Advertisement

ಗರ್ಭಗುಡಿಯ ಅಸಲಿ ಗುಟ್ಟು

12:20 PM Oct 03, 2018 | |

ಹೊಟ್ಟೆಯಲ್ಲಿ ಗರ್ಭ ಮೂಡಿದಾಗ ಕೇವಲ ತಾಯಿಗಷ್ಟೇ ಅಲ್ಲ, ಮನೆಮಂದಿಗೆಲ್ಲ ಸಡಗರ. ಆಕೆಯ ಆರೋಗ್ಯದ ಕಾಳಜಿಯ ಜೊತೆಜೊತೆಗೇ, ಹುಟ್ಟುವ ಮಗು ಗಂಡಾ, ಹೆಣ್ಣಾ ಎಂಬ ಕುತೂಹಲವೂ ಮೂಡುತ್ತದೆ. ಗರ್ಭಿಣಿಯ ಹೊಟ್ಟೆ ಎಷ್ಟು ದೊಡ್ಡದಿದೆ, ಮಗುವಿನ ಚಲನವಲನ ಹೇಗಿದೆ, ಮಗು ಒದೆಯುತ್ತದಾ, ಇಲ್ಲವಾ? ಎಷ್ಟು ಸಲ ವಾಂತಿಯಾಗುತ್ತಿದೆ…? ಎಂಬೆಲ್ಲ ಅಂಶಗಳ ಮೇಲೆ ಮಗುವಿನ ಲಿಂಗ ಹಾಗೂ ಆರೋಗ್ಯವನ್ನು ಅಂದಾಜಿಸುತ್ತಾರೆ. ಕೆಲವೊಮ್ಮೆ ಅದು ನಿಜವೂ ಆಗಿಬಿಡುತ್ತದೆ. ಆದರೆ, ಇವೆಲ್ಲಾ ಎಷ್ಟು ಸತ್ಯ? ಈ ಬಗ್ಗೆ ವೈದ್ಯರು ಏನು ಹೇಳುತ್ತಾರೆ ಅಂತ ಗೊತ್ತಾ?

Advertisement

1. ಹೊಟ್ಟೆ ಕೆಳಗೆ ಊದಿದೆಯಾ, ಮೇಲೆಯಾ?
ಹೊಟ್ಟೆಯ ಕೆಳಭಾಗ ಜಾಸ್ತಿ ಊದಿಕೊಂಡಿದ್ದರೆ ಮಗು ಗಂಡು, ಮೇಲೆ ಊದಿದ್ದರೆ ಮಗು ಹೆಣ್ಣು ಹೆಂದು ಹಿರಿಯರು ಹೇಳುತ್ತಾರೆ. ಆದರೆ, ವೈದ್ಯರ ಪ್ರಕಾರ ಇದು ನಿಜವಲ್ಲ. ಹೊಟ್ಟೆಯ ಯಾವ ಭಾಗ ಊದುತ್ತದೆ ಎಂಬುದು ತಾಯಿಯ ದೇಹದ ಆಕಾರವನ್ನು ಆಧರಿಸಿದ್ದಾಗಿರುತ್ತದೆ ಎನ್ನುತ್ತಾರೆ ವೈದ್ಯರು.

2.ದೊಡ್ಡ ಹೊಟ್ಟೆ ಅಂದ್ರೆ ಆರೋಗ್ಯವಂತ ಕೂಸು
ಗರ್ಭಿಣಿಯ ಬಗೆಗಿನ ಇನ್ನೊಂದು ಸಾಮಾನ್ಯ ತಪ್ಪುಕಲ್ಪನೆಯೆಂದರೆ, ತಾಯಿಯ ಹೊಟ್ಟೆ ದೊಡ್ಡದಾಗಿದ್ದರೆ ಹುಟ್ಟುವ ಮಗು ಆರೋಗ್ಯವಂತವಾಗಿರುತ್ತದೆ ಎಂಬುದು. ಆದರೆ, ಹೊಟ್ಟೆ ದೊಡ್ಡದಾಗಿ ಊದಿಕೊಳ್ಳುವ ನಿಜಾಂಶ ಏನು ಗೊತ್ತಾ? ಭ್ರೂಣವನ್ನು ಸಂರಕ್ಷಿಸುವ ಆಮ್ನಿಯೋಟಿಕ್‌ ಎಂಬ ದ್ರವ ಜಾಸ್ತಿಯಾದರೆ ಹೊಟ್ಟೆ ದೊಡ್ಡದಾಗುತ್ತದೆ. ಅದಕ್ಕೂ, ಮಗುವಿನ ಲಿಂಗಕ್ಕೂ ಯಾವುದೇ ಸಂಬಂಧವಿಲ್ಲ. 

3. ಸಣ್ಣ ಹೊಟ್ಟೆ ಇದ್ದರೆ ಹೆರಿಗೆ ಸುಸೂತ್ರ
ಹೊಟ್ಟೆ ಸಣ್ಣಗಿದ್ದರೆ, ಹೆರಿಗೆ ಸುಸೂತ್ರವಾಗುತ್ತದೆ ಎಂಬ ಮಾತಿದೆ. ಆದರೆ, ತಾಯಿಯ ದೇಹದ ಆಕಾರ, ಮಗು ಹೊಟ್ಟೆಯಲ್ಲಿ ಯಾವ ದಿಕ್ಕಿನಲ್ಲಿದೆ ಎಂಬುದರ ಮೇಲೆ ಹೊಟ್ಟೆಯ ಗಾತ್ರ ರೂಪುಗೊಳ್ಳುತ್ತದೆ. ಇನ್ನು ಸುಸೂತ್ರ ಹೆರಿಗೆಯಲ್ಲಿ, ಮಗುವಿನ ತೂಕ, ತಾಯಿಯ ಆರೋಗ್ಯದಂಥ ಅಂಶಗಳು ಪ್ರಮುಖ ಪಾತ್ರ ವಹಿಸುತ್ತವೆ. 

4.ದೊಡ್ಡ ಹೊಟ್ಟೆಯಂದ್ರೆ ಜಾಸ್ತಿ ಭಯ
ಹೊಟ್ಟೆ ಜಾಸ್ತಿ ಊದಿಕೊಂಡರೆ ಹೆರಿಗೆ ಸ್ವಲ್ಪ ತ್ರಾಸದಾಯಕ ಅನ್ನುವ ಹಿರಿಯರ ಮಾತು ಪೂರ್ತಿ ಕಡೆಗಣಿಸುವಂಥದ್ದಲ್ಲ. ಯಾಕಂದ್ರೆ, ಇಂಥ ಸಂದರ್ಭದಲ್ಲಿ ಸ್ಥೂಲಕಾಯದ, ಕುಳ್ಳಗಿನ ಸ್ತ್ರೀಯರಿಗೆ ಹೆರಿಗೆ ಸ್ವಲ್ಪ ಕಷ್ಟವಾಗುತ್ತದೆ ಎನ್ನುತ್ತಾರೆ ವೈದ್ಯರು.

Advertisement

5. ಬೆಳಗ್ಗೆ ವಾಂತಿಯಾದರೆ?
ಗರ್ಭಿಣಿಯರಲ್ಲಿ ಬೆಳಗ್ಗೆ ವಾಂತಿ, ಅತಿಯಾದ ಸುಸ್ತು ಕಾಣಿಸಿಕೊಳ್ಳುವುದು ಸಹಜ. ಅದರಲ್ಲೂ ಮೊದಲ ಮೂರು ತಿಂಗಳಲ್ಲಿ ಇದು ಹೆಚ್ಚು ಕಾಡುತ್ತದೆ. ಈ ಲಕ್ಷಣಕ್ಕೂ, ಗರ್ಭಿಣಿಯ ಹೊಟ್ಟೆಯ ಗಾತ್ರಕ್ಕೂ ಸಂಬಂಧವಿರುತ್ತದೆ ಎನ್ನುತ್ತಾರೆ ಕೆಲವರು. ಅದರಲ್ಲಿ ಹುರುಳಿಲ್ಲ ಎಂಬುದು ವೈದ್ಯರ ಮಾತು. 

Advertisement

Udayavani is now on Telegram. Click here to join our channel and stay updated with the latest news.

Next