Advertisement

Road Mishap: ರಾ.ಹೆ. 66: 6 ತಿಂಗಳಲ್ಲಿ 108 ವಾಹನ ಅಪಘಾತ; 13 ಸಾವು

12:20 PM Apr 13, 2024 | Team Udayavani |

ಕಾಸರಗೋಡು: ಜಿಲ್ಲೆಯಲ್ಲಿ ರಾಷ್ಟ್ರೀಯ ಹೆದ್ದಾರಿ-66 ಅಭಿವೃದ್ಧಿ ಯೋಜನೆ ಕಾಮಗಾರಿ ನಡೆಯುತ್ತಿದ್ದು, ಆರು ತಿಂಗಳಲ್ಲಿ ರಾ.ಹೆ.ಯ ವಿವಿಧೆಡೆ 108 ವಾಹನ ಅಪಘಾತಗಳು ಸಂಭವಿಸಿವೆ.

Advertisement

ಇದರಲ್ಲಿ 13 ಮಂದಿ ಸಾವಿಗೀಡಾಗಿ ನೂರಾರು ಮಂದಿ ಗಾಯಗೊಂಡಿದ್ದಾರೆ. 2023ರ ಸೆಪ್ಟಂಬರ್‌ನಲ್ಲಿ 19 ವಾಹನ ಅಪಘಾತ ಸಂಭವಿಸಿತ್ತು. ಇದರಲ್ಲಿ ಓರ್ವ ಸಾವಿಗೀಡಾಗಿ 20 ಮಂದಿ ಗಾಯಗೊಂಡಿದ್ದರು.

ಅಕ್ಟೋಬರ್‌ನಲ್ಲಿ 13 ವಾಹನ ಅಪಘಾತ ಸಂಭವಿಸಿದ್ದು, ಇಬ್ಬರು ಸಾವಿಗೀಡಾಗಿ 12 ಮಂದಿ ಗಾಯಗೊಂಡಿದ್ದರು. ನವೆಂಬರ್‌ನಲ್ಲಿ 19 ಅಪಘಾತಗಳು ಸಂಭವಿಸಿದ್ದು, ಇಬ್ಬರು ಸಾವಿಗೀಡಾಗಿ 20 ಮಂದಿ ಗಾಯಗೊಂಡಿದ್ದಾರೆ. ಡಿಸೆಂಬರ್‌ನಲ್ಲಿ 20 ವಾಹನ ಅಪಘಾತಗಳು ಸಂಭವಿಸಿದ್ದು, ಮೂವರು ಸಾವಿಗೀಡಾಗಿ 25 ಮಂದಿ ಗಾಯಗೊಂಡಿದ್ದರು.

2024ರ ಜನವರಿಯಲ್ಲಿ 21 ವಾಹನ ಅಪಘಾತಗಳು ಸಂಭವಿಸಿವೆ. ಮೂವರು ಸಾವಿಗೀಡಾಗಿ 25 ಮಂದಿ ಗಾಯಗೊಂಡಿದ್ದರು. ಫೆಬ್ರವರಿಯಲ್ಲಿ 16 ವಾಹನ ಅಪಘಾತಗಳು ಸಂಭವಿಸಿದ್ದು, ಇಬ್ಬರು ಪ್ರಾಣ ಕಳೆದುಕೊಂಡಿದ್ದಾರೆ. 19 ಮಂದಿ ಗಾಯಗೊಂಡಿದ್ದಾರೆ.

ಹೆದ್ದಾರಿ ಕಾಮಗಾರಿ ನಡೆಯುತ್ತಿರುವ ಕಾರಣ ಜಿಲ್ಲೆಯ ಹಲವೆಡೆ ವಾಹನಗಳ ಮಾರ್ಗವನ್ನು ದಿಢೀರನೇ ಬದಲಾಯಿಸಲಾಗುತ್ತಿದೆ. ಇದು ವಾಹನ ಚಾಲಕರಲ್ಲಿ ಗೊಂದಲವನ್ನು ಸೃಷ್ಟಿಸುತ್ತಿದ್ದು, ಕೆಲವೊಮ್ಮೆ ಅಪಘಾತಗಳಿಗೂ ಕಾರಣವಾಗುತ್ತಿದೆ ಎಂಬ ಅಭಿಪ್ರಾಯ ಕೇಳಿಬರುತ್ತಿದೆ.

Advertisement

ರಾಷ್ಟ್ರೀಯ ಹೆದ್ದಾರಿಯ ದಾರಿಯುದ್ದಕ್ಕೂ ಹಲವೆ‌ಡೆ ರಸ್ತೆಗಳನ್ನು ನಿರ್ಬಂಧಿಸಿರುವ ಕಾರಣ, ಜನರೂ ರಸ್ತೆ ದಾಟದ ಪರಿಸ್ಥಿತಿ ಇದೆ. ರಸ್ತೆ ದಾಟಲು ಎಷ್ಟೋ ದೂರ ನಡೆಯಬೇಕಾದ ಪರಿಸ್ಥಿತಿ ಇದ್ದರೆ, ವಾಹನಗಳಿಗೆ ಕಿಲೋ ಮೀಟರ್‌ ತನಕ ಸಾಗಿ ಅಂಡರ್‌ ಪ್ಯಾಸೇಜ್‌ ಮೂಲಕ ಮತ್ತೂಂದ ರಸ್ತೆಗೆ ಸಾಗುವಂತಾಗಿದೆ.

ಕಾಸರಗೋಡು ನಗರದ ಕರಂದಕ್ಕಾಡಿನಲ್ಲಿ ವಾಹನಗಳಿಗೆ ರಸ್ತೆ ದಾಟಬೇಕಾಗಿದ್ದಲ್ಲಿ ಅಲ್ಲಿಂದ ಸುಮಾರು ಅರ್ಧ ಕಿ.ಮೀ ದೂರವಿರುವ ಅಡ್ಕತ್ತಬೈಲ್‌ ಗೆ ಸಾಗಿ ಅಲ್ಲಿ ದಾಟ ಬೇಕಾಗಿದೆ. ಕಾಸರಗೋಡು ಅಗ್ನಿಶಾಮಕ ದಳ ಕೇಂದ್ರವಿರುವ ಪ್ರದೇಶವೂ ಆಗಿರುವ ಕರಂದಕ್ಕಾಡಿನಿಂದ ಅಗ್ನಿಶಾಮಕ ದಳಕ್ಕೂ ತುರ್ತು ಸಂದರ್ಭದಲ್ಲಿ ದಾಟದ ಸ್ಥಿತಿ ಉದ್ಭವಿಸಿದೆ. ಹಾಗಾಗಿ ಅಗ್ನಿಶಾಮಕ ದಳ ಕೇಂದ್ರದ ಬಳಿಯಲ್ಲೇ ರಸ್ತೆ ದಾಟುವ ಸೌಕರ್ಯ ಕಲ್ಪಿಸಬೇಕೆಂಬ ಬೇಡಿಕೆ ಸಾರ್ವಜನಿಕರಿಂದ ವ್ಯಕ್ತವಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next