ಮಂಡ್ಯ: ಜಿಲ್ಲೆಯಲ್ಲಿ ಹೆಚ್ಚು ಜೆಡಿಎಸ್ ಪ್ರಾಬಲ್ಯ ಹೊಂದಿರುವ ನಾಗಮಂಗಲ ವಿಧಾನಸಭಾ ಕ್ಷೇತ್ರವನ್ನು ಮತ್ತಷ್ಟು ಬಲಪಡಿಸುವ ಮೂಲಕ ಮಾಜಿ ಸಚಿವ ಎನ್.ಚಲುವರಾಯಸ್ವಾಮಿ ಕಟ್ಟಿ ಹಾಕಲು ದಳಪತಿಗಳು ಪ್ಲ್ಯಾನ್ ರೆಡಿ ಮಾಡುತ್ತಿದ್ದಾರೆ.
ಕಳೆದ 2019ರ ಲೋಕಸಭೆ ಚುನಾವಣೆಯಲ್ಲಿಮೈತ್ರಿ ಅಭ್ಯರ್ಥಿ ಯಾಗಿದ್ದ ನಿಖೀಲ್‌ಗೆ ಇಡೀ ಜಿಲ್ಲೆಯನಾಗಮಂಗಲದಲ್ಲಿ ಮುನ್ನಡೆ ತಂದು ಕೊಟ್ಟಿತ್ತು. ಅದೇಹಿನ್ನೆಲೆ 2023ರ ವಿಧಾನಸಭಾ ಚುನಾ ವಣೆ ಯಲ್ಲೂ ಕ್ಷೇತ್ರ ಕೈ ತಪ್ಪದಂತೆ ನೋಡಿಕೊಳ್ಳಲು ದಳಪತಿಗಳು ಸಜ್ಜಾಗಿದ್ದಾರೆ.
ಎಚ್‌ಡಿಡಿ ಪ್ರಾಬಲ್ಯ: ನಾಗಮಂಗಲದಲ್ಲಿ ಅತಿ ಹೆಚ್ಚು ಒಕ್ಕಲಿಗರಿ ರುವ ಕ್ಷೇತ್ರವಾಗಿರುವುದರಿಂದ ಮಾಜಿಪ್ರಧಾನಿ ಎಚ್.ಡಿ.ದೇವೇ ಗೌಡರ ಪ್ರಾಬಲ್ಯ ಹೆಚ್ಚಿದೆ.ದೇವೇಗೌಡರ ಹಿಡಿತ ಇರುವುದರಿಂದ ಜೆಡಿಎಸ್‌ಅಭ್ಯರ್ಥಿಗಳು ಸುಲಭವಾಗಿ ಗೆಲ್ಲಲಿದ್ದಾರೆ ಎಂಬಮಾತು ಕೇಳಿ ಬರುತ್ತಿವೆ. ದೇವೇಗೌಡರು ತನ್ನದೇ ಆದವೋಟ್ ಬ್ಯಾಂಕ್ ಹೊಂದಿದ್ದು, ಅಭ್ಯರ್ಥಿಗಳಿಗೆಸಹಕಾರಿಯಾಗಲಿದೆ ಎನ್ನಲಾಗುತ್ತಿದೆ. ಅದಕ್ಕಾಗಿ ಎಚ್.ಡಿ.ದೇವೇಗೌಡರು ಕ್ಷೇತ್ರಕ್ಕೆ ಭೇಟಿ ನೀಡಿ ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸ ಮಾಡುತ್ತಿದ್ದಾರೆ.
ಚಲುವರಾಯಸ್ವಾಮಿ ಆ್ಯಕ್ಟಿವ್: ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧಿಸಲು ಚಲುವರಾಯ ಸ್ವಾಮಿ ಸಿದ್ಧತೆ ಮಾಡಿಕೊಂಡಿದ್ದು,ಅದಕ್ಕಾಗಿ ಕ್ಷೇತ್ರದಲ್ಲಿ ಹೆಚ್ಚು ಕ್ರಿಯಾಶೀಲರಾಗಿ ಓಡಾಡುತ್ತಿದ್ದಾರೆ. ಕಳೆದ ಬಾರಿ ಸೋತ ಹಿನ್ನೆಲೆಯಲ್ಲಿ ದಳ ಪತಿಗಳಿಗೆ ಸೆಡ್ಡು ಹೊಡೆಯಲು ಮುಂದಾಗಿದ್ದಾರೆ. ಅದಕ್ಕಾಗಿ ಕಾರ್ಯಕರ್ತರನ್ನು ಸಜ್ಜುಗೊಳಿಸಲುಮುಂದಾಗಿದ್ದಾರೆ. ಇದಕ್ಕೆ ಟಕ್ಕರ್ ನೀಡಲು ದಳಪತಿಗಳು ಕ್ಷೇತ್ರಕ್ಕೆ ಲಗ್ಗೆ ಇಡುತ್ತಿದ್ದಾರೆ.
ಸುರೇಶ್‌ಗೌಡಗೆ ಟಿಕೆಟ್?: ಜೆಡಿಎಸ್ ಟಿಕೆಟ್‌ಗಾಗಿ ಹಾಲಿ ಶಾಸಕ ಕೆ.ಸುರೇಶ್‌ಗೌಡ, ಮಾಜಿ ಸಂಸದ ಎಲ್. ಆರ್.ಶಿವರಾಮೇಗೌಡ ನಡುವೆ ಪೈಪೋಟಿ ನಡೆಯುತ್ತಿತ್ತು. ನಂತರ ಎಲ್.ಆರ್.ಶಿವರಾಮೇ ಗೌಡರನ್ನುಪಕ್ಷದಿಂದ ಉಚ್ಛಾಟನೆ ಮಾಡಿದ್ದರಿಂದ ಸುರೇಶ್‌ಗೌಡರಿಗೆ ದಾರಿ ಸುಗಮವಾಗಿದೆ. ಮುಂದಿನ ಚುನಾವಣೆಯಲ್ಲಿ ಸುರೇಶ್‌ಗೌಡರಿಗೆ ಟಿಕೆಟ್ ನೀಡು ವುದು ಬಹುತೇಕ ನಿಚ್ಚಳವಾಗಿದೆ ಎನ್ನಲಾಗುತ್ತಿದೆ. ಅಲ್ಲದೆ, ಮತ್ತೂಬ್ಬ ಒಕ್ಕಲಿಗರ ಸಂಘದ ನಿರ್ದೇಶಕ ಹಾಗೂಮನ್‌ಮುಲ್ ನಿರ್ದೇ ಶಕ ನೆಲ್ಲಿಗೆರೆ ಬಾಲು ಕೂಡ ರೇಸ್‌ನಲ್ಲಿರುವುದರಿಂದ ಮಾತುಕತೆ ಮೂಲಕ ಬಗೆಹರಿಸುವ ಸಾಧ್ಯತೆ ಇದೆ.
ಚಲುವರಾಯಸ್ವಾಮಿ ಕ್ಷೇತ್ರ ಬದಲಿಸುತ್ತಾರಾ? :
ನಾಗಮಂಗಲದಲ್ಲಿ ದಳಪತಿಗಳು ಹೆಣೆಯುತ್ತಿರುವ ತಂತ್ರಕ್ಕೆ ಪ್ರತಿತಂತ್ರ ಹೆಣೆಯಲು ಮಾಜಿ ಸಚಿವ ಎನ್.ಚಲುವರಾಯಸ್ವಾಮಿಮುಂದಾಗಿದ್ದಾರೆ. ಒಕ್ಕಲಿಗರ ಭದ್ರಕೋಟೆಯಾಗಿರುವ ನಾಗಮಂಗಲದಲ್ಲಿ ದೇವೇಗೌಡರ ಪ್ರಭಾವ ಹೆಚ್ಚಾಗಿರುವುದರಿಂದ ಚಲುವರಾಯಸ್ವಾಮಿಗೆ ಕ್ಷೇತ್ರ ಕಗ್ಗಂಟಾಗಲಿದೆಎಂಬ ಮಾತು ಕೇಳಿ ಬರುತ್ತಿವೆ. ಇದರಿಂದಚಲುವರಾಯಸ್ವಾಮಿ ಕ್ಷೇತ್ರ ಬದಲಿಸಬಹುದು ಎಂಬ ಚರ್ಚೆ ನಡೆಯುತ್ತಿವೆ.
ಎಚ್‌ಡಿಡಿ, ಎಚ್‌ಡಿಕೆ ನಿರಂತರ ಕ್ಷೇತ್ರ ಭೇಟಿ : ಕ್ಷೇತ್ರದಲ್ಲಿ ಲೋಕಸಭೆ ಚುನಾವಣೆಯಲ್ಲಿ 7ತಾಲೂಕುಗಳಲ್ಲಿ ಸಂಸದೆ ಸುಮಲತಾಅಂಬರೀಷ್‌ಗೆ ಮುನ್ನಡೆ ಇತ್ತು. ಆದರೆ, ನಾಗಮಂಗಲಕ್ಷೇತ್ರದಲ್ಲಿ ನಿಖೀಲ್‌ಕುಮಾರಸ್ವಾಮಿಗೆ 2 ಸಾವಿರ ಮತಗಳ ಮುನ್ನಡೆ ತಂದುಕೊಟ್ಟಿತ್ತು. ಇದರಿಂದ ಕ್ಷೇತ್ರವನ್ನು ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕೈತಪ್ಪದಂತೆ ನೋಡಿಕೊಳ್ಳಲು ದಳಪತಿಗಳು ಮುಂದಾಗುತ್ತಿದ್ದಾರೆ. ಅದಕ್ಕಾಗಿ ಕ್ಷೇತ್ರಕ್ಕೆ ನಿರಂತರವಾಗಿ ಭೇಟಿ ನೀಡುತ್ತಿರುವುದು ರಾಜಕೀಯ ವಲಯದಲ್ಲಿ ಚರ್ಚೆಯಾಗುತ್ತಿದೆ.
– ಎಚ್.ಶಿವರಾಜು