Advertisement
ಸುದ್ದಿಗಾರರ ಜತೆಗೆ ಮಾತನಾಡಿ, ಗುಂಪು ಘರ್ಷಣೆಗಳಾದಾಗ ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ಸಿಸಿಟಿವಿ ನೋಡಿಯೋ ಗುಂಪಲ್ಲಿದ್ದರು ಎಂಬ ಕಾರಣಕ್ಕೋ ಬಂ ಧಿಸಿರುತ್ತಾರೆ. ಅಮಾಯಕರಿದ್ದರೆ ಖಂಡಿತವಾಗಿ ಚಾರ್ಜ್‌ಶೀಟ್ ವೇಳೆ ಕೈಬಿಡಲಾಗುವುದು ಎಂದರು. ಸೋಮವಾರ ಮುಸ್ಲಿಮರ ಹಬ್ಬವಿರುವುದರಿಂದ ಗಣಪತಿ ವಿಸರ್ಜನೆ ಬೇಡ ಎಂದಿದ್ದೇವೆ ಎಂದರು. ನಾಗಮಂಗಲ ಬಹುತೇಕ ಶಾಂತವಾಗಿದ್ದು, ಶನಿವಾರ ಶೇ. 80ರಷ್ಟು ಅಂಗಡಿ-ಮುಂಗಟ್ಟುಗಳು ತೆರೆದಿವೆ. ಜನ ಜೀವನ ಸಹಜ ಸ್ಥಿತಿಗೆ ಮರಳಿತ್ತು.
ಬೆಂಗಳೂರು: ನಾಗಮಂಗಲ ಗಲಭೆ ಪ್ರಕರಣದಲ್ಲಿ ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಕೈವಾಡವೂ ಇರಬಹುದು. ವಾರಕ್ಕೊಮ್ಮೆ ಬಂದು ಏನೇನೋ ಸಂದೇಶ ಕೊಟ್ಟು ಹೋಗುತ್ತಿರುತ್ತಾರೆ. ಅವರೂ ಕಾರಣ ಇರಬಹುದು ಎಂದು ಮಾಜಿ ಸಂಸದ ಡಿ.ಕೆ. ಸುರೇಶ್ ಆರೋಪಿಸಿದರು. ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕೆಲವರಿಗೆ ಡಿ.ಕೆ. ಬ್ರದರ್ಸ್ ನೆನಪು ಮಾಡಿಕೊಳ್ಳದಿದ್ದರೆ ಒಂದೂ ಆಗುವುದಿಲ್ಲ, ಎರಡೂ ಆಗುವುದಿಲ್ಲ. ಮೂರನೇಯದಂತೂ ವರ್ಕ್ ಆಗುವುದೇ ಇಲ್ಲ ಎಂದು ಟೀಕಿಸಿದರು.
Related Articles
ಬೆಂಗಳೂರು: ಡಿಕೆ ಬ್ರದರ್‌ಗಳ ಹಿನ್ನೆಲೆ ಏನು ಎಂಬುದು ಇಡೀ ಜಗತ್ತಿಗೇ ಗೊತ್ತಿದೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಹೇಳುವ ಮೂಲಕ ನಾಗಮಂಗಲ ಗಲಭೆ ಹಿಂದೆ ಎಚ್‌ಡಿಕೆ ಇದ್ದಾರೆ ಎಂಬ ಡಿ.ಕೆ. ಸುರೇಶ್ ಆರೋಪಕ್ಕೆ ತಿರುಗೇಟು ನೀಡಿದರು.
Advertisement
ವರದಿಗಾರರ ಜತೆ ಮಾತನಾಡಿದ ಅವರು, ಡಿ.ಕೆ. ಸುರೇಶ್ ಹಿನ್ನೆಲೆ ಏನು ಎಂದು ಗೊತ್ತಿಲ್ಲವೇ? ಅಣ್ಣ – ತಮ್ಮಂದಿರು ಯಾವ ಮಾರ್ಗದಲ್ಲಿ ಬಂದಿದ್ದಾರೆ. ಯಾರಿಗೆ ಹೇಗೆಲ್ಲ ಬೆದರಿಕೆ ಹಾಕಿದ್ದಾರೆ. ಯಾರ ಯಾರ ಆಸ್ತಿಗಳನ್ನು ಲಪಟಾಯಿಸಿ ಲೂಟಿವೂಡಿದ್ದಾರೆ ಎಂಬುದೆಲ್ಲ ಜನರಿಗೆ ಗೊತ್ತಿದೆ. ಅಂತವರ ಬಗ್ಗೆ ನಾನು ಹೇಳಿಕೆ ಕೊಡಬೇಕಾ? ಎಂದು ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.