ಲಾಡ್ಜ್ ಗಳಲ್ಲಿ ಉಳಿದುಕೊಳ್ಳುವುದರಿಂದ ಕೋವಿಡ್ ಸೋಂಕು ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗೂ ಹರಡುವುವ ಭೀತಿ ಇರುವುದರಿಂದ ನಾಗರಹೊಳೆ ಉದ್ಯಾನದ ಮೈಸೂರು ಜಿಲ್ಲೆಯ ಎಚ್.ಡಿ.ಕೋಟೆ ತಾಲೂಕಿನ ದಮ್ಮನಕಟ್ಟೆ. ಹಾಗೂ ವೀರನಹೊಸಹಳ್ಳಿಗೇಟ್ ಮತ್ತು ಕೊಡಗು ಜಿಲ್ಲೆಯ ನಾಣಚ್ಚಿ ಗೇಟ್ ನಿಂದ ನಡೆಯುತ್ತಿದ್ದ ಸಫಾರಿಯನ್ನು ಬಂದ್ ಮಾಡಲಾಗಿದೆ. ಆನ್ ಲೈನ್ ಮತ್ತು ಆಫ್ ಲೈನ್ ಮೂಲಕ ಈಗಾಗಲೆ ಸಫಾರಿ ಹಾಗೂ ಕಾಟೇಜ್ ಬುಕ್ಕಿಂಗ್ ಮಾಡಿರುವವರಿಗೂ ಮಾಹಿತಿ ನೀಡಲಾಗಿದೆ. ಪ್ರವಾಸಿಗರು ಸಹಕರಿಸುವಂತೆ ನಿರ್ದೇಶಕ ಮಹೇಶ್ ಕುಮಾರ್ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next