Advertisement
ಉಡುಪಿ: ಕಳೆದ ಕೆಲವು ವರ್ಷಗಳಿಂದ ಎಲ್ಲೆಲ್ಲೂ ಸ್ವಚ್ಚ ಭಾರತದ ಸದ್ದು ಕೇಳಿಸುತ್ತಿದೆ. ಎಲ್ಲೆಲ್ಲೂ ಕಲ್ಮಶ ತುಂಬಿಕೊಂಡು ಪರಿಸ್ಥಿತಿ ಬಿಗಡಾಯಿಸುತ್ತಿದೆ ಎನ್ನುವಾಗ ಸ್ವಚ್ಚತೆಯ ಅರಿವಾಯಿತು. 40-50 ವರ್ಷಗಳ ಹಿಂದೆ ಬಡತನವಿದ್ದಿರಬಹುದು, ಇಷ್ಟು ನಾಗಮಂಡಲ, ಬ್ರಹ್ಮಕಲಶೋತ್ಸವಗಳು ನಡೆಯದೆ ಇದ್ದಿರಬಹುದು, ಆದರೆ ಇಷ್ಟು ಪರಿಸರ ಮಾಲಿನ್ಯವೂ ನಡೆದಿರಲಿಲ್ಲ.
Related Articles
– ಈಗ ಅಳಿದುಳಿದ ನಾಗನ ಬನಗಳನ್ನು ಕೆಡಿಸದೆ ಉಳಿಸಿಕೊಂಡು ಬರುವುದು ನಿಜ ನಾಗನಿಗೂ, ಮಾನವಪ್ರಪಂಚಕ್ಕೂ ಅತೀ ಅಗತ್ಯ.
– ಈಗಾಗಲೇ ಕೆಡಿಸಿಟ್ಟ ನಾಗನಬನಗಳ ಸುತ್ತ ರೆಂಜ, ಸುರಿಗೆಯಂತಹ ಗಿಡಮರಗಳನ್ನು ಬೆಳೆಸುವುದು ಮುಂದಿನ ನಾಗನ ಸಂತತಿಗೂ, ಮಾನವ ಸಂತತಿಗೂ ಅತೀ ಅಗತ್ಯ.
– ನಾಗನಕಟ್ಟೆಗೆ ಪೂಜೆಗೆಂದು ಹೋಗುವಾಗ ಸಾಧ್ಯವಾದಷ್ಟು ಪ್ಲಾಸ್ಟಿಕ್ ಸಾಮಗ್ರಿಗಳನ್ನು ಬಿಟ್ಟು ಹೋಗಿ. ಕೆಲವು ಸಾಮಗ್ರಿಗಳನ್ನು ಕಾಗದದಲ್ಲಿ ಕಟ್ಟಬಹುದು, ಕೆಲವು ಸಾಮಗ್ರಿಗಳಿಗೆ ಮನೆಯಲ್ಲಿರುವ ಚೀಲಗಳನ್ನು ಬಳಸಬಹುದು, ಅಗರ್‌ಬತ್ತಿಯಂತಹ ವಸ್ತುಗಳನ್ನು ಕೊಂಡೊಯ್ಯದಿದ್ದರೂ ದೊಡ್ಡ ಉಪಕಾರವೇ.
– ಎಳನೀರು ಚಿಪ್ಪನ್ನು ಒಡೆದು ತೆಂಗಿನ ಕಟ್ಟೆಗೆ ಹಾಕಬಹುದು ಅಥವಾ ಒಣಗಿಸಿ ಉರುವಲಾಗಿ ಬಳಸಬಹುದು. ಇದು ನಾಗರಪಂಚಮಿಗೆ ಮಾತ್ರವಲ್ಲ, ಎಲ್ಲ ಸಂದರ್ಭಗಳಲ್ಲಿಯೂ ಅತಿ ಅಗತ್ಯ. ಇಲ್ಲವಾದರೆ ಸೊಳ್ಳೆ ತನ್ಮೂಲಕ ಮಲೇರಿಯ ಉತ್ಪಾದನ ಕೇಂದ್ರವಾಗುತ್ತದೆ.
– ಇಷ್ಟೆಲ್ಲ ಹೇಳಿದ ಮೇಲೂ ಒಂದಿಷ್ಟು ಜನರಿಂದ ಉಂಟಾಗುವ ತ್ಯಾಜ್ಯಗಳನ್ನು ಸಂಘಟಕರು ಸಂಗ್ರಹಿಸಿ ವಿಲೇವಾರಿ ಮಾಡುವುದು ದೊಡ್ಡ ಪುಣ್ಯದ ಕೆಲಸ, ದೇವರು ಎನ್ನಬಹುದಾದ ಪ್ರಕೃತಿಗೆ ಮಾಡುವ ಪೂಜೆ ಇದು.
– ನಾಗರಪಂಚಮಿ ಮರುದಿನ ನಾಗಸ್ಥಾನದಲ್ಲಿ ಪೂಜೆ ಸಲ್ಲಿಸುವ ಕ್ರಮವಿತ್ತು. ಪ್ರಾಯಃ ಇದು ಹಿಂದಿನ ದಿನದ ತ್ಯಾಜ್ಯ ವಿಲೇವಾರಿಗೆಂದು ನಿರ್ಮಾಣಗೊಂಡ ವ್ಯವಸ್ಥೆಯಾಗಿರಬಹುದು. ಮರುದಿನ ನಾವು ಸ್ವತ್ಛ ನಾಗನಕಟ್ಟೆ ಅಭಿಯಾನವನ್ನು ಕೈಗೊಳ್ಳಬಹುದು.
– ಪ್ರಿವೆನ್ಶನ್ ಈಸ್ ಬೆಟರ್ ದ್ಯಾನ್ ಕ್ಯೂರ್ ಎಂಬ ಗಾದೆಯನ್ನು ಇಲ್ಲಿಗೂ ಅನ್ವಯಿಸುವುದಾದರೆ ತ್ಯಾಜ್ಯ ವಿಲೇವಾರಿ ಮಾಡುವುದಕ್ಕೆ ಮುನ್ನ ತ್ಯಾಜ್ಯ ಉತ್ಪಾದನೆಯನ್ನು ಕಡಿಮೆ ಮಾಡುವುದು ಅಗತ್ಯ.
Advertisement
– ಮಟಪಾಡಿ ಕುಮಾರಸ್ವಾಮಿ