ಪಾವಗಡ ; ತಾಲೂಕಿನ ನಾಗಲಮಡಿಕೆ ಪ್ರಸಿದ್ದ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಸ್ವಾಮಿಯ ದರ್ಶನ ಪಡೆದು ಪೂಜೆ ಮಾಡುವುದು ಕಷ್ಟವಾಗಿದೆ ಎಂಬ ಅರೋಪಗಳು ಕೇಳಿ ಬರುತ್ತಿವೆ.
ಶುಕ್ರವಾರ ತೆಲುಗಿನ ಚಲನಚಿತ್ರ ನಟ ನಾಗಿನೀಡು ಕುಟುಂಬ ಸಮೇತ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ತೆಲಂಗಾಣ ಹೈದಾರಬಾದ್ ನಿಂದ ಬಂದಿದ್ದು, ಸಂಜೆ 4 ಗಂಟೆಯಿಂದ ದೇವಸ್ಥಾನ ಹತ್ತಿರ ಸ್ವಾಮಿಯ ದರ್ಶನ ಪಡೆಯಲು ಕಾದರು ಅರ್ಚಕರು 7 ಗಂಟೆಯಾದರು ಬಂದಿಲ್ಲ ಎಂಬ ಅರೋಪಗಳು ಕೇಳಿಬಂದಿವೆ.
ಸಾಮಾಜಿಕ ಜಾಲತಾಣಗಳಲ್ಲಿ ನಾಗಿನೀಡು ಅವರ ಪತ್ನಿ ನಾಗಮಣಿ ಹೇಳಿಕೆಯ ಪ್ರಕಾರ ದೇವಸ್ಥಾನದಲ್ಲಿ ಸ್ವಾಮಿ ದರ್ಶನ ಪಡೆದು ಪೂಜೆ ಮಾಡಿಸಲು 4 ಗಂಟೆಯಿಂದ ಕಾದರು ಅರ್ಚಕರು ಬಂದಿಲ್ಲ ನಮ್ಮ ವಾಹನವನ್ನು ಅರ್ಚಕರ ಮನೆಗೆ ಕಳುಹಿಸಿದರು ಬರಲಿಲ್ಲ, ಅರ್ಚಕರು ನನ್ನ ಮನೆಯಲ್ಲಿ ಪೂಜೆ ಇದೆ ಬರಲು ಆಗಲ್ಲ ಎಂದು ಹೇಳಿ ಕಳುಹಿಸಿದ್ದಾರೆ, ಆದರೆ ಹಿಂದೂ ದೇವಸ್ಥಾನಗಳಲ್ಲಿ 6 ಗಂಟೆಗೆ ಖಂಡಿತವಾಗಿ ಪೂಜೆ ಕಾರ್ಯಗಳು ಸ್ವಾಮಿಗೆ ಮಾಡುತ್ತಾರೆ, ಆದರೆ ನಾಗಲಮಡಿಕೆಯಲ್ಲಿ ಮಾತ್ರ ಯಾಕೆ ಮಾಡುವುದಿಲ್ಲ ಎಂದು ಹೇಳಿದರು.
ನಾಗಲಮಡಿಕೆಯ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನ ಮುಜರಾಯಿ ಇಲಾಖೆಗೆ ಸೇರಿದ್ದರು ಅಧಿಕಾರಿಗಳ ಮಾತು ಇಲ್ಲಿ ನಡೆಯುತ್ತಿಲ್ಲ, ಅರ್ಚಕರು, ಅಡಳಿತ ಅಧಿಕಾರಿಗಳು ಆಡಿದ್ದೆ ಅಟ ಎಂದು ಗ್ರಾಮಸ್ಥರು ಅರೋಪಿಸಿದ್ದಾರೆ.
Related Articles
ಇದನ್ನೂ ಓದಿ : ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಗೆದ್ದು 2ನೇ ಸ್ಥಾನಕ್ಕೇರಿದ ರಾಜಸ್ಥಾನ್ ರಾಯಲ್ಸ್
ಕೋಟ್ ತಹಶೀಲ್ದಾರ್ ವರದರಾಜು; ನಾಗಲಮಡಿಕೆಯ ದೇವಸ್ಥಾನದಲ್ಲಿ ಭಕ್ತರಿಗೆ ಅರ್ಚಕರಿಂದ ತೋಂದರೆ ಅಗಿದೆ ಎಂದು ಸಾಮಾಜಿಕ ಜಾಲತಾಣ ಹಾಗೂ ಗ್ರಾಮಸ್ಥರಿಂದ ಅರೋಪ ಬಂದಿದ್ದು, ಅರ್ಚಕರಗೆ ನೋಟಿಸ್ ನೀಡುವುದಾಗಿ ತಿಳಿಸಿದರು.