Advertisement

ಬರ್ತ್‌ಡೇ ಬಾಲಕನ ಜತೆ ನಡಾಲ್‌ ಹೋರಾಟ

06:00 AM Aug 13, 2018 | |

ಟೊರೊಂಟೊ: ವಿಶ್ವ ಖ್ಯಾತಿಯ ಆಟಗಾರ ರಫೆಲ್‌ ನಡಾಲ್‌ ಅವರು ಟೊರೊಂಟೊ ಮಾಸ್ಟರ್ ಟೆನಿಸ್‌ ಕೂಟದ ಪ್ರಶಸ್ತಿಗಾಗಿ ಬರ್ತ್‌ಡೆ ಬಾಲಕ ಸ್ಟೆಫಾನೊ ಸಿಸಿಪಾಸ್‌ ಅವರ ಸವಾಲನ್ನು ಎದುರಿಸಲಿದ್ದಾರೆ.

Advertisement

ಸ್ಪೇನ್‌ನ ನಡಾಲ್‌ ಅವರು ಗ್ರೀಕ್‌ನ ಯುವ ಆಟಗಾರ ಸಿಸಿಪಾಸ್‌ ಅವರ 20ನೇ ಹುಟ್ಟುಹಬ್ಬದ ಸಂಭ್ರಮ ಆಚರಿಸದಂತೆ ತಡೆಯಲು ಮುಂದಾಗಿದ್ದಾರೆ. ವಿಂಬಲ್ಡನ್‌ ಫೈನಲಿಸ್ಟ್‌ ಕೆವಿನ್‌ ಆ್ಯಂಡರ್ಸನ್‌ ಅವರನ್ನು 6-7 (4-7), 6-4, 7-6 (9-7) ಸೆಟ್‌ಗಳಿಂದ ಸೋಲಿಸಿದ ಸಿಸಿಪಾಸ್‌ ತನ್ನ ಟೆನಿಸ್‌ ಬಾಳ್ವೆಯಲ್ಲಿ ಎರಡನೇ ಬಾರಿ ಫೈನಲ್‌ ಹಂತಕ್ಕೇರಿದ ಸಾಧನೆ ಮಾಡಿದರು. ಇದೇ ವೇಳೆ ಕರೆನ್‌ ಕಚನೋವ್‌ ಅವರನ್ನು 7-6 (7-3), 6-4 ಸೆಟ್‌ಗಳಿಂದ ಸೋಲಿಸಿದ ನಡಾಲ್‌ ಫೈನಲ್‌ ತಲುಪಿದರು. 

ಮಾಸ್ಟರ್ 1000 ಪ್ರಶಸ್ತಿ ಗೆದ್ದವರ ಪಟ್ಟಿಯಲ್ಲಿ ನಡಾಲ್‌ ಅಗ್ರಸ್ಥಾನದಲ್ಲಿದ್ದಾರೆ. ಅವರು ಇಷ್ಟರವರೆಗೆ 32 ಪ್ರಶಸ್ತಿ ಗೆದ್ದಿದ್ದಾರೆ. ಅವರೀಗ 116ನೇ ಎಟಿಪಿ ಟೂರ್‌ ಫೈನಲ್‌ನಲ್ಲಿ ಆಡುತ್ತಿದ್ದು 80ನೇ ಪ್ರಶಸ್ತಿ ಗೆಲ್ಲಲು ಇನ್ನೆರಡು ಪ್ರಶಸ್ತಿ ಬೇಕಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next