Advertisement
ಈ ಸಂದರ್ಭ ನ.ಪಂ. ಮುಖ್ಯಾಧಿಕಾರಿ ಮತ್ತಡಿ ಹಾಗೂ ಎಂಜಿನಿಯರ್ ಶಿವಕುಮಾರ್, ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ಅವರು ಕಸ ಸಮಸ್ಯೆ ಕುರಿತು ಪ್ರಸ್ತಾವಿಸಿದರು.
ಜಿಲ್ಲಾಧಿಕಾರಿ ಅವರು ನ.ಪಂ. ಮುಖ್ಯಾಧಿಕಾರಿ ಅವರಿಂದ ಕಸ ವಿಲೇವಾರಿ ಕುರಿತು ಮಾಹಿತಿ ಪಡೆದು, ಪ್ರತಿದಿನದ ತ್ಯಾಜ್ಯವನ್ನು ಹಸಿ ಕಸ, ಒಣ ಕಸವೆಂದು ಬೇರ್ಪಡಿಸಿ ಸಂಗ್ರಹಿಸಬೇಕು. ಆಯಾ ದಿನ ಸಂಗ್ರಹವಾದ ಕಸವನ್ನು ಆ ದಿನವೇ ವಿಲೇ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು. ನ.ಪಂ. ಆವರಣದಲ್ಲಿ ಸಂಗ್ರಹಿಸಿಟ್ಟರೆ ಉಂಟಾಗುವ ಸಮಸ್ಯೆಗಳ ಬಗ್ಗೆ ಅಧಿಕಾರಿಗಳಾದ ನಿಮಗೆ ಅರಿವಿರಬೇಕು. ಪ್ರಸ್ತುತ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ನೀವು ನಿಗದಿ ಮಾಡಿದಂತೆ ಮುಂದುವರಿಯಿರಿ. ಅದನ್ನು ಜಾರಿಗೆ ತಂದು ಕಸದ ಸಮಸ್ಯೆಯನ್ನು ಸರಿಪಡಿಸಿ. ಬರ್ನಿಂಗ್ ಮೆಷಿನ್ ಖರೀದಿಗೆ ನಿರ್ಧರಿಸಿದಂತೆ ಅದನ್ನು ತತ್‌ಕ್ಷಣ ಪಡೆದು ಕಸ ವಿಲೇಗೆ ಕಾರ್ಯಪ್ರವೃತ್ತರಾಗಿ ಎಂದು ಜಿಲ್ಲಾಧಿಕಾರಿ ಸೂಚಿಸಿದರು.
Related Articles
ತಾಲೂಕು ಕಚೇರಿಯಿಂದ ನಗರ ಪಂಚಾಯತ್‌ಗೆ ಆಗಮಿಸಿದ ಜಿಲ್ಲಾಧಿಕಾರಿ ಕಸದ ರಾಶಿ ಕಂಡು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ವಿಲೇವಾರಿಗೆ ಸೂಕ್ತ ಕ್ರಮ ಕೈಗೊಳ್ಳದ್ದಕ್ಕೆ ಗರಂ ಆದ ಅವರು, ವಾರದೊಳಗೆ ಇಲ್ಲಿಂದ ಸೂಕ್ತ ಸ್ಥಳಕ್ಕೆ ವೈಜ್ಞಾನಿಕ ರೀತಿಯಲ್ಲಿ ಕಸ ಸಾಗಿಸುವಂತೆ ನಿರ್ದೇಶನ ನೀಡಿದರು. ನ.ಪಂ. ಸದಸ್ಯ ವಿನಯ ಕುಮಾರ್ ಕಂದಡ್ಕ ಮತ್ತಿತರರು ಉಪಸ್ಥಿತರಿದ್ದರು.
Advertisement
ವಿವಿಧೆಡೆ ಸಿಂಧೂ ರೂಪೇಶ್ ಭೇಟಿ
ಸುಳ್ಯ: ದ.ಕ. ಜಿಲ್ಲಾಧಿಕಾರಿ ಬಿ. ಸಿಂಧೂ ರೂಪೇಶ್ ಶುಕ್ರವಾರ ವಿವಿಧೆಡೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಜಟ್ಟಿಪಳ್ಳ ಅಂಗನವಾಡಿ, ಕಲ್ಲುಮುಟ್ಲು ಅಂಗನವಾಡಿಗೆ ಭೇಟಿ ನೀಡಿ ಅಲ್ಲಿನ ಸಮಸ್ಯೆ ಆಲಿಸಿದರು. ಪುಟಾಣಿಗಳೊಂದಿಗೆ ಕೆಲ ಹೊತ್ತು ಕಳೆದರು. ಬಳಿಕ ಕೆರೆಮೂಲೆಯಲ್ಲಿ ಮನೆಗೆ ಭೇಟಿ, ಬೀರಮಂಗಲದಲ್ಲಿ ಪ್ರಾಕೃತಿಕ ವಿಕೋಪದಿಂದ ಸಂಪೂರ್ಣ ಹಾನಿಯಾದ ಲಲಿತಾ ಅವರ ಮನೆ ನಿರ್ಮಾಣ ಕಾರ್ಯ ಪರಿಶೀಲನೆ, ಅಜ್ಜಾವರ ಪುರುಷಮ್ಮ ಅವರ ಮನೆ ನಿರ್ಮಾಣ ಕುರಿತು ಪರಿಶೀಲನೆ ನಡೆಸಿದರು. ತಹಶೀಲ್ದಾರ್ ಎನ್.ಎ. ಕುಂಞಿ ಅಹ್ಮದ್, ಗ್ರಾಮಕರಣಿಕ ತಿಪ್ಪೇಶ ಮೊದಲಾದವರು ಉಪಸ್ಥಿತರಿದ್ದರು.