Advertisement

Nagamangala ಗಲಭೆಗೆ ಕೇರಳ, ಪಿಎಫ್‌ಐ ನಂಟಿನ ಮಾಹಿತಿ ಇಲ್ಲ: ಎಸ್ಪಿ

11:56 PM Sep 17, 2024 | Team Udayavani |

ಮಂಡ್ಯ: ನಾಗಮಂಗಲ ಗಲಭೆ ಪ್ರಕರಣಕ್ಕೆ ಸಂಬಂಧಿಸಿ ಇದುವರೆಗೂ 24 ಪ್ರಕರಣ ದಾಖಲಿಸಿ 55 ಮಂದಿಯನ್ನು ಬಂಧಿಸಲಾಗಿದೆ. ಅಲ್ಲದೆ 100ಕ್ಕೂ ಹೆಚ್ಚು ಜನರ ಗುರುತು ಪತ್ತೆ ಹಚ್ಚಲಾಗಿದೆ ಎಂದು ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ ಸುದ್ದಿಗಾರರಿಗೆ ತಿಳಿಸಿದರು.

Advertisement

24 ಪ್ರಕರಣದಲ್ಲಿ ಮೊದಲು ಸುಮೋಟೊ ಕೇಸ್‌, ಪೊಲೀಸರ ಕರ್ತವ್ಯಕ್ಕೆ ಅಡ್ಡಿ, ಅಕ್ರಮ ಗುಂಪುಗಾರಿಕೆ, ಅಂಗಡಿ-ಮುಂಗಟ್ಟಿಗೆ ಬೆಂಕಿ, ಬೈಕ್‌ಗೆ ಬೆಂಕಿ, ಕಾನೂನು ಸುವ್ಯವಸ್ಥೆಗೆ ತೊಂದರೆ ಸೇರಿದಂತೆ ವಿವಿಧ ಸೆಕ್ಷನ್‌ಗಳಡಿ ಪ್ರಕರಣ ದಾಖಲಿಸಿ ಬಂಧಿ ಸಲಾಗಿದೆ. ಗಲಭೆಗೆ ಸಂಬಂಧಿಸಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳನ್ನು ಪತ್ತೆ ಹಚ್ಚಲಾಗುತ್ತಿದೆ ಎಂದರು.

ಘಟನೆಗೆ ಕೇರಳ ಹಾಗೂ ಪಿಎಫ್‌ಐ ನಂಟಿನ ಬಗ್ಗೆ ಪ್ರತಿಕ್ರಿಯಿಸಿ, 55 ಆರೋಪಿಗಳ ಪೈಕಿ ಇಬ್ಬರು ಆರೋಪಿಗಳ ಸ್ವಂತ ವಿಳಾಸ ಕೇರಳವಾಗಿದೆ. ಕಳೆದ 18 ವರ್ಷದಿಂದ ನಾಗಮಂಗಲದಲ್ಲಿ ವಾಸವಾಗಿದ್ದಾರೆ. ಅವರ ಕುಟುಂಬಗಳು ಕೇರಳದಲ್ಲಿವೆ. ಪರಿಶೀಲನೆ ವೇಳೆ ಪಿಎಫ್‌ಐ ಸಂಪರ್ಕದ ಯಾವುದೇ ಮಾಹಿತಿ ಕಂಡುಬಂದಿಲ್ಲ. ಪ್ರಕರಣದಲ್ಲಿ ಅಕ್ರಮ ಬಾಂಗ್ಲಾದೇಶ ವಲಸಿಗರಿದ್ದರೆ ಪರಿಶೀಲಿಸುತ್ತೇವೆ. ನಮಗೆ ಸಿಕ್ಕಿರುವ ಮಾಹಿತಿ ಪ್ರಕಾರ ಬಾಂಗ್ಲಾದೇಶದವರು ಯಾರೂ ಇಲ್ಲ ಎಂದರು.

ಬಂಧಿತರ ನೋಡಲು ಜೈಲಿಗೆ ಬಂದ ಪೋಷಕರು
ಮಂಡ್ಯ: ಗಲಭೆ ಪ್ರಕರಣದಲ್ಲಿ ಬಂ ಧಿತರಾಗಿರುವ ಬದ್ರಿಕೊಪ್ಪಲು ಗ್ರಾಮಸ್ಥರನ್ನು ಭೇಟಿ ಮಾಡಲು ಮಂಗಳವಾರ ಕುಟುಂಬದವರೆಲ್ಲ ಜತೆ ಯಾಗಿ ಮಂಡ್ಯ ಜಿಲ್ಲಾ ಕಾರಾಗೃಹಕ್ಕೆ ಬಂದಿದ್ದರು.

ಸೆ. 11ರಂದು ಗಣೇಶಮೂರ್ತಿ ವಿಸರ್ಜನೆ ಮೆರವಣಿಗೆಯಲ್ಲಿ ಗಲಭೆ ಉಂಟಾದ ಹಿನ್ನೆಲೆಯಲ್ಲಿ ಗಣೇಶ ಮೂರ್ತಿ ಪ್ರತಿಷ್ಠಾಪಿಸಿದ್ದ 13 ಯುವಕರನ್ನು ಪೊಲೀಸರು ಬಂಧಿ ಸಿದ್ದರು. 14 ದಿನ ನ್ಯಾಯಾಂಗ ಬಂಧನದ ಹಿನ್ನೆಲೆಯಲ್ಲಿ ಎಲ್ಲರನ್ನೂ ಮಂಡ್ಯ ಕಾರಾಗೃಹದಲ್ಲಿರಿಸಲಾಗಿದೆ.

Advertisement

ತಮ್ಮ ಮಕ್ಕಳು ಹಾಗೂ ಪತಿಯನ್ನು ಭೇಟಿ ಮಾಡಲು ಮಾಜಿ ಶಾಸಕ ಕೆ. ಸುರೇಶ್‌ ಗೌಡ ಬಸ್‌ ವ್ಯವಸ್ಥೆ ಮಾಡಿದ್ದರು. ಜೈಲಿನಲ್ಲಿ ತಮ್ಮ ಮಕ್ಕಳನ್ನು ನೋಡಿದ ಪೋಷಕರು ಕಣ್ಣೀರಿಟ್ಟರು.

ಬಂಧಿತ ರಾಮಚಂದ್ರು ಅವರ ಪತ್ನಿ ಪವಿತ್ರಾ ಮಾತನಾಡಿ, ನನ್ನ ಮಗ ಒಂದು ದಿನವೂ ತಂದೆಯನ್ನು ಬಿಟ್ಟು ಇರುತ್ತಿರಲಿಲ್ಲ. ಅವರನ್ನು ನೋಡಲೇ ಬೇಕು ಅಂತ ಅಳುತ್ತಿದ್ದ. ಆದ್ದರಿಂದ ಶಾಲೆಗೆ ರಜೆ ಹಾಕಿಸಿ ಕರೆತಂದಿದ್ದೇವೆ. ಗಂಡನನ್ನು ನೋಡಿದ ಮೇಲೆ ನಮಗೆ ಸಮಾಧಾನ, ಧೈರ್ಯ ಬಂದಿದೆ. ಆದರೆ ಅವರಿಗೆ ಮಗನನ್ನು ಮುಟ್ಟಲು ಆಗಲಿಲ್ಲ ಎಂದು ನೋವಾಯಿತೆಂದು ಕಣ್ಣೀರು ಹಾಕಿದರು.

ಮರೆಯಾಗದ ಆತಂಕ
ಗಣೇಶಮೂರ್ತಿ ಪ್ರತಿಷ್ಠಾಪಿಸಿದ್ದ ಬದ್ರಿಕೊಪ್ಪಲಿ ನಲ್ಲಿ ನೀರವ ಮೌನ ಮುಂದುವರಿದಿದೆ. ಬಹಳಷ್ಟು ಯುವಕರು ಬಂಧನದ ಭೀತಿಯಲ್ಲಿ ಊರು ಬಿಟ್ಟಿದ್ದಾರೆ. ಗಲಭೆ ನಡೆದು ವಾರ ಕಳೆದರೂ ಗ್ರಾಮ ಮಾತ್ರ ಇನ್ನೂ ಸಹಜ ಸ್ಥಿತಿಗೆ ಬಂದಿಲ್ಲ.

ನಾಗಮಂಗಲದ ಅಹಿತರ ಘಟನೆಯನ್ನು ಎಲ್ಲ ಆಯಾಮಗಳಿಂದ ತನಿಖೆ ನಡೆಸಲಾಗುತ್ತಿದ್ದು, ತನಿಖಾ ವರದಿ ಬಂದ ಅನಂತರ ಹೆಚ್ಚಿನ ಕ್ರಮ ಕೈಗೊಳ್ಳಲಾಗುವುದು . ಈಗಾಗಲೇ ತಪ್ಪಿತಸ್ಥ ಪೊಲೀಸ್‌ ಅಧಿ ಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಶಾಸಕ ಮುನಿರತ್ನ ಅವರನ್ನು ತರಾತುರಿಯಲ್ಲಿ ಬಂಧಿಸಿಲ್ಲ. ದೂರು ದಾಖಲಾದ ಅನಂತರ ಬಂಧನವಾಗಿದೆ. ಆದರೆ ಯಾದಗಿರಿ ಶಾಸಕರ ವಿರುದ್ಧದ ದೂರಿಗೂ ಇದಕ್ಕೂ ವ್ಯತ್ಯಾಸವಿದೆ .
– ಡಾ| ಜಿ. ಪರಮೇಶ್ವರ, ಗೃಹ ಸಚಿವ

Advertisement

Udayavani is now on Telegram. Click here to join our channel and stay updated with the latest news.

Next