Advertisement

ಕೆಟ್ಟಿದ್ದು ಕಾಲವೋ..ನಾವೋ ಗೊತ್ತಾಗ್ತಿಲ್ಲ: ಕಣವಿ ಆತಂಕ

07:40 AM Sep 12, 2017 | |

ಧಾರವಾಡ: “ಚಿಂತಕ, ವಿಚಾರವಾದಿಗಳ ಸರಣಿ ಹತ್ಯೆ ನೋಡಿದರೆ ಕಾಲ ಕೆಟ್ಟಿದೆಯೋ ಅಥವಾ ನಾವು
ಕೆಟ್ಟಿರುವೆವೋ ಗೊತ್ತಾಗುತ್ತಿಲ್ಲ’ ಎಂದು ಹಿರಿಯ ಕವಿ, ನಾಡೋಜ ಡಾ| ಚೆನ್ನವೀರ ಕಣವಿ ಕಳವಳ ವ್ಯಕ್ತಪಡಿಸಿದರು.

Advertisement

ನಗರದ ಮನೋಹರ ಗ್ರಂಥಮಾಲಾ ಅಟ್ಟದಲ್ಲಿ ಧಾರವಾಡ ಸಾಹಿತ್ಯ ಸಂಭ್ರಮದ ಪರವಾಗಿ ನಡೆದ ಗೌರಿಗೆ
ಶ್ರದಾಟಛಿಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. “ಗೌರಿ ಲಂಕೇಶರು ಬಹಳ ಧೈರ್ಯದಿಂದ ಬರೆಯುತ್ತಿದ್ದರು.

ಕರ್ನಾಟಕದಲ್ಲಿ ಎಷ್ಟೋ ವಾದ-ವಿವಾದಗಳು ನಡೆಯುತ್ತಿದ್ದರೂ ಕ್ರೌರ್ಯ,ಕೊಲೆ, ಹಲ್ಲೆ ಮುಂತಾದವುಗಳು ನಡೆಯುತ್ತಿರಲಿಲ್ಲ. ಆದರೀಗ ಇಂಥ ಕ್ರೂರತೆಯಿಂದ ಹೇಗೆ ಪಾರಾಗಬೇಕು ಎಂಬುದನ್ನು ನಾವೆಲ್ಲ ಯೋಚಿಸಬೇಕು.ಏಕೋ ಬಹಳ ಕೆಟ್ಟ ದಿನಗಳು ಬರ್ತಾ ಇದೆ ಎಂದೆನಿಸುತ್ತದೆ. ಹಿಂಸಾ ಪ್ರವೃತ್ತಿ ತೊಲಗಬೇಕು’ ಎಂದರು.

ಹಿರಿಯ ಸಾಹಿತಿ ಡಾ| ಗುರುಲಿಂಗ ಕಾಪಸೆ ಮಾತನಾಡಿ, “ಯಾವುದೇ ಜೀವಿಯ ಪ್ರಾಣ ಹಾನಿ ಯಾವಾಗಲೂ
ಅಪಾಯಕಾರಿ. ಅಭಿಪ್ರಾಯ ವಿರೋಧ ಜೋರಾಗಿರಬಹುದು. ಆದರೆ ಇದಕ್ಕೆ ಬದಲಾಗಿ ಪ್ರಾಣ ಹಾನಿ ಅಪಾಯಕಾರಿ’
ಎಂದರು.

ಲೇಖಕ ಡಾ|ಜಗದೀಶ ಕೊಪ್ಪ ಮಾತನಾಡಿ, ಗೌರಿ ಲಂಕೇಶರು ಬದ್ಧತೆ ಇದ್ದ ಹೆಣ್ಣು ಮಗಳು. ಮೊದಲಿನ ದಿನಗಳಲ್ಲಿ ಕರ್ನಾಟಕದ ಎಲ್ಲ ವಿದ್ಯಮಾನ ಗಳನ್ನು ಇಂಗ್ಲಿಷ್‌ನಲ್ಲಿ ಚೆನ್ನಾಗಿ ಬರೆಯುತ್ತಿದ್ದರು. ವೈಚಾರಿಕ ಸಂಘರ್ಷ ಹತ್ಯೆಗೆ
ಕಾರಣವಾಗುತ್ತದೆ ಎಂದರೆ ನಂಬುವುದೇ ಕಷ್ಟ. ಈ ಹತ್ಯೆ ಅಧೋಗತಿಗೆ ಸಾಕ್ಷಿ ಯಂತಲೇ ಹೇಳಬಹುದು ಎಂದರು.

Advertisement

ವೈಚಾರಿಕತೆಯಿಂದ ಭಿನ್ನಾಭಿಪ್ರಾಯ ಎದುರಿಸಬೇಕೇ ಹೊರತು ಚಪ್ಪಲಿ,ಹೊಡೆದಾಟ,ಕೊಲೆಯಿಂದ ಅಲ್ಲ.
ಡಾ|ಕಲಬುರ್ಗಿ ಹಾಗೂ ಗೌರಿ ಹತ್ಯೆ ಒಂದು ಆಹುತಿ. ಇದು ಇಲ್ಲಿಗೆಕೊನೆಗೊಳ್ಳಲಿ. ಸಂವಾದ ಯಾವಾಗಲೂ ಸುಸಂಸ್ಕೃತವಾಗಿರಲಿ.

– ಡಾ| ಗಿರಡ್ಡಿ
ಗೋವಿಂದರಾಜ್‌ ವಿಮರ್ಶಕ

Advertisement

Udayavani is now on Telegram. Click here to join our channel and stay updated with the latest news.

Next