Advertisement

Nagalinga Flowers: ನಿಸರ್ಗದ ವಿಸ್ಮಯ ನಾಗಲಿಂಗ‌ ಪುಷ್ಪ

12:11 PM Feb 25, 2024 | Team Udayavani |

ಹಚ್ಚ ಹಸುರು ಪ್ರದೇಶದಲ್ಲಿ ಈ ಹೂ ಕಂಗೊಳಿಸುತ್ತಲಿ, ಕಡುಗೆಂಪು ಎಸಳು ಅದರೊಳಗೆ ತಾವರೆಯ ಮೈ ಅಂದ, ಕಪ್ಪೆ ಚಿಪ್ಪಿನಲ್ಲಿ ಮುತ್ತೂಂದ ಬಚ್ಚಿಟ್ಟಂತೆ ಪುಟ್ಟ ಲಿಂಗ, ಪ್ರಕೃತಿ ವಿಸ್ಮಯ ಸಾರುವ ಇದರ ಹೆಸರೇ ನಾಗಲಿಂಗದ ಪುಷ್ಪ. ಹೆಸರೇ ಹೇಳುವಂತೆ ನಾಗನ ಹೆಡೆಯೊಳಗೆ ಶಿವಲಿಂಗನನ್ನು ಆಶ್ರಯಿಸುವಂತೆ ಕಾಣುವ ಇದರ ಸೊಬಗು ಎಂಥವರಿಗಾದರೂ ವಿಚಿತ್ರ ಎನಿಸದಿರದು. ಬೆಳಗಾಯ್ತು ಏಳ್ಳೋ ಶ್ರೀ ಮುದ್ದು ಬೆನಕ ಈ ಹಾಡಿನಲ್ಲಿ ಮಧ್ಯ ಸಾಲಿನಲ್ಲಿ ನಾಗಲಿಂಗದ ಪುಷ್ಪ ಕಮಲಗಳು ಎಂಬ ಸಾಲು ಬರುತ್ತದೆ. ಹೀಗೆ ಗೂಗಲ್‌ ಗುರುಗಳ ಬಳಿ ಈ ವಿಚಾರ ಪ್ರಸ್ತಾಪಿಸಿದಾಗ ಎಳೆಎಳೆಯಾಗಿ ಅನೇಕ ಸಂಗತಿ ತಿಳಿದು ಬಂದಿದ್ದು ಅಂತೂ ಹಾಡು ಕೇಳಿ ಕುತೂಹಲ ಹುಟ್ಟಿದ್ದು ಸಾರ್ಥಕ ವಾಯ್ತು ಎಂಬ ಅನುಭವ ನನಗೆ ಗಿಟ್ಟಿತ್ತು.

Advertisement

ಹೂವಿನ ಮೂಲ ಎಲ್ಲಿ?

ದಕ್ಷಿಣ ಅಮೆರಿಕಾದ ಅಮೆಜಾನ್‌ ಕಾಡು ಇದರ ಮೂಲವಾಗಿದ್ದು ಭಾರತಕ್ಕೆ ಅಲ್ಲಿಂದ ವಲಸೆ ಬಂದ ಹೂ ಎಂದೇ ಹೇಳಲಾಗುತ್ತದೆ. ಉಷ್ಣ ವಲಯದ ಕಾಡುಗಳಲ್ಲಿ ಈ ಪುಷ್ಪ ಹೆಚ್ಚಾಗಿ ಕಂಡುಬರುತ್ತಿದ್ದು ಭಾರತೀಯ ಪರಂಪರೆಯಲ್ಲಿ ಈ ಹೂವಿಗೆ ವಿಶೇಷ ಸ್ಥಾನ ಮಾನವಿದೆ. ನಾಗಕೇಸರ, ಮಲ್ಲಿ ಕಾರ್ಜುನ ಪುಷ್ಪ,  ಶಿವ ಕಮಲ, ಕೈಲಾಸ ಪತಿ ಹೂ ಎಂಬ ಅನೇಕ ಹೆಸರುಗಳು ಇದಕ್ಕೆ ಇದೆ. ಜೈನ ಧರ್ಮ ಹಾಗೂ ಹಿಂದೂ ಧರ್ಮದಲ್ಲಿ ಇದು ಪಾವಿತ್ರ್ಯತೆಯ ಹೂ ಎಂದು ನಂಬಲಾಗಿದೆ.  ನಾಗಲಿಂಗದ ಪುಷ್ಪವು  ಅಮೆರಿಕಾ, ಶ್ರೀಲಂಕಾ, ಥೈಲ್ಯಾಂಡ್‌ ನಲ್ಲಿ ಹೇರಳವಾಗಿ ದೊರೆಯಲಿದೆ.

ಇದರ ಮರವನ್ನು  ಅಮೆರಿಕಾದಲ್ಲಿ  ಕೆನೋನ್‌ ಬಾಲ್‌ ಟ್ರೀ ಎಂದು ಹೂವಿಗೆ ಕ್ಯಾನೋನ್‌ ಬಾಲ್‌ ಫ್ಲವರ್‌ ಎಂದು ಕರೆಯಲಾಗುತ್ತದೆ. ಈ ಮರದ ಕಾಯಿಗಳು ಫಿರಂಗಿ ದೊಡ್ಡ ಗುಂಡಿನಂತೆ ದಪ್ಪಗಿರುವ ಕಾರಣ ಈ ಹೆಸರು ಬಂದಿದೆ.  ಲೆಸಿತಿಡೇಸಿ ಎಂಬ ಹೂ ಬಿಡುವ ಸಸ್ಯ ಪ್ರಬೇಧಕ್ಕೆ ಇದು ಸೇರಿದ್ದು ನಮ್ಮೆಲ್ಲರಿಗೂ ಚಿರಪರಿಚಿತವಾದ ನಾಗಚಂಪ, ನಾಗಲಿಂಗದ ಪುಷ್ಪ ಎಂಬ ಹೆಸರಿನಿಂದ. ಡಿಸೆಂಬರ್‌ ನಿಂದ ಮಾರ್ಚ್‌ ವರೆಗೆ ಅರಳುವ ಕಾಲವಾಗಿದ್ದು ಶಿವರಾತ್ರಿ ಸಮಯದಲ್ಲಿ ಗೊಂಚಲು ರಾಶಿಗಳು ಕಾಣಬಹುದು. ನಾಗಲಿಂಗ ಪುಷ್ಪದ ಮರಕ್ಕೆ 80ವರ್ಷ ಆಯಸ್ಸಿದೆ ಎನ್ನಲಾಗುತ್ತದೆ.

Advertisement

ವಿಸ್ಮಯದ ಚಿಪ್ಪಿನ ಆಕೃತಿ

ಈ ಹೂವು ಬಹಳ ವಿಸ್ಮಯಕಾರಿ ಎನಿಸಲು ಚಿಪ್ಪಿನ ಆಕೃತಿಯೇ ಮೂಲ ಕಾರಣ. ದೊಡ್ಡದಾದ ಆರು ಎಸಳುಗಳು ಮಧ್ಯ ಭಾಗದಲ್ಲಿ ಹಳದಿ ಹಾಗೂ ಅದರ ಮೇಲೆ ಹೇರಳ ಕೇಸರಗಳು ಕಾಣ ಸಿಗುತ್ತವೆ. ಸುತ್ತಳಿನ ದಳದ ಒಳಗೆ ಪುಟ್ಟ ಲಿಂಗವೊಂದನ್ನು ಕೇಸರಗಳು ಹಾವಿನ ಹೆಡೆಯಂತೆ ಆಶ್ರಯಿಸುವ ಹಾಗೆ ಇದರ ಒಂದು ಆಕೃತಿಯನ್ನು ನಾವು ಕಾಣಬಹುದು. ಇದರ ಸುವಾಸನೆ ನಮಗೆ ಆಹ್ಲಾದ ನೀಡುತ್ತದೆಯಾದರೂ ಯಾವುದೇ ತರನಾದ ಮಕರಂದ ಇಲ್ಲ.  ಹಾಗಿದ್ದರೂ  ಜೇನು ಇದರ ಸುವಾಸನೆಗೆ ಆಕರ್ಷಿತವಾಗಿ ಮರದ ಸುತ್ತ ಮುತ್ತಲೇ ಗೂಡು ಕಟ್ಟುತ್ತವೆ. ನೂರು ಅಡಿಗಳ ವರೆಗೆ ಮರ ಬೆಳೆಯಲಿದ್ದು ಕಾಂಡದಲ್ಲಿ ಪುಷ್ಪ ಬಿಡುವುದು ಈ ಮರದ ಮತ್ತೂಂದು ವಿಶೇಷತೆ.

ಆಯುರ್ವೇದದಲ್ಲೂ ಮಾನ್ಯತೆ

ನಾಗಲಿಂಗದ ಮರವು ಆಯುರ್ವೇದದಲ್ಲಿಯೂ ಮಾನ್ಯತೆ ಪಡೆದಿದೆ. ಕಾಂಡ, ಬೇರು, ಹೂವಿನ ಎಸಳು ಹೀಗೆ ವಿವಿಧ ಆರೋಗ್ಯ ವರ್ಧಕ ಪ್ರಯೋಜನ ದೊರೆಯಲಿದೆ. ಹೊಟ್ಟೆ ನೋವು, ಹಲ್ಲು ನೋವು, ಉಷ್ಣ ಬೊಕ್ಕೆ ನಿವಾರಣೆ ಕಾಂಡ, ಬೇರನ್ನು ಹೆಚ್ಚಾಗಿ ಬಳಸಿದರೆ ಜತೆಗೆ ಮುಖದ ಕಾಂತಿ ವೃದ್ಧಿಗೂ ಈ ಹೂವಿನ ಬಳಕೆ ಮಾಡಲಾಗುತ್ತದೆ. ಇದರ ಎಲೆಗಳನ್ನು ಹಲ್ಲು ನೋವಿಗೆ ಹಾಗೂ ಫ‌ಂಗಸ್‌, ಬ್ಯಾಕ್ಟೀರಿಯಾ ದಿಂದ ಉಂಟಾಗುವ ಚರ್ಮ ರೋಗಕ್ಕೆ ರಾಮ ಬಾಣದಂತೆ ಚಿಕಿತ್ಸೆ ತರ ಬಳಸಲಾಗುತ್ತದೆ.

ಆದರೆ ಈಗ ಈ ಮರದ ಸಂಖ್ಯೆ ಹಿಂದಿಗಿಂತ ಕಡಿಮೆ ಆಗಿದ್ದು ಅದರ ಸಂತತಿ ವೃದ್ಧಿ ಆಗದ್ದು ಮುಖ್ಯ ಕಾರಣ ಎಂಬುದು ತಿಳಿದು ಬಂದಿದೆ. ಅಂದರೆ ಇದು ಕಾಂಡದ ಬಳಿಯಲ್ಲೇ ಹಣ್ಣುಗಳು ಬೀಳುವ ಕಾರಣ ಕೊಳೆತು ಹೋಗುತ್ತದೆ. ಹಾಗಾಗಿ ಇಂತಹ ವಿಸ್ಮಯ ಮರವನ್ನು ಉಳಿಸಿ ಬೆಳೆಸಿ ನಮ್ಮ ಮುಂದಿನ ತಲೆಮಾರಿಗೂ ನೀಡಬೇಕು. ಇತ್ತೀಚೆಗೆ ಅಯೋಧ್ಯೆಯ ಸಂದರ್ಭ ನಾಗಲಿಂಗದ ಪುಷ್ಪ ವಿಚಾರ ಮುನ್ನೆಲೆಗೆ ಬಂದಿದ್ದು ಅನೇಕ ಸಸ್ಯ ಪ್ರೇಮಿಗಳು ಮನೆ ಬಳಿ ಇದನ್ನು ನೆಟ್ಟಿ¨ªಾರೆ ಎಂಬುದು ಖುಷಿಯ ಸಂಗತಿಯಾಗಿದೆ.

-ರಾಧಿಕಾ

ಕುಂದಾಪುರ

Advertisement

Udayavani is now on Telegram. Click here to join our channel and stay updated with the latest news.

Next