Advertisement

ನಡ್ಡಾ v/s ದೀದಿ : ಪ. ಬಂಗಾಲದಲ್ಲಿ ಯಾತ್ರೆ ಜಗಳ

02:46 AM Feb 06, 2021 | Team Udayavani |

ಕೋಲ್ಕತಾ: ಪಶ್ಚಿಮ ಬಂಗಾಲ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದ್ದಂತೆ ಬಿಜೆಪಿ ಮತ್ತು ಟಿಎಂಸಿ ನಡುವಿನ ಗುದ್ದಾಟವೂ ಜೋರಾಗಿದೆ. ನಾದಿಯಾ ಜಿಲ್ಲೆಯ ನವದ್ವೀಪದಲ್ಲಿ ಆರಂಭಿಸಲು ಉದ್ದೇಶಿಸಲಾಗಿದ್ದ ಬಿಜೆಪಿ ಅಧ್ಯಕ್ಷ ಜೆ.ಪಿ.ನಡ್ಡಾ ಅವರ ಪರಿವರ್ತನಾ ಯಾತ್ರೆಗೆ ಒಪ್ಪಿಗೆ ಕೊಡಲು ಪಶ್ಚಿಮ ಬಂಗಾಲ ಸರಕಾರ ನಿರಾಕರಿಸಿದೆ. ಆದರೆ, ಇದೇ ಸ್ಥಳದಲ್ಲಿ ಸಾರ್ವಜನಿಕ ರಾಲಿ ನಡೆಸಲು ಒಪ್ಪಿಗೆ ನೀಡಲಾಗಿದೆ ಎಂದು ಜಿಲ್ಲಾ ಎಸ್‌ಪಿ ಹೇಳಿದ್ದಾರೆ.

Advertisement

ವಿಚಿತ್ರವೆಂದರೆ ನಾದಿಯಾ ಜಿಲ್ಲೆಯಲ್ಲೇ ಶನಿವಾರ ಮಮತಾ ಬ್ಯಾನರ್ಜಿ ನೇತೃತ್ವದಲ್ಲಿ ಎರಡು ದಿನಗಳ ಜನಸಮರ್ಥನಾ ಯಾತ್ರೆಯೂ ಆರಂಭವಾಗಲಿದೆ. ಬಿಜೆಪಿ ಮತ್ತು ಟಿಎಂಸಿ ಯಾತ್ರೆಗಳು ಒಟ್ಟೊಟ್ಟಿಗೆ ಶುರುವಾಗುವ ಸಾಧ್ಯತೆ ಇದೆ. ಹೀಗಾಗಿ ನಮ್ಮ ಯಾತ್ರೆಗೆ ಒಪ್ಪಿಗೆ ಕೊಡಲು ನಿರಾಕರಿಸಲಾಗಿದೆ ಎಂಬುದು ಬಿಜೆಪಿ ಆರೋಪ. ಅದನ್ನು ಅಲ್ಲಗಳೆದಿರುವ ಮಮತಾ ಬ್ಯಾನರ್ಜಿ, ಬಿಜೆಪಿಯ ಯಾತ್ರೆಗೆ ಅನುಮತಿ ನಿರಾಕರಿಸಿಲ್ಲ. ಮುಖ್ಯ ಕಾರ್ಯದರ್ಶಿ ನಿರ್ಧಾರ ತೆಗೆದುಕೊಳ್ಳುತ್ತಾರೆ. ಇದರಲ್ಲಿ ಟಿಎಂಸಿಯ ಪಾತ್ರವಿಲ್ಲ ಎಂದಿದ್ದಾರೆ. ಇದರ ಜತೆಗೆ ನಾದಿಯಾ ಜಿಲ್ಲಾಡಳಿತ ಕೂಡ ಯಾತ್ರೆಗೆ ಅನುಮತಿ ನಿರಾಕರಿಸಲಾಗಿಲ್ಲ. ಆದರೆ ಜೆ.ಪಿ. ನಡ್ಡಾ ಅವರಿಗೆ ಝಡ್‌+ ಪ್ಲಸ್‌ ಭದ್ರತೆ ಇರುವುದರಿಂದ ನಾವು ಈ ಬಗ್ಗೆ ವ್ಯವಸ್ಥೆ ಮಾಡುವುದಕ್ಕಾಗಿ ವಿವರಣೆ ಕೇಳಿದ್ದೇವೆ ಎಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next