Advertisement

Hunasur: ನಾಗರಹೊಳೆ ಉದ್ಯಾನದಲ್ಲಿ ಐದು ವರ್ಷದ ಹುಲಿ ಕಳೆ‌ಬರ ಪತ್ತೆ

09:32 PM Jun 12, 2024 | sudhir |

ಹುಣಸೂರು: ಹುಲಿಗಳ ಕಾದಾಟದಲ್ಲಿ ಸುಮಾರು ಐದು ವರ್ಷದ ಗಂಡು ಹುಲಿ ಸಾವನ್ನಪ್ಪಿರುವ ಘಟನೆ ನಾಗರಹೊಳೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ನಡೆದಿದೆ.

Advertisement

ನಾಗರಹೊಳೆ ಉದ್ಯಾನದ ಹುಣಸೂರು ವನ್ಯಜೀವಿ ವಲಯದ ಲಕ್ಷ್ಮೀಪುರ ಕಳ್ಳ ಭೇಟೆ ತಡೆ ಶಿಬಿರದ ಗೋವಿಂದೇಗೌಡ ಕಂಡಿ ಅರಣ್ಯ ಪ್ರದೇಶದಲ್ಲಿ ಹುಲಿ ಶವ ಪತ್ತೆಯಾಗಿದೆ.

ಗಸ್ತಿನಲ್ಲಿದ್ದ ಸಿಬ್ಬಂದಿಗಳು ಪ್ರಾಣಿ ಸತ್ತಿರುವ ವಾಸನೆ ಬಂದಿದ್ದನ್ನು ಗಮನಿಸಿ ಹತ್ತಿರ ಹೋಗಿ ನೋಡಲಾಗಿ ಹುಲಿಯ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆವಾಸ ಸ್ಥಾನಕ್ಕಾಗಿ ಕಾದಾಟ ನಡೆಸಿರಬಹುದೆಂದು ಶಂಕಿಸಲಾಗಿದೆ. ಸಿಬ್ಬಂದಿಗಳು ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ ಮೇರೆಗೆಸ್ಥಳಕ್ಕೆ ಹುಲಿ ಸಂರಕ್ಷಿತ ಪ್ರದೇಶದ ಕ್ಷೇತ್ರ ನಿರ್ದೇಶಕ ಹರ್ಷಕುಮಾರ್ ಚಿಕ್ಕನರಗುಂದ, ಎಸಿಎಪ್ ದಯಾನಂದ್, ಆರ್.ಎಫ್.ಓ.ಸುಬ್ರಮಣ್ಯ,ಹಾಗೂ ವನ್ಯಜೀವಿ ಪರಿಪಾಲಕರಾದ ಕೃತಿಕಾಹಾಲನಹಳ್ಳಿ, ಎನ್.ಟಿ.ಸಿ.ಎ.ಸದಸ್ಯ ಕೆ.ವಿ.ಬೋಸ್‌ಮಾದಪ್ಪ, ಸ್ಥಳೀಯ ಎನ್.ಜಿ.ಓ.ದ ಸಿ.ಕೆ.ತಮ್ಮಯ್ಯ, ಚೌತಿ ಗ್ರಾ.ಪಂ.ಅಧ್ಯಕ್ಷ ಸ್ವಾಮಿ, ಸದಸ್ಯ ಮುತ್ತುರಾಜ್ ಮತ್ತಿತತರ ಸಮ್ಮುಖದಲ್ಲಿ ನಾಗರಹೊಳೆ ಹಿರಿಯ ಪಶು ಪ್ರಭಾರಧಾರಕರಾದ ಡಾ.ರಮೇಶ್, ದುಬಾರೆ ಆನೆ ಪ್ರಭಾರದಾರಕಾರದ ಡಾ.ಚೆಟ್ಟಿಯಪ್ಪರವರು ಎನ್.ಟಿ.ಸಿ.ಎ ಮಾರ್ಗಸೂಚಿಯಂತೆ ಹುಲಿಯ ಮರಣೋತ್ತರ ಪರೀಕ್ಷೆ ನಡೆದ ನಂತರ ಸ್ಥಳದಲ್ಲೇ ಸುಟ್ಟು ಹಾಕಲಾಯಿತೆಂದು ಡಿಸಿಎಫ್ ಹರ್ಷಕುಮಾರ್ ಚಿಕ್ಕನರಗುಂದ ತಿಳಿಸಿದ್ದಾರೆ.

ಇದನ್ನೂ ಓದಿ: Davanagere: ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯ

Advertisement

Udayavani is now on Telegram. Click here to join our channel and stay updated with the latest news.

Next