Advertisement

ನಾಗರಹೊಳೆ ಉದ್ಯಾನದಲ್ಲಿ ಕಾಡುಪ್ರಾಣಿ ಬೇಟೆ : ಐವರ ಬಂಧನ, ಏಳುಮಂದಿ ಪರಾರಿ

08:38 PM Apr 04, 2022 | Team Udayavani |

ಹುಣಸೂರು : ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಕಡವೆ ಮತ್ತು ಹೆಣ್ಣು ಕೂರೆ (ಮೂಸಿಕ ಜಿಂಕೆ)ಯನ್ನು ಬೇಟೆಯಾಡುತ್ತಿದ್ದ ಹನ್ನೆರಡು ಮಂದಿಯಲ್ಲಿ ಐದು ಮಂದಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಏಳು ಮಂದಿ ಪರಾರಿಯಾಗಿದ್ದು, ಆರೋಪಿಗಳಿಂದ ಕೃತ್ಯಕ್ಕೆ ಬಳಸಿದ್ದ ದ್ವಿಚಕ್ರವಾಹನ ಹಾಗೂ ಪರಿಕರಗಳನ್ನು ಅರಣ್ಯ ಇಲಾಖೆ ಸಿಬ್ಬಂದಿಗಳು ವಶಕ್ಕೆ ಪಡೆದಿದ್ದಾರೆ.

Advertisement

ಉದ್ಯಾನವನದಂಚಿನಲ್ಲೇ ಇರುವ ಪಿರಿಯಾಪಟ್ಟಣ ತಾಲೂಕಿನ ದೊಡ್ಡಹರವೆ ಗ್ರಾಮದ ಎರಡನೇ ಬ್ಲಾಕ್‌ನ ರವಿ, ನಾರಾಯಣ, ನವಿಲೂರು ಗ್ರಾಮದ ಸ್ವಾಮಿ, ಸುದೀಪ್, ಪ್ರೇಮಕುಮಾರ್ ಬಂಧಿತರು.

ಘಟನೆವಿವರ : ನಾಗರಹೊಳೆ ಉದ್ಯಾನವನದ ಹುಣಸೂರು ವನ್ಯಜೀವಿ ವಲಯದ ದೊಡ್ಡಹರವೆ ಮೀಸಲು ಅರಣ್ಯ ಪ್ರದೇಶಕ್ಕೆ ಅಕ್ರಮವಾಗಿ ಅರಣ್ಯ ಪ್ರವೇಶ ಮಾಡಿದ್ದ ಆರೋಪಿಗಳು ಕಡವೆ ಮತ್ತು ಹೆಣ್ಣು ಕೂರೆ (ಮೂಸಿಕ ಜಿಂಕೆ) ಪ್ರಾಣಿಯನ್ನು ಬೇಟೆಯಾಡಿ ತಮ್ಮ ಶುಂಠಿ ಜಮೀನಿನಲ್ಲಿ ಅಕ್ರಮವಾಗಿ ಮಾಂಸವನ್ನು ಸಂಗ್ರಹಿಸಿಟ್ಟಿರುವ ಬಗ್ಗೆ ಖಚಿತ ಮಾಹಿತಿಯ ಮೇರೆಗೆ ಹುಣಸೂರು ಡಿಸಿಎಫ್ ಹಾಗೂ ಎಸಿಎಫ್ ಅವರ ಮಾರ್ಗದರ್ಶನದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿಗಳು ಶುಂಠಿ ಜಮೀನಿನಲ್ಲಿದ್ದ ಮನೆ ಮೇಲೆ ದಾಳಿ ನಡೆಸಿದ್ದಾರೆ ಈ ವೇಳೆ ಐವರು ಆರೋಪಿಗಳು ಸಿಕ್ಕಿ ಬಿದ್ದಿದ್ದಾರೆ, ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಉಳಿದ ಏಳುಮಂದಿ ಸ್ಥಳದಿಂದ ಪರಾರಿಯಾಗಿದ್ದಾರೆ.

ಮಾಂಸ, ಬಂದೂಕು -ಬೈಕ್, ಪರಿಕರ ವಶ : ಬಂಧಿತರಿಂದ ಕೃತ್ಯಕ್ಕೆ ಬಳಸಿದ್ದ 5 ದ್ವಿಚಕ್ರ ವಾಹನಗಳು, ಎರಡು ಸಿಂಗಲ್ ಬ್ಯಾರಲ್ ಬಂದೂಕುಗಳು, ಬ್ಯಾಟರಿಗಳು, ಕೃತ್ಯಕ್ಕೆ ಬಳಸಿದ್ದ ಪರಿಕರಗಳು ಹಾಗೂ ಕಡವೆ ಮಾಂಸ ಮತ್ತು ಹೆಣ್ಣು ಕೂರೆ (ಮೂಸಿಕ ಜಿಂಕೆ)ಯ ಕಳೆಬರವನ್ನು ವಶ ಪಡಿಸಿಕೊಳ್ಳಲಾಗಿದೆ.

ಇದನ್ನೂ ಓದಿ : ಐಪಿಎಲ್ ಕ್ರಿಕೆಟ್ ಬೆಟ್ಟಿಂಗ್ : ಸಿಸಿಬಿ ಪೊಲೀಸರಿಂದ ಬೆಳಗಾವಿಯಲ್ಲಿ ಬುಕ್ಕಿಯ ಬಂಧನ

Advertisement

ತಂಡ ರಚನೆ:
ಕೃತ್ಯದಲ್ಲಿ ಭಾಗಿಯಾಗಿ ತಲೆಮರೆಸಿಕೊಂಡಿರುವ ಏಳು ಮಂದಿ ಆರೋಪಿಗಳನ್ನು ಬಂಧಿಸಲು ತಂಡ ರಚಿಸಿ ಬಲೆ ಬೀಸಲಾಗಿದೆ ಎಂದು ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಸಹಾಯಕ ಉಪ ಸಂರಕ್ಷಣಾಧಿಕಾರಿ ಎ.ವಿ.ಸತೀಶ್ ಉದಯವಾಣಿಗೆ ಮಾಹಿತಿ ನೀಡಿದ್ದಾರೆ.

ಕಾರ್ಯಾಚರಣೆಯಲ್ಲಿ ಆರ್.ಎಫ್.ಓ.ಹನುಮಂತರಾಜು ನೇತೃತ್ವದಲ್ಲಿ ಅರಣ್ಯಾಧಿಕಾರಿಗಳಾದ ಗಣರಾಜ್‌ಪಟಗಾರ್, ಉಪ ಅರಣ್ಯಾಧಿಕಾರಿಗಳಾದ ರಾಮು, ಪ್ರಸನ್ನಕುಮಾರ್, ಅರಣ್ಯ ರಕ್ಷಕ ಮಹೇಶ್ ಹಾಗೂ ಸಿಬ್ಬಂದಿಗಳು ಭಾಗವಹಿಸಿದ್ದರು.

ಹೆಚ್ಚುತ್ತಿರುವ ಕಳ್ಳ ಬೇಟೆ , ವನ್ಯಪ್ರೀಯರ ಆತಂಕ : ಕೆಲವು ವರ್ಷಗಳಿಂದ ಕಳ್ಳ ಬೇಟೆ ಪ್ರಕರಣಗಳು ಕಡಿಮೆಯಾಗಿದ್ದವು, ಕಳೆದ ಆರು ತಿಂಗಳಿನಿಂದೀಚೆಗೆ ಎರಡು ಹುಲಿ ಬೇಟೆ ಸೇರಿದಂತೆ ೮ ಪ್ರಕರಣಗಳು ಪತ್ತೆಯಾಗಿರುವುದು ಪ್ರಾಣಿಪ್ರೀಯರಲ್ಲಿ ಆತಂಕ ಮೂಡಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next