Advertisement

“ನಾಗಮಂಡಲ’ಮಧ್ಯದೊಳಗೆ…

04:00 PM May 19, 2018 | |

ಟಿ.ಎಸ್‌. ನಾಗಾಭರಣ ನಿರ್ದೇಶನದ ನಾಗಮಂಗಲ ಸಿನಿಮಾವನ್ನು ಬಹುತೇಕರು ನೋಡಿರುತ್ತಾರೆ. ಅದರ ಪ್ರತಿ ದೃಶ್ಯಗಳು, ಹಾಡುಗಳು, ಹಾವಿನೊಂದಿಗೆ ಸರಸ ಸನ್ನಿವೇಶಗಳೆಲ್ಲ ಕಲಾಪ್ರಿಯರ ಕಣ್ಣಲ್ಲಿ ತಾಜಾ ಆಲ್ಬಮ್ಮಿನಂತಿದೆ. ಇದೇ ಕತೆಯ ನಾಟಕವನ್ನು ನೋಡಿದವರು ಬಹಳ ಕಡಿಮೆ. ಇದು ಆಗಾಗ್ಗೆ ಪ್ರದರ್ಶನಗೊಳ್ಳುತ್ತಿರುತ್ತದೆ. ಮೇ 23ರಂದು ರಂಗಶಂಕರದಲ್ಲಿ ಈ ಸಲ ಪ್ರಯೋಗ ಕಾಣುತ್ತಿದೆ.

Advertisement

  ಆಗಷ್ಟೇ ಮದುವೆಯಾದ ರಾಣಿ ತನ್ನ ಗಂಡನ ಸಾಮೀಪ್ಯವನ್ನು ಸದಾ ಬಯಸುತ್ತಿರುತ್ತಾಳೆ. ಆದರೆ, ಆತ ಮನೆಯಿಂದ ಸದಾ ಹೊರಗೇ ಉಳಿದು ಪರಸ್ತ್ರೀ ಸಹವಾಸ ಮಾಡುತ್ತಿರುತ್ತಾನೆ. ಈ ಹೊತ್ತಿನಲ್ಲಿ ರಾಣಿಯ ವಿರಹವನ್ನು ತಣಿಸುವ ಕೆಲಸವನ್ನು ಒಂದು ಹಾವು ಮಾಡುತ್ತಿರುತ್ತೆ. ಗಿರೀಶ್‌ ಕಾರ್ನಾಡ್‌ ರಚಿಸಿರುವ ನಾಟಕವನ್ನು ಸುನಯನ ಪ್ರೇಮಚಂದರ್‌ ನಿರ್ದೇಶಿಸಿದ್ದಾರೆ. ಲೈರಿಯಾ ಕುರಿಯನ್‌, ನಳಿನಿ ನಾರಾಯಣಿ,  ಶ್ರೀಹರಿ ಅಜಿತ್‌ ಬಣ್ಣ ಹಚ್ಚಿದ್ದಾರೆ.

ಯಾವಾಗ?: ಮೇ 23, ಬುಧವಾರ, ರಾ.7.30
ಎಲ್ಲಿ?: ರಂಗಶಂಕರ, ಜೆ.ಪಿ. ನಗರ
ಪ್ರವೇಶ: 100 ರೂ.

Advertisement

Udayavani is now on Telegram. Click here to join our channel and stay updated with the latest news.

Next