Advertisement
ಪರಿಸ್ಥಿತಿ ಹತೋಟಿಯಲ್ಲಿದ್ದರೂ ಸೆ. 14ರ ವರೆಗೆ ನಿಷೇಧಾಜ್ಞೆ ವಿಧಿಸಲಾಗಿದೆ. ಗಲಭೆಯಲ್ಲಿ 6 ಅಂಗಡಿಗಳು ಸುಟ್ಟು ಕರಕಲಾಗಿವೆ. 7 ಬೈಕ್ ಹಾನಿಗೀಡಾಗಿವೆ. 1 ಕಾರಿನ ಗಾಜು ಪುಡಿಗೈಯಲಾಗಿದೆ.
Related Articles
ಬುಧವಾರ ರಾತ್ರಿಯೇ ಪೊಲೀಸರು ಗಲಭೆಯಲ್ಲಿ ಭಾಗಿಯಾಗಿದ್ದ ಹಾಗೂ ಅನುಮಾನ ಇರುವವರ ಮನೆಗಳಿಗೆ ನುಗ್ಗಿ ಕರೆದೊಯ್ದಿ ದ್ದಾರೆ. ಇದರಿಂದ ಆತಂಕಗೊಂಡ ಬಂಧಿತರ ಹಿಂದೂ-ಮುಸ್ಲಿಂ ಸಮುದಾಯದ ಮಹಿಳೆ ಯರು ಪ್ರತ್ಯೇಕವಾಗಿ ಗುರುವಾರ ಬೆಳಗ್ಗೆಯೇ ಠಾಣೆ ಮುಂದೆ ಜಮಾಯಿಸಿ ಪ್ರತಿಭಟನೆ ನಡೆಸಿದರು. ನಮ್ಮ ಮಕ್ಕಳು ಯಾವುದೇ ತಪ್ಪು ಮಾಡಿಲ್ಲ. ಕೂಡಲೇ ಬಿಡುಗಡೆ ಮಾಡಿ ಎಂದು ಆಗ್ರಹಿಸಿದರು.
Advertisement
ಅಂಗಡಿ-ಮುಂಗಟ್ಟು ಬಂದ್ಘರ್ಷಣೆಯಿಂದ ಭಯಭೀತರಾಗಿರುವ ಸಾರ್ವಜನಿಕರು ಹಾಗೂ ಅಂಗಡಿ- ಮುಂಗಟ್ಟುಗಳ ಮಾಲಕರು ಅಂಗಡಿ ತೆರೆಯಲು ಮುಂದಾಗಿಲ್ಲ. ಪಟ್ಟಣದಲ್ಲಿ ಬಂದ್ ವಾತಾವರಣ ನಿರ್ಮಾಣವಾಗಿದೆ. ಪಟ್ಟಣ ವ್ಯಾಪ್ತಿಯ ಶಾಲಾ-ಕಾಲೇಜು, ಅಂಗನವಾಡಿ ಕೇಂದ್ರಗಳಿಗೆ ರಜೆ ಘೋಷಿಸಲಾಗಿದೆ. ನಾಗಮಂಗಲ ಗಲಭೆಗೆ ರಾಜಕೀಯ ಕದನದ ಕಿಚ್ಚು:
ಗಣೇಶ ಮೂರ್ತಿ ವಿಸರ್ಜನೆ ವೇಳೆ ಮಂಡ್ಯ ಜಿಲ್ಲೆಯ ನಾಗಮಂಗಲದಲ್ಲಿ ಕೋಮುಗಲಭೆ ನಡೆದ ಬೆನ್ನಲ್ಲೇ, ರಾಜಕೀಯ ಸಂಘರ್ಷ ಆರಂಭವಾಗಿದೆ. ಹಿಂಸಾಚಾರಕ್ಕೆ ಕಾರಣವಾದವರ ವಿರುದ್ಧ ಕ್ರಮ ಖಚಿತ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಗೃಹಸಚಿವ ಪರಮೇಶ್ವರ್ ಇದು ಸಾಮಾನ್ಯ ಘಟನೆ ಎಂದಿರುವುದು ಬಿಜೆಪಿ, ಜೆಡಿಎಸ್ ಪಕ್ಷಗಳನ್ನು ರೊಚ್ಚಿಗೆಬ್ಬಿಸಿದೆ. ಇದು ಅತಿಯಾದ ತುಷ್ಟೀಕರಣದ ಫಲ ಎಂದಿವೆ. ಎನ್‌ಐಎ ತನಿಖೆಯಾಗಲಿ: ಬಿಜೆಪಿ
ಕೋಮುಗಲಭೆ ಹಿನ್ನೆಲೆಯಲ್ಲಿ ರಾಜ್ಯ ಸರಕಾರದ ವಿರುದ್ಧ ಬಿಜೆಪಿ ಸಿಡಿದೆದ್ದಿದೆ. ಇದೇನು ನಾಗಮಂಗಲವೋ, ಪಾಕಿಸ್ಥಾನವೋ ಎಂದು ಬಿಜೆಪಿ ನಾಯಕ ವಿ. ಸುನಿಲ್ ಕುಮಾರ್ ಪ್ರಶ್ನಿಸಿದ್ದಾರೆ. ಪ್ರಕರಣದ ಹಿಂದೆ ಕಾಂಗ್ರೆಸ್ ಇರುವ ಸಾಧ್ಯತೆಯಿದ್ದು ಎನ್‌ಐಎಯಿಂದಲೇ ತನಿಖೆ ಮಾಡಿಸಬೇಕು ಎಂದು ಶೋಭಾ ಕರಂದ್ಲಾಜೆ ಹೇಳಿದ್ದಾರೆ. ಪೂರ್ವಯೋಜಿತ ಕೃತ್ಯ ಎಂದು ಪ್ರಹ್ಲಾದ್ ಜೋಶಿ ಕಿಡಿಕಾರಿದ್ದಾರೆ.