Advertisement

Nagamangala ತನಿಖೆ ಎನ್‌ಐಎಗೆ ವಹಿಸಲಿ: ಸಿ.ಟಿ. ರವಿ

11:34 PM Sep 16, 2024 | Team Udayavani |

ಮೈಸೂರು: ನಾಗಮಂಗಲದಲ್ಲಿ ಗಲಭೆ ಪೂರ್ವನಿಯೋಜಿತವಾಗಿದ್ದು ಪ್ರಕರಣದ ಸಂಪೂರ್ಣ ತನಿಖೆಯನ್ನು ಎನ್‌ಐಎಗೆ ವಹಿಸ ಬೇಕೆಂದು ವಿಧಾನ ಪರಿಷತ್‌ ಸದಸ್ಯ ಸಿ.ಟಿ. ರವಿ ಆಗ್ರಹಿಸಿದರು.

Advertisement

ಸುದ್ದಿಗಾರರೊಂದಿಗೆ ಮಾತನಾಡಿ, ಪ್ರಕರಣದ ಹಿಂದೆ ಹೊರಗಿನ ಶಕ್ತಿ ಕೆಲಸ ಮಾಡಿರುವ ಅನುಮಾನವಿತ್ತು. ಅದರಂತೆ ಕೇರಳದವರ ಹೆಸರು ಬಹಿರಂಗವಾಗುವ ಮೂಲಕ ಇದು ಸಾಬೀತಾಗಿದೆ. ಗಲಾಟೆಗಿಂತ ಹೆಚ್ಚಾಗಿ ಭಯದ ವಾತಾವರಣ ನಿರ್ಮಿಸಬೇಕು, ಆತಂಕ ಸೃಷ್ಟಿ ಮಾಡಬೇಕು, ಗಲಭೆ ನಡೆಸಿ ನಷ್ಟವುಂಟು ಮಾಡ ಬೇಕೆಂ ಬುದು ಗಲಭೆಯ ಉದ್ದೇಶವಾಗಿದೆ ಎಂದರು.

ಭಯೋತ್ಪಾದನ ಕೃತ್ಯದ ತರಬೇತಿ
ಚಿಕ್ಕಮಗಳೂರಿನಲ್ಲಿ ಪ್ಯಾಲೆಸ್ತೇನ್‌ ಬಾವುಟ ಹಾರಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿ, ಮಲೆನಾಡು ಭಯೋತ್ಪಾದಕ ಕೃತ್ಯವೆಸಗಲು ಇಲ್ಲಿ ತರಬೇತಿ ನೀಡಲಾಗುತ್ತಿದೆ. ಈ ಹಿಂದೆ ಕೊಪ್ಪದಲ್ಲಿ ಯಾಸೀನ್‌ ಭಟ್ಕಳ್‌ ನೇತೃತ್ವದಲ್ಲಿ ಭಯೋತ್ಪಾದಕ ತರಬೇತಿ ಶಿಬಿರ ನಡೆಸಲಾಗಿತ್ತು. ಇದು ದೇಶಕ್ಕೆ ಅಪಾಯಕಾರಿಯಾಗಿದ್ದು ಇದರ ಹಿಂದಿನ ಜಾಲವನ್ನು ಪತ್ತೆ ಹಚ್ಚಬೇಕಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next