ಹುಣಸೂರು : ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಆನೆಚೌಕೂರು ವನ್ಯಜೀವಿ ವಲಯದಂಚಿನ ದೇವಮಚ್ಚಿ (ನೊಖ್ಯ) ಗ್ರಾಮದ ರಸ್ತೆಯಲ್ಲಿ ಕಾಡಾನೆ ದಾಳಿಗೆ ವೃದ್ದರೊಬ್ಬರು ಸಾವನ್ನಪ್ಪಿರುವ ಘಟನೆ ನಡೆದಿದೆ.
ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಆನೆಚೌಕೂರು ವನ್ಯಜೀವಿ ವಲಯದಂಚಿನ ದೇವಮಚ್ಚಿ (ನೊಖ್ಯ) ಗ್ರಾಮದ ಕಿಟ್ಟಾರ ಪುತ್ರ ಮಾಣಿಕ್ಯ ಅಲಿಯಾಸ್ ನಾಣು(81) ಮೃತಪಟ್ಟವರು.ಶುಕ್ರವಾರ ಮಾಣಿಕ್ಯರು ತಿತಿಮತಿಗೆ ಬಂದು ಗ್ರಾಮಕ್ಕೆ ವಾಪಾಸ್ ಹೋಗುವ ವೇಳೆ ಆನೆ ದಾಳಿ ನಡೆಸಿ ಕೊಂದು ಹಾಕಿದೆ.
ಇದನ್ನೂ ಓದಿ : ಕೋವಿಡ್ ವಿಚಾರದಲ್ಲಿ ಸರ್ಕಾರ ಎಡವಿದ್ದರಿಂದ ಲಕ್ಷಾಂತರ ಮಂದಿ ಜೀವ ಕಳೆದುಕೊಂಡಿದ್ದಾರೆ
ಘಟನಾ ಸ್ಥಳಕ್ಕೆ ನಾಗರಹೊಳೆ ಉದ್ಯಾನದ ಮುಖ್ಯಸ್ಥ ಡಿ.ಮಹೇಶ್‌ಕುಮಾರ್, ಎ.ಸಿ.ಎಫ್.ಸತೀಶ್, ಆರ್.ಎಫ್.ಓ. ಕಿರಣ್‌ಕುಮಾರ್ ವಿನೋದಕುಮಾರ್.-ಉಪ ವಲಯ ಅರಣ್ಯಾಧಿಕಾರಿ ಮತ್ತು ಸಿಬ್ಬಂದಿ ವರ್ಗದವರು ಭೇಟಿ ನೀಡಿದ್ದರು.
ಇಲಾಖಾವತಿಯಿಂದ ಮೃತರ ಪತ್ನಿ ಕಮಲರಿಗೆ ಡಿ.ಸಿ.ಎಫ್.ಮಹೇಶ್ ಕುಮಾರ್ ಎರಡು ಲಕ್ಷ ರೂಪಾಯಿಗಳ ಚೆಕ್ಕನ್ನು ವಿತರಿಸಿ, ಉಳಿದ 5.5 ಲಕ್ಷರೂ ಪರಿಹಾರವನ್ನು ಶೀಘ್ರ ಮಂಜೂರು ಮಾಡಿಸಿಕೊಡುವುದಾಗಿ ಭರವಸೆ ಇತ್ತರು.