Advertisement

ನಾಡಪ್ರಭು ಕೆಂಪೇಗೌಡರು ಸ್ವಾಭಿಮಾನದ ಸಂಕೇತ

12:05 PM Jun 28, 2018 | |

ತಿಪಟೂರು: ಬೆಂಗಳೂರನ್ನು ಕಟ್ಟಿದ ನಾಡಪ್ರಭು ಕೆಂಪೇ ಗೌಡರು ಸ್ವಾಭಿಮಾನದ ಸಂಕೇತವಾಗಿದ್ದು, ಇವರು ಒಂದು ಸಮುದಾಯಕ್ಕೆ ಸೀಮಿತವಾಗದೆ ಎಲ್ಲಾ ಸಮುದಾಯಕ್ಕೂ ಮಾದರಿಯಾಗಿದ್ದಾರೆಂದು ಆದಿಚುಂಚನಗಿರಿ ಶಾಖಾಮಠ ಶ್ರೀಕ್ಷೇತ್ರ ದಸರೀಘಟ್ಟದ ಚಂದ್ರಶೇಖರನಾಥ ಸ್ವಾಮೀಜಿ ತಿಳಿಸಿದರು.

Advertisement

ನಗರದ ಒಕ್ಕಲಿಗರ ಸಮುದಾಯ ಭವನದಲ್ಲಿ ತಾಲೂಕು ಆಡಳಿತ ಮತ್ತು ತಾಲೂಕು ಒಕ್ಕಲಿಗರ ಸಂಘದ ಸಂಯುಕ್ತಾಶ್ರ ಯದಲ್ಲಿ ನಾಡಪ್ರಭು ಕೆಂಪೇಗೌಡರ 509ನೇ ಜಯಂತ್ಯುತ್ಸವದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.

ಬೆಂಗಳೂರು ನಿರ್ಮಾತೃ ನಾಡಪ್ರಭು ಕೆಂಪೇಗೌಡರ ಕೊಡುಗೆ ನಾಡಿಗೆ ಅಪಾರವಾದದ್ದು. ಅವರ ಜನಪರ ಕಾರ್ಯಗಳಾದ ಕೆರೆಕಟ್ಟೆಗಳ ನಿರ್ಮಾಣದ ಜೊತೆಗೆ ಧಾರ್ಮಿಕತೆಯ ಕಂಪನ್ನು ಎಲ್ಲೆಡೆ ಪಸರಿಸಿ ಜನಹಿತಕ್ಕಾಗಿ ಮೂಲಭೂತ ಸೌಲಭ್ಯಕ್ಕೆ ಮೊದಲ ಆದ್ಯತೆ ನೀಡಿದ್ದರು ಎಂದರು.

ದೂರದೃಷ್ಟಿಯ ನಾಯಕ: ದೂರದೃಷ್ಟಿ ನಾಯಕರಾಗಿ, ತ್ಯಾಗ ಮೂರ್ತಿಯಾಗಿ ಹಲವಾರು ಜನಹಿತ ಕಾರ್ಯಕ್ರಮಗಳ ಜೊತೆಗೆ ಬೆಂಗಳೂರು ನಗರದಲ್ಲಿ ಗಂಗಾಧರೇಶ್ವರ ದೇವಾಲಯ, ಆಂಜನೇಯಸ್ವಾಮಿ ದೇವಾಲಯ ಸೇರಿದಂತೆ ಕೆಂಪಾ ಬುದಿ ಕೆರೆ ನಿರ್ಮಾಣ ಮಾಡಿದ್ದರು. ಅವರ ಸಂದೇಶವನ್ನು ಪ್ರತಿಯೊಬ್ಬರು ರೂಢಿಸಿಕೊಂಡು ಉತ್ತಮ ಸಮಾಜ, ನಾಡು ನಿರ್ಮಾಣ ಮಾಡುವತ್ತ ಕಾರ್ಯೋನ್ಮುಖರಾಗಬೇಕೆಂದರು. 

ಸಮಾರಂಭ ಉದ್ಘಾಟಿಸಿದ ಶಾಸಕ ಬಿ.ಸಿ. ನಾಗೇಶ್‌ ಮಾತನಾಡಿ, ಜನಪರ ಆಡಳಿತ ನಡೆಸುವುದು ಹೇಗೆ ಎಂದು ಅಂದಿನ ಕಾಲದಲ್ಲಿಯೇ ನಾಡಪ್ರಭು ಕೆಂಪೇಗೌಡರು ತಿಳಿಸಿಕೊಟ್ಟಿದ್ದರು. 16ನೇ ಶತಮಾನದಲ್ಲಿಯೇ ದೂರದೃಷ್ಟಿ ನಾಯಕರಾಗಿ ನಗರ ಎಂದರೆ ಹೇಗಿರಬೇಕು, ಕೆರೆಕಟ್ಟೆಗಳ ನಿರ್ಮಾಣದಿಂದ ಮನುಷ್ಯನಿಗಾಗುವ ಉಪಯೋಗವೇನು ಎಂದು ತಿಳಿಸ ಕೊಟ್ಟಿರುವ ಕೆಂಪೇಗೌಡರು ಇಂತಹ ಮಹಾನ್‌ ನಾಯಕರ ಆದರ್ಶಗಳನ್ನು ಅರಿತು ಅವರ ಮಾರ್ಗದರ್ಶನದಲ್ಲಿ ಎಲ್ಲರೂ ಮುಂದುವರೆಯಬೇಕು ಎಂದು ಅವರು ಹೇಳಿದರು.

ಸಮಾಜ ಸೇವಕ ಶಾಂತಕುಮಾರ್‌ ಮಾತನಾಡಿ, ಕೆಂಪೇಗೌಡರು ಸ್ಥಾಪಿಸಿದ ಬೆಂಗಳೂರು ಇಂದು ವಿರಾಟ್‌ ಸ್ವರೂಪ
ದಲ್ಲಿ ಬೆಳೆದು ಅವರು ಕಂಡ ಕನಸುಗಳನ್ನು ನನಸಾಗಿಸಿ ವಿಶ್ವಮಾನ್ಯತೆ ಪಡೆದಿದ್ದು, ಇವರ ಕೊಡುಗೆ ಅನನ್ಯ ಎಂದರು.

Advertisement

ವಿಚಾರ ಧಾರೆ ಅರಿಯಿರಿ: ಡಾ. ಹನಿಯೂರು ಚಂದ್ರೇಗೌಡ ಉಪನ್ಯಾಸ ನೀಡುತ್ತಾ ಹೆಣ್ಣಿನ ಬಗ್ಗೆ ಅಪಾರ ಗೌರವ ಕೆಂಪೇ ಗೌಡರಲ್ಲಿತ್ತು. ಅವರ ಆಡಳಿತದಲ್ಲಿ ಹೆಣ್ಣಿನ ಶೋಷಣೆ, ದೌರ್ಜನ್ಯಕ್ಕೆ ಅವಕಾಶವಿರಲಿಲ್ಲ. ಸ್ತ್ರೀಯನ್ನು ದೇವತೆ ಎಂದು ಗೌರವಿಸುತ್ತಿದ್ದರು. ಅಲ್ಲದೆ ಸಾವಿರಾರು ಗಿಡ ಮರಗಳನ್ನು ಕೆಂಪೇಗೌಡರು ನೆಡಿಸಿ ವೃಕ್ಷ ಪ್ರೇಮಿಯಾಗಿದ್ದರು. ಕೆಂಪೇಗೌಡರ ವಿಚಾರಧಾರೆಯನ್ನು ಅರಿಯುವುದು ಸಾಕಷ್ಟಿದೆ ಎಂದರು.

ಜಯಂತ್ಯುತ್ಸವದಲ್ಲಿ ತಹಶೀಲ್ದಾರ್‌ ಡಾ. ಮಂಜುನಾಥ್‌, ಒಕ್ಕಲಿಗರ ಸಮಾಜದ ತಾಲೂಕು ಅಧ್ಯಕ್ಷ ಚಿದಾನಂದ್‌, ನಗರಸಭೆ ಅಧ್ಯಕ್ಷ ಪ್ರಕಾಶ್‌, ಡಾ. ವಿವೇಚನ್‌, ಡಾ. ಸುರೇಂದ್ರನಾಥ್‌, ಇೊ ಷಡಕ್ಷರಿ, ಜನಸ್ಪಂದನ ಟ್ರಸ್ಟ್‌ ಅಧ್ಯಕ್ಷ ಸಿ.ಬಿ. ಶಶಿಧರ್‌, ತಾಪಂ ಸದಸ್ಯ ನಾಗರಾಜು, ಕಸಾಪ ತಾಲೂಕು ಅಧ್ಯಕ್ಷ ಕೆ. ಬಾಲಕೃಷ್ಣ, ಸಂಘದ ಪ್ರಧಾನ ಕಾರ್ಯದರ್ಶಿ ಬಸವರಾಜು, ಬಸವೇಗೌಡ, ಗೋವಿಂದಪ್ಪ, ಬಿ.ಆರ್‌.ಸಿ ಯೋಗನರಸಿಂಹಸ್ವಾಮಿ ಮತ್ತಿತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next