Advertisement

ಸ್ವಚ್ಚತೆಗೆ ಆದ್ಯತೆ ನೀಡಲು ನಡಹಳ್ಳಿ ಸೂಚನೆ

07:34 PM May 28, 2021 | Team Udayavani |

ಮುದ್ದೇಬಿಹಾಳ: ತಾಲೂಕಿನಲ್ಲಿ ಬರುವ ಸರ್ಕಾರಿ ಆಸ್ಪತ್ರೆಗಳನ್ನು ಸ್ವತ್ಛವಾಗಿರಿಸಿಕೊಂಡು ಸಂಭವನೀಯ ಕೋವಿಡ್‌ ಮೂರನೇ ಅಲೆ ತಡೆಗಟ್ಟಲು ಕೋವಿಡ್‌ ಕೇರ್‌ ಸೆಂಟರ್‌ಗಳ ಮಾದರಿಯಲ್ಲಿ ಸಜ್ಜುಗೊಳಿಸಬೇಕು ಎಂದು ಶಾಸಕ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ನಿಗಮದ ಅಧ್ಯಕ್ಷ ಎ.ಎಸ್‌. ಪಾಟೀಲ ನಡಹಳ್ಳಿ ಅಧಿಕಾರಿಗಳಿಗೆ ಸೂಚಿಸಿದರು.

Advertisement

ಗುರುವಾರ ಢವಳಗಿ, ಮಡಿಕೇಶ್ವರ, ಕೊಣ್ಣೂರ ಪ್ರಾಥಮಿಕ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಅಲ್ಲಿರುವ ವ್ಯವಸ್ಥೆ ಪರಿಶೀಲಿಸಿ ಅವರು ಮಾತನಾಡಿದರು. ಮೂರೂ ಕೇಂದ್ರಗಳಲ್ಲಿ ಸ್ವತ್ಛತೆಗೆ ಹೆಚ್ಚಿನ ಆದ್ಯತೆ ಕೊಡಬೇಕು. ಅಗತ್ಯ ಔಷಧ, ಸಾಮಗ್ರಿ ಸಂಗ್ರಹದಲ್ಲಿಡಬೇಕು. ತುರ್ತು ದುರಸ್ತಿಗೆ ಕ್ರಿಯಾಯೋಜನೆ ತಯಾರಿಸಬೇಕು. ಎಲ್ಲೆಲ್ಲಿ ಏನೇನು ಸಮಸ್ಯೆ ಇದೆ ಅನ್ನೋದನ್ನು ಪಟ್ಟಿ ಮಾಡಿ ಸಂಬಂಧಿಸಿದ ಅಧಿಕಾರಿಗಳಿಗೆ ಹಸ್ತಾಂತರಿಸಿ ಆದಷ್ಟು ಬೇಗ ಸಮಸ್ಯೆಗೆ ಪರಿಹಾರ ಕಲ್ಪಿಸಿಕೊಳ್ಳುವುದು ಆಯಾ ಕೇಂದ್ರಗಳ ಉಸ್ತುವಾರಿ ವೈದ್ಯರ ಜವಾಬಾœರಿಯಾಗಿದೆ ಎಂದು ತಿಳಿಸಿದರು.

ಗ್ರಾಮೀಣ ಭಾಗದಲ್ಲಿ ಕೋವಿಡ್‌ ಸೋಂಕು ಹರಡುವುದನ್ನು ತಡೆಗಟ್ಟಲು ಪ್ರತಿ ಆರೋಗ್ಯ ಕೇಂದ್ರದಲ್ಲಿ 15-20 ಬೆಡ್‌ ವ್ಯವಸ್ಥೆ ಕಲ್ಪಿಸಬೇಕು. ಇದಕ್ಕೆ ತಗಲುವ ಖರ್ಚನ್ನು ಶಾಸಕರ ನಿಧಿ ಯಿಂದ ಬಳಸಲು ಸಿದ್ಧನಿದ್ದೇನೆ. ಈ ಕೇಂದ್ರಗಳಲ್ಲಿ ಅಗತ್ಯ ಮುಂಜಾಗರೂಕತಾ ಕ್ರಮಗಳನ್ನು ಈಗಿನಿಂದಲೇ ಕೈಗೊಳ್ಳಬೇಕು. ಮುಂಬರುವ ಗಂಭೀರ ಪರಿಸ್ಥಿತಿ ಎದುರಿಸಲು ಸಜ್ಜಾಗಿರಬೇಕು. ಸಮಸ್ಯೆ ಉಲ್ಬಣಗೊಂಡಾಗ ಅದು ಇಲ್ಲ, ಇದು ಇಲ್ಲ ಎಂದು ನೆಪ ಹೇಳಬಾರದು ಎಂದು ತಿಳಿಸಿದರು.

ಪ್ರತಿ ಆರೋಗ್ಯ ಕೇಂದ್ರದಲ್ಲಿ ಆಕ್ಸಿಜನ್‌ ಬೆಡ್‌ ಅವಶ್ಯಕತೆ ಪರಿಗಣಿಸಿ ಅಗತ್ಯ ಬಿದ್ದರೆ ಅಂಥ ಬೆಡ್‌ ಸ್ಥಾಪಿಸಬೇಕು. ವಿದೇಶಿ ಮಾದರಿಯ ಕಮೋಡ್‌ಗಳನ್ನು ಶೌಚಾಲಯದಲ್ಲಿ ಅಳವಡಿಸಬೇಕು. ಕೋವಿಡ್‌ ಸೋಂಕು ನಿಯಂತ್ರಿಸಲು ಮತ್ತು ಸೋಂಕಿತರಿಗೆ ಸೂಕ್ತ ಚಿಕಿತ್ಸೆ ಕೊಡಲು ಅಗತ್ಯ ಇರುವ ಎಲ್ಲ ವ್ಯವಸ್ಥೆಯನ್ನೂ ಈಗಿನಿಂದಲೇ ಮಾಡಿಕೊಳ್ಳಬೇಕು ಎಂದು ಶಾಸಕರು ಕಿವಿಮಾತು ಹೇಳಿದರು.

ಆಯಾ ಆರೋಗ್ಯ ಕೇಂದ್ರಗಳಲ್ಲಿ ಸ್ವತ್ಛತೆ ಇಲ್ಲದಿರುವುದನ್ನು ಕಂಡು ಸಂಬಂಧಿ ಸಿದ ವೈದ್ಯಾ  ಧಿಕಾರಿಗಳು, ಕೇಂದ್ರದ ಉಸ್ತುವಾರಿಗಳ ಮೇಲೆ ಹರಿಹಾಯ್ದ ಶಾಸಕರು ದುರಸ್ತಿಗಾಗಿ ಬರುವ ಅನುದಾನ ಏನಾಗುತ್ತದೆ ಎಂದು ಪ್ರಶ್ನಿಸಿ ಇಂಥ ಅಶಿಸ್ತನ್ನು ಸಹಿಸುವುದಿಲ್ಲ. ಆಸ್ಪತ್ರೆ ದುರಸ್ತಿಗೆ ಬರುವ ಅನುದಾನವನ್ನು ಅದಕ್ಕಾಗಿಯೇ ಬಳಸಬೇಕು. ಅನ್ಯ ಕೆಲಸಕ್ಕೆ ಬಳಸಿದರೆ, ದುರ್ಬಳಕೆ ಆದದ್ದು ಕಂಡು ಬಂದರೆ ಕ್ರಮಕ್ಕೆ ಶಿಫಾರಸು ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next