Advertisement

ನಡುಮನೆ ಯಕ್ಷಗಾನ: ಜೂ. 3ರಿಂದ ಪ್ರದರ್ಶನ ಆರಂಭ

10:28 PM May 31, 2019 | Team Udayavani |

ಉಡುಪಿ: ನಗರ ಯಕ್ಷ ಬಳಗ ಕೆಳಾರ್ಕಳಬೆಟ್ಟು ವತಿಯಿಂದ ಜೂ. 3ರಿಂದ ನಡುಮನೆ ಯಕ್ಷಗಾನ ಪ್ರದರ್ಶನ ಆರಂಭಗೊಳ್ಳಲಿದ್ದು, ನ. 15ರ ತನಕ ನಡೆಯಲಿದೆ.

Advertisement

ನಿರಂತರವಾಗಿ 7 ವರ್ಷ ಪೂರೈಸಿದ ಬಳಗ ಇದೀಗ 8ನೇ ವರ್ಷಕ್ಕೆ ಪದಾರ್ಪಣೆಗೈಯ್ಯುತ್ತಿದ್ದು, ಕರಾವಳಿ ಮತ್ತು ಮಲೆನಾಡಿನಾದ್ಯಂತ ಯಶಸ್ವಿ ಪ್ರದರ್ಶನ ನೀಡಲಿದೆ. 3 ಗಂಟೆ ಅವಧಿಯ ಕಾಲ ಮಿತಿಯ ಈ ಯಕ್ಷಗಾನವು ಇದುವರೆಗೆ 775 ಪ್ರದರ್ಶನ ಪೂರೈಸಿದೆ.

ಹಿಮ್ಮೇಳದಲ್ಲಿ ಭಾಗವತರಾಗಿ ನಗರ ಸುಬ್ರಹ್ಮಣ್ಯ ಆಚಾರ್‌, ಮದ್ದಳೆ ಮತ್ತು ಚಂಡೆ ವಾದಕರಾಗಿ ಕೆ.ಜೆ. ಸುಧೀಂದ್ರ ಮತ್ತು ಸತೀಶ್‌ ಉಪಾಧ್ಯ, ಮುಮ್ಮೇಳದಲ್ಲಿ ಪೇತ್ರಿ ಬಾಲಕೃಷ್ಣ ನಾಯಕ್‌, ಯಕ್ಷ ಮೇನಕೆ ಸಂತೋಷ್‌ ಕುಲಶೇಖರ, ಹಾಸ್ಯಗಾರ ಕಡಬ ಪೂವಪ್ಪ ಬಳಗದಲ್ಲಿದ್ದಾರೆ.

ಇದೀಗ 776ನೇ ಯಕ್ಷಗಾನ ಪ್ರದರ್ಶನವು ಗುಂಡಿಬೈಲು ಶ್ರೀ ಪಂಚಧೂಮಾವತಿ ಸನ್ನಿಧಿಯಲ್ಲಿ ಜೂ. 3ರ ಸಂಜೆ 7ರಿಂದ ನಡೆಯಲಿದೆ. ಕಾರ್ಯಕ್ರಮ ಮಾಡಲಿಚ್ಛಿಸುವವರು ಬಳಗದ ವ್ಯವಸ್ಥಾಪಕ ನಗರ ಸುಬ್ರಹ್ಮಣ್ಯ ಆಚಾರ್‌ ಅವರನ್ನು ಸಂಪರ್ಕಿಸಬಹುದೆಂದು ಪ್ರಕಟನೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next