Advertisement

Nagabhushan; ‘ವಿದ್ಯಾಪತಿ’ಯಾದ ನಾಗಭೂಷಣ್

03:11 PM Aug 18, 2024 | Team Udayavani |

ಡಾಲಿ ಧನಂಜಯ್‌ ನಿರ್ಮಾಣದ “ವಿದ್ಯಾಪತಿ’ ಸಿನಿಮಾದ ವಿದ್ಯಾಪತಿಯ ವಿವಿಧ ಅವತಾರಗಳ ಲುಕ್‌ ಬಿಡುಗಡೆ ಮಾಡಿದೆ. ವಿದ್ಯಾಪತಿಯಾಗಿ ಟಗರು ಪಲ್ಯ ನಾಯಕ ನಾಗಭೂಷಣ್‌ ಬಣ್ಣ ಹಚ್ಚಿದ್ದಾರೆ. ಅವರ ಹುಟ್ಟುಹಬ್ಬದ ವಿಶೇಷವಾಗಿ ಚಿತ್ರತಂಡ ವಿದ್ಯಾಪತಿ ಚಿತ್ರದ ಪ್ರೋಮೋ ಅನಾವರಣ ಮಾಡಿದೆ.

Advertisement

ಜೇಬು ತುಂಬ ಕಾಸಿರೋನು ಕೊಟ್ಯಾಧಿಪತಿ..ನಿಮ್ಮನ್ನೆಲ್ಲ ಹೊಟ್ಟೆ ತುಂಬ ನಗಿಸುವವನೇ ನಮ್ಮ “ವಿದ್ಯಾಪತಿ’ ಅಂತಾ ಹೀರೋನನ್ನು ಪರಿಚಯಿಸಿದೆ. ಕರಾಟೆ ಕಿಂಗ್‌ ವೇಷ ತೊಟ್ಟಿರುವ ನಾಗಭೂಷಣ್‌ ಮಾಡುವ ಕಿತಾಪತಿ ತುಣುಕುವೊಂದನ್ನು ಬಿಡುಗಡೆ ಮಾಡಿದೆ. ಕರಾಟೆ ಕಲಿಯುವ ವೇಳೆ ವಿದ್ಯಾಪತಿ ಮಾಡುವ ಎಡವಟ್ಟನ್ನು ತೋರಿಸಿದೆ.

ಇಕ್ಕಟ್‌ ಸಿನಿಮಾ ಸೂತ್ರಧಾರರಾದ ಇಶಾಂ ಮತ್ತು ಹಸೀಂ ಖಾನ್‌ ವಿದ್ಯಾಪತಿ ಸಿನಿಮಾಕ್ಕೆ ಆಕ್ಷನ್‌ ಕಟ್‌ ಹೇಳಿದ್ದಾರೆ. ಜೊತೆಗೆ ಸಿನಿಮಾವನ್ನು ಇವರೆ ಬರೆದು, ಸಂಕಲನದ ಜವಾಬ್ದಾರಿಯನ್ನು ತಾವೇ ಹೊತ್ತುಕೊಂಡಿದ್ದಾರೆ. ಈ ಚಿತ್ರದಲ್ಲಿ ನಾಗಭೂಷಣ್‌ ಗೆ ನಾಯಕಿಯಾಗಿ ಉಪಾಧ್ಯಕ್ಷ ಬ್ಯೂಟಿ ಮಲೈಕಾ ವಸೂಪಾಲ್‌ ಕಾಣಿಸಿಕೊಳ್ಳಲಿದ್ದಾರೆ. ರಂಗಾಯಣ ರಘು ಕೂಡ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದಾರೆ. ಸದ್ಯ ವಿದ್ಯಾಪತಿ ಶೂಟಿಂಗ್‌ ಭರದಿಂದ ಸಾಗುತ್ತಿದೆ.

Advertisement

Udayavani is now on Telegram. Click here to join our channel and stay updated with the latest news.

Next