Advertisement

ಗಡಿನಾಡಿನ ನುಡಿ ಉತ್ಸವದಲ್ಲಿ ನಾದ ನಿನಾದ

06:41 PM Mar 06, 2020 | mahesh |

ಕರಾವಳಿ ಸಾಂಸ್ಕೃತಿಕ ಪ್ರತಿಷ್ಠಾನದ ಆಶ್ರಯದಲ್ಲಿ ನಡೆದ ಏಳನೆಯ ಕೇರಳ ರಾಜ್ಯ ಕನ್ನಡ ಸಮ್ಮೇಳನದ ಅಂಗವಾಗಿ ಆಯೋಜಿಸಲಾದ ಸಾಂಸ್ಕೃತಿಕ ಕಾರ್ಯಕ್ರಮ ಸಹಸ್ರಾರು ಕನ್ನಡ ಮನಸ್ಸುಗಳಿಗೆ ಮುದ ನೀಡಿತು. ಎರಡು ದಿನಗಳ ಕೇರಳ ಕರ್ನಾಟಕ ಉತ್ಸವದ ಮೊದಲ ದಿನ ಕುಶಾಲನಗರದ ನಾದಾಂತ ನಾಟ್ಯ ಮಯೂರಿ ನೃತ್ಯಾಲಯದ ಪ್ರತಿಭೆಗಳು ವಿ| ಮಂಜುಭಾರ್ಗವಿ ನಿರ್ದೇಶನದಲ್ಲಿ ಶಾಸ್ತ್ರೀಯ ನೃತ್ಯ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾದರು. ಮಂಜುಭಾರ್ಗವಿ ಅವರ ಜೊತೆ ನಾದಾಂತದ ವಿದ್ಯಾರ್ಥಿಗಳಾದ ಲಾವಣ್ಯ ಬಿ.ಸಿ., ಪೂಜಾ ಎಸ್‌., ಶ್ರೇಣಿ ಗೌಡ, ಅಂಕಿತಾ ಬಾಲರಾಜ್‌ ಶೃತಿ ಮಧುರವಾದ ಹಾಡುಗಳಿಗೆ ಭಾವನೆಯ ಬಲೆ ಹೆಣೆದು ಭಾವಪರವಶವಾಗಿಸಿದರು.

Advertisement

ಪ್ರಾರಂಭದಲ್ಲಿ ಭೋ ಶಂಭೋ… ಹಾಡಿಗೆ ಹೆಜ್ಜೆ ಹಾಕಿದ ಕಲಾವಿದರು ಬಳಿಕ ಗಣೇಶ ಪುಷ್ಪಾಂಜಲಿ ಸಲ್ಲಿಸಿದರು. ಕನ್ನಡ ನಾಡುನುಡಿಗೆ ಸಂಬಂಧಿಸಿದ ರಚನೆಗಳಿಗೂ ಭಾವಪೂರ್ಣವಾಗಿ ನರ್ತಿಸಿದರು. ವಚನ ನೃತ್ಯ ಗಮನ ಸೆಳೆಯಿತು. ನಾದಾಂತ ನಾಟ್ಯಮಯೂರಿ ನೃತ್ಯಾಲಯದ ನಾದವೇದ ನಿನಾದ ಭಾವ ಅನುಭವದ ಅನುಭಾವ ಮಂಟಪದಲ್ಲಿ ಅದ್ಭುತ ಸನ್ನಿವೇಶ ಸೃಷ್ಟಿಸಿತು.

ರಾಧಾಕೃಷ್ಣ ಕೆ. ಉಳಿಯತ್ತಡ್ಕ

Advertisement

Udayavani is now on Telegram. Click here to join our channel and stay updated with the latest news.

Next