Advertisement

ನಾಡಪ್ರಭು ಕೆಂಪೇಗೌಡ ಫೌಂಡೇಷನ್‌ ರಾಷ್ಟ್ರೀಯ ಉತ್ಸವ

03:38 PM Oct 30, 2018 | |

ಮುಂಬಯಿ: ನಾಡಪ್ರಭು ಕೆಂಪೇಗೌಡ ಫೌಂಡೇಷನ್‌ ವತಿಯಿಂದ ನಾಡಪ್ರಭು ಕೆಂಪೇಗೌಡರ 3ನೇ ರಾಷ್ಟ್ರೀಯ ಉತ್ಸವವು  ದಿಲ್ಲಿ ಕರ್ನಾಟಕ ಸಂಘದ ಸಭಾಂಗಣದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಿತು.

Advertisement

ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪರಮ ಪೂಜ್ಯ ಜಗದ್ಗುರು ಡಾ| ನಿರ್ಮಲಾನಂದನಾಥ ಮಹಾಸ್ವಾಮಿಗಳು,  ಸ್ಪಟಿಕಾಪುರಿ ಮಹಾಸಂಸ್ಥಾನ ಮಠದ ಪರಮಪೂಜ್ಯ ಶ್ರೀ  ನಂಜಾವಧೂತ ಮಹಾ ಸ್ವಾಮೀಜಿ,  ಆದಿಚುಂಚನಗಿರಿ ಮಠದ ದೆಹಲಿ ಶಾಖೆಯ ಶ್ರೀ ಆನಂದ ತೀರ್ಥನಾಥ ಸ್ವಾಮೀಜಿ,  ಅಂಕಿಅಂಶ ಕಾರ್ಯಕ್ರಮ ಅನುಷ್ಠಾನ ಕೇಂದ್ರ ಸಚಿವ ಡಿ. ವಿ. ಸದಾನಂದಗೌಡ, ರಾಜ್ಯಸಭಾ ಸದಸ್ಯ  ರಾಜೀವ ಗೌಡ, ಜೆಎನ್‌ಯು ಇದರ ಪ್ರಾಧ್ಯಾಪಕ ಪ್ರೊ| ಎಚ್‌.ಎಸ್‌. ಶಿವಪ್ರಕಾಶ್‌ ಹಾಗೂ ಅನೇಕ ಗಣ್ಯರ ಸಮ್ಮುಖದಲ್ಲಿ ಉತ್ಸವಕ್ಕೆ ಚಾಲನೆ ನೀಡಲಾಯಿತು.

ಪೂರ್ವಾಹ್ನ 11 ರಿಂದ ರಿಶಬ್‌ ಶೆಟ್ಟಿ ನಿರ್ದೇಶನದ “ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಕಾಸರಗೋಡು’ ಕನ್ನಡ ಚಲನಚಿತ್ರ ಪ್ರದರ್ಶನದಿಂದ ಆರಂಭಗೊಂಡ ಕಾರ್ಯಕ್ರಮ ರಾತ್ರಿ 10 ರವರೆಗೆ ನಡೆಯಿತು. ಪ್ರೊ| ಕೃಷ್ಣೇಗೌಡ ಹಾಗೂ  ಸುಧಾ ಬರಗೂರು ಅವರು ಹಾಸ್ಯ ಕಾರ್ಯಕ್ರಮ ನೀಡಿ ಪ್ರೇಕ್ಷಕರನ್ನು ನಗೆಗಡಲಲ್ಲಿ ಮುಳುಗಿಸಿದರು. 

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಟರಾಜ ಕಲಾನಿಕೇತನ ಬೆಂಗಳೂರು, ನಾಟ್ಯಾಂಜಲಿ ನೃತ್ಯ ಶಾಲೆ, ಹೊಸಕೋಟೆ,  ಯಾದವ ನಾಟ್ಯ ಕಲಾ ಅಕಾಡೆಮಿ, ಮುಳುಬಾಗಿಲು,  ಕೀರ್ತಿ ನಾಟ್ಯ ಕಲಾ ಅಕಾಡೆಮಿ ಬೆಂಗಳೂರು,  ನಟರಾಜ ಕಲಾನಿಕೇತನ ಮಂಡ್ಯ, ನವಚೇತನ ನಾಟ್ಯ ಕಲಾ ಅಕಾಡೆಮಿ ಹೊಸಕೋಟೆ, ಪುಷ್ಪಾಂಜಲಿ ನಾಟ್ಯ ಕಲಾ ಅಕಾಡೆಮಿ ಬೆಂಗಳೂರು ಇವರಿಂದ ನೃತ್ಯ ವೈವಿಧ್ಯ ನಡೆಯಿತು.

ಸ್ಥಳೀಯ ಕಲಾವಿದರುಗಳಾದ  ಹರ್ಷಿತಾ ಕೊಕ್ಕಡ ಅವರಿಂದ ಭರತನಾಟ್ಯ ಹಾಗೂ  ಅರುಣ್‌ ನೃತ್ಯ ಸಂಯೋಜನೆಯ ನೃತ್ಯಕಾರ್ಯಕ್ರಮ ನಡೆಯಿತು. ಸಭಾ ಕಾರ್ಯಕ್ರಮವನ್ನು ದಿಲ್ಲಿ ಕರ್ನಾಟಕ ಸಂಘದ ಕಾರ್ಯಕಾರಿ ಸಮಿತಿಯ ಸದಸ್ಯೆ ಪೂಜಾ ಪಿ. ರಾವ್‌ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವಿದ್ವಾನ್‌ ಕೋಲಾರ ರಮೇಶ್‌ ಅವರು ನಿರೂಪಿಸಿದರು.
 

Advertisement
Advertisement

Udayavani is now on Telegram. Click here to join our channel and stay updated with the latest news.

Next