Advertisement

ಪಾಕಿಸ್ತಾನ ಜತೆಗೆ ಮಾಲ್ಡೀವ್ಸ್‌ ಒಪ್ಪಂದ

06:00 AM Jul 08, 2018 | |

ನವದೆಹಲಿ: ಮಾಲ್ಡೀವ್ಸ್‌ ಹಾಗೂ ಭಾರತದ ರಾಜತಾಂತ್ರಿಕ ಸಂಬಂಧ ಹಳಸುತ್ತಿರುವ ಮಧ್ಯೆಯೇ, ವಿದ್ಯುತ್‌ ಕ್ಷೇತ್ರದಲ್ಲಿ ಸುಧಾರಣೆಗಾಗಿ ಪಾಕಿಸ್ತಾನದ ಜತೆಗೆ ಒಪ್ಪಂದಕ್ಕೆ ಮಾಲ್ಡೀವ್ಸ್‌ ಸಹಿ ಹಾಕಿದೆ. ಈಗಾಗಲೇ ಕಾಪ್ಟರ್‌ಗಳನ್ನು ಹಿಂದಕ್ಕೆ ಕರೆಸಿಕೊಳ್ಳುವಂತೆ ಭಾರತಕ್ಕೆ ಸೂಚಿಸಿರುವ ಮಾಲ್ಡೀವ್ಸ್‌, ಅಲ್ಲಿರುವ ಭಾರತೀಯರಿಗೆ ಕೆಲಸ ಅನುಮತಿಯನ್ನೂ ಹಿಂಪಡೆದಿದೆ.

Advertisement

ಮಾಲ್ಡೀವ್ಸ್‌ನ ಸರ್ಕಾರಿ ಸ್ವಾಮ್ಯದ ವಿದ್ಯುತ್‌ ಕಂಪನಿ ಸ್ಟೆಲ್ಕೋ, ಪಾಕಿಸ್ತಾನದೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ. ಇದರ ಅಡಿ ಸಾಮರ್ಥ್ಯ ಸುಧಾರಣೆ ಚಟುವಟಿಕೆಗಳನ್ನು ಕೈಗೊಳ್ಳಲಾಗುತ್ತದೆ. ಆದರೆ ಈಗಾಗಲೇ ಪಾಕಿಸ್ತಾನವೇ ವಿದ್ಯುತ್‌ ಕೊರತೆ ಹಾಗೂ ಇತರ ಸಮಸ್ಯೆಯಿಂದ ಬಳಲುತ್ತಿರುವುದರ ಜತೆಗೆ, ವಿದ್ಯುತ್‌ ಕ್ಷೇತ್ರದಲ್ಲಿ ಚೀನಾ ಮೇಲೆ ಅವಲಂಬಿತವಾಗಿದೆ. ಹೀಗಿದ್ದರೂ, ಮಾಲ್ಡೀವ್ಸ್‌ಗೆ ಯಾವ ಪ್ರಮಾಣದಲ್ಲಿ ಸಹಾಯ ಮಾಡಲಿದೆ ಎಂಬುದು ಸ್ಪಷ್ಟವಿಲ್ಲ. ಮಾಲ್ಡೀವ್ಸ್‌ ನೆಲದಲ್ಲಿ ಭಾರತದ ಪ್ರಭಾವ ಕುಗ್ಗಿಸಲು ಅಧ್ಯಕ್ಷ ಅಬ್ದುಲ್ಲಾ ಯಮೀನ್‌ ನಡೆಸುತ್ತಿರುವ ಪ್ರಯತ್ನಗಳಲ್ಲಿ ಇದೂ ಒಂದು ಎನ್ನಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next