Advertisement

Tollywood: ಚಳಿಗಾಲದಲ್ಲಿ ಈ ದಿನ ನೆರವೇರಲಿದೆ ನಾಗಚೈತನ್ಯ – ಶೋಭಿತಾ ವಿವಾಹ

05:22 PM Oct 30, 2024 | Team Udayavani |

ಹೈದರಾಬಾದ್:‌ ಟಾಲಿವುಡ್‌ ನಟ ನಾಗಚೈತನ್ಯ (Naga Chaitanya) – ಶೋಭಿತಾ ಧೂಳಿಪಾಲ (Sobhita Dhulipala) ಮದುವೆಯ ಸಿದ್ಧತೆಯಲ್ಲಿದ್ದಾರೆ.

Advertisement

8 ವರ್ಷಗಳಿಂದ ಡೇಟಿಂಗ್‌ ನಲ್ಲಿದ್ದ ನಾಗಚೈತನ್ಯ ಮತ್ತು ಶೋಭಿತಾ ಧೂಳಿಪಾಲ ಆ.8ರಂದು ಹೈದರಾಬಾದ್‌ನಲ್ಲಿರುವ ನಾಗಚೈತನ್ಯ ಅವರ ನಿವಾಸದಲ್ಲಿ ನಿಶ್ಚಿತಾರ್ಥ ಮಾಡಿಕೊಂಡಿದ್ದರು. ಇದೀಗ ಇಬ್ಬರು ಹಸೆಮಣೆ ಏರಲು ಸಿದ್ಧರಾಗಿದ್ದಾರೆ.

ನಾಗಾರ್ಜುನ್‌ ಕುಟುಂಬದಲ್ಲಿ ಮದುವೆಯ ಸಂಭ್ರಮ ನಡೆಯಲಿದೆ. ಈಗಾಗಲೇ ಪ್ರೀ ವೆಡ್ಡಿಂಗ್‌ ಸಂಭ್ರಮಗಳು ಜೋರಾಗಿ ನಡೆಯುತ್ತಿದೆ. ಇದೇ ವರ್ಷದ ಡಿಸೆಂಬರ್‌ 4 ರಂದು ಅಂದರೆ ಚಳಿಗಾಲದ ಸೀಸನ್‌ನಲ್ಲಿ ನಾಗಚೈತನ್ಯ – ಶೋಭಿತಾ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ ಎಂದು ವರದಿಯಾಗಿದೆ.

ಇಬ್ಬರ ಕುಟುಂಬಸ್ಥರು ಹಾಗೂ ಆಪ್ತ ವಲಯದ ಸಮ್ಮುಖದಲ್ಲಿಅದ್ಧೂರಿಯಾಗಿ ವಿವಾಹ ಸಮಾರಂಭ ನೆರವೇರಲಿದೆ ಎಂದು ವರದಿಯಾಗಿದೆ.

Advertisement

ನಿಶ್ಚಿತಾರ್ಥದ ಬಳಿಕ ಶೋಭಿತಾ ಥೇಟು ಸಾಂಪ್ರದಾಯಿಕ ಸೌತ್‌ ಬೆಡಗಿಯಾಗಿ ಮಿಂಚಿದ್ದಾರೆ. ಸಾಂಪ್ರದಾಯಿಕ ಉಡುಗೆಯಲ್ಲಿ ಶೋಭಿತಾ ಹಲವು ಸಮಾರಂಭದಲ್ಲಿ ಭಾಗಿಯಾಗಿದ್ದಾರೆ. ಇತ್ತೀಚೆಗೆ ನಡೆದ ಎಎನ್‌ಆರ್ (ಅಕ್ಕಿನೇನಿ ನಾಗೇಶ್ವರ ರಾವ್) ಪ್ರಶಸ್ತಿ ಸಮಾರಂಭದಲ್ಲಿ ನಾಗಾರ್ಜುನ್‌ ಶೋಭಿತಾ ಅವರನ್ನು ಹಿರಿಯ ನಟ ಚಿರಂಜೀವಿ ಅವರಿಗೆ ಸೊಸೆ ಎಂದು ಪರಿಚಯಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next