Advertisement

ನಾಗಾಇದಲಾಯಿ ಸಣ್ಣ ನೀರಾವರಿ ಕೆರೆಯಲ್ಲಿ ಬಿರುಕು: ಆತಂಕದಲ್ಲಿ ಗ್ರಾಮಸ್ಥರು

02:14 PM Aug 02, 2022 | Team Udayavani |

ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲ್ಲೂಕಿನ ನಾಗಾಇದಲಾಯಿ ಗ್ರಾಮದಲ್ಲಿರುವ ಸಣ್ಣ ನೀರಾವರಿ ಕೆರೆಯಲ್ಲಿ  ಬಿರುಕು ಕಾಣಿಸಿಕೊಂಡಿದ್ದರಿಂದ ಗ್ರಾಮಸ್ಥರು ಎಚ್ಚರಿಕೆಯಿಂದ ಇರಬೇಕೆಂದು ಶಾಸಕ ಅವಿನಾಶ್ ಜಾಧವ್ ಗ್ರಾಮಸ್ಥರಲ್ಲಿ ಮನವಿ ಮಾಡಿಕೊಂಡಿದ್ದಾರೆ.

Advertisement

ಕೆರೆಯನ್ನು 2020 ರಲ್ಲಿ ದುರಸ್ತಿ ಮಾಡಿದ್ದರೂ ಆಗಾಗ ಕೆರೆಯ  ಮಣ್ಣಿನ ಕುಸಿತವಾಗುತ್ತಿತ್ತು. ಕೆಲವು ಭಾಗದಲ್ಲಿ ಬಿರುಕು ಕಾಣಿಸಿಕೊಂಡಿದೆ. ಯಾವುದೇ ಕ್ಷಣದಲ್ಲಿ ಒಡೆಯುವ ಸಾಧ್ಯತೆ ಇರುವುದರಿಂದ ಕೆರೆಯ ಕೆಳಭಾಗದಲ್ಲಿರುವ ಗ್ರಾಮಸ್ಥರು ಮುನ್ನೆಚ್ಚರಿಕೆ ಕ್ರಮವಾಗಿ ಎಚ್ಚರಿಕೆಯಿಂದ ಇರಬೇಕೆಂದು ಶಾಸಕರು ಮನವಿ ಮಾಡಿದರು.

ನಾಗಾಇದಲಾಯಿ ಗ್ರಾಮದಲ್ಲಿ ಸಣ್ಣ ನೀರಾವರಿ ಕೆರೆ ಕಳೆದ 2020 ಅಕ್ಟೋಬರ್ 14 ರಂದು ನೀರಿನ ರಭಸಕ್ಕೆ ಒಡೆದು ಹೋಗಿತ್ತು. ಸಚಿವ ಜೆ.ಸಿ.ಮಾಧುಸ್ವಾಮಿ ಸ್ಥಳಕ್ಕೆ ಭೇಟಿ ನೀಡಿ ಸರಕಾರದಿಂದ 4 ಕೋಟಿ ರೂಪಾಯಿ ಮಂಜೂರು ಮಾಡಿಸಿದರು ಅದರ ದುರಸ್ತಿ ಕಾಮಗಾರಿ ಕೆಲಸ ಕಳೆದ ಮೇ ತಿಂಗಳಲ್ಲಿ ಪೂರ್ಣ ಗೊಳಿಸಲಾಗಿದೆ. ಮಳೆಗಾಲ ಪ್ರಾರಂಭದಲ್ಲೇ ಕೆರೆಯಲ್ಲಿ ಮತ್ತೆ ಬಿರುಕುಗಳು ಕಾಣಿಸುತ್ತಿವೆ. ವೇಸ್ಟ್ ವೇರ್ ಮೂಲಕ ನೀರು ಹೊರಕ್ಕೆ ಹರಿದು ಬಿಡಲಾಗುತ್ತಿದೆ.‌ ಕೆರೆ ನೀರು ಸಂಗ್ರಹಣೆ ಮಾಡುತ್ತಿಲ್ಲ.‌ಕೆರೆಯಲ್ಲಿ ಬಿರುಕು ಕಾಣಿಸಿಕೊಂಡಿರುವ ಕುರಿತು ತಜ್ಞರಿಂದ ಪರಿಶೀಲನೆ ನಡೆಸಲಾಗುತ್ತದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next