Advertisement

“ಯಕ್ಷಗಾನದಿಂದ ಪುರಾಣ ಕತೆಗಳು,ಇತಿಹಾಸ ಜೀವಂತ’

06:15 AM Jul 31, 2017 | |

ಉಪ್ಪಳ: ತುಳುನಾಡ ಮಣ್ಣಿನ ಕಲೆ ಯಕ್ಷಗಾನ ಧಾರ್ಮಿಕತೆಯ ಪಂಚಾಂಗವೆಂದೇ ಹೇಳಬಹುದು. ಇದರಲ್ಲಿರುವ ನವರಸ ವೈಭವ, ತಾಳ, ಲಯ, ಕುಣಿತ, ಸಂಗೀತ ಸಹಿತ ಶಬ್ದಕೋಶಗಳು ಮನುಷ್ಯ ಜೀವನದ ಏಳ್ಗೆಗೆ ಪೂರಕವಾದವುಗಳು. ಭಾರತೀಯ ಪುರಾಣ ಕತೆಗಳು, ಇತಿಹಾಸ ಈ ಕಲೆಯ ಮೂಲಕ ಇನ್ನೂ ಜೀವಂತವಾಗಿದೆ. ಕಲೆಗೆ ಮಹಾ ಪ್ರೋತ್ಸಾಹವನ್ನು ನೀಡುವ ಮೂಲಕ ಅದು ಜಗದ್ವಿಖ್ಯಾತಿ ಪಡೆಯಲಿ ಎಂದು ಉದ್ಯಮಿ, ಧಾರ್ಮಿಕ ಮುಂದಾಳು ವಸಂತ ಪೈ  ಬದಿಯಡ್ಕ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಐಲ ಶ್ರೀ ದುರ್ಗಾಪರಮೇಶ್ವರೀ ಕಲಾ ಭವನದಲ್ಲಿ ಶುಕ್ರವಾರ ರಾತ್ರಿ ನಡೆದ ಯಕ್ಷಧ್ರುವ ಪಟ್ಲ ಫೌಂಡೇಶನ್‌ ಟ್ರಸ್ಟ್‌ ಇದರ ಉಪ್ಪಳ ಘಟಕದ ಉದ್ಘಾಟನಾ ಸಮಾರಂಭವನ್ನು ದೀಪ ಬೆಳಗಿಸಿ ಉದ್ಘಾಟಿಸಿ  ಮಾತನಾಡಿದರು.

ದೇಶದ ಸಂಸ್ಕೃತಿ ಮತ್ತು ಕಲೆ ಬೆಳಗಿದಲ್ಲಿ ಮನುಷ್ಯನೂ ಉನ್ನತಿ ಹೊಂದುತ್ತಾನೆ. ಆದರೆ ದುರದೃಷ್ಟವಶಾತ್‌ ಇಂದಿನ ಪೀಳಿಗೆ ಅವುಗಳಿಂದ ವಿಮುಖವಾಗುತ್ತಿದೆ. ಜೀವನವನ್ನು ಪರಮೋನ್ನತಿಯೆಡೆಗೆ ಸಾಗಿಸುವ ಇಂತಹ ಕಲೆಗಳಿಂದ ಕಲಿಯಬೇಕಾದ್ದು ಅಗಾಧ. ಪ್ರತಿ ಕತೆಗಳಲ್ಲಿಯೂ ನಿಜ ಜೀವನದಲ್ಲಿ ನಡೆಯಬಹುದಾದ ದುರಂತಗಳಿಗೆ ದೃಷ್ಟಾಂತಗಳ ಮೂಲಕ ನೀತಿಪಾಠವಿದೆ. ಇದು ಗಮನಿಸಬೇಕಾದ್ದು ಎಂದು ಅವರು ತಿಳಿಸಿ, ಉಪ್ಪಳ ಘಟಕ ಮುಂದಿನ ದಿನಗಳಲ್ಲಿ ಮಹೋನ್ನತ ಕಾರ್ಯವನ್ನು ಸಾಧಿಸಲಿ ಎಂದು ಶುಭ ಹಾರೈಸಿದರು.

ಯಕ್ಷಧ್ರುವ ಪಟ್ಲ ಫೌಂಡೇಶನ್‌ ಮಂಗಳೂರು ಇದರ ಅಧ್ಯಕ್ಷ ಪಟ್ಲ ಸತೀಶ ಶೆಟ್ಟಿ ಮಾತನಾಡಿ, ಯಾವುದೇ ಲಾಭದ ಉದ್ದೇಶಕ್ಕಾಗಿ ಸಂಸ್ಥೆಯನ್ನು ಬೆಳೆಸದೆ ಯಕ್ಷಗಾನ ಎಂಬ ಮೇರು ಕಲೆಯನ್ನು ಅರಳಿಸಿದ ಅತ್ಯಂತ ಅಶಕ್ತ ಕಲಾವಿದರಿಗೆ ನೆರವಾಗುವ ನಿಟ್ಟಿನಲ್ಲಿ ಮಾತ್ರ ಕಾರ್ಯವೆಸಗುತ್ತಿದೆ. ಕಲಾಪ್ರೇಮಿಗಳೆಲ್ಲರೂ ಕೈಜೋಡಿಸಿದಲ್ಲಿ ಮಾತ್ರ ಇಂತಹ ಮಹತ್‌ ಕಾರ್ಯ ಸಾಧ್ಯ. ತನಗೆ ಕೀರ್ತಿ ನೀಡಿದ ಕಲಾಮಾತೆಯ ಸೇವೆಯನ್ನು ಕಿಂಚಿತ್‌ ಮಾಡುತ್ತಿದ್ದೇನೆ. ಅಭಿಮಾನಿಗಳೆಲ್ಲರ ಸಹಕಾರ ಅತ್ಯಗತ್ಯ ಎಂದು ತಿಳಿಸಿದರು.

ಮಂಜೇಶ್ವರ ಫಿರ್ಕಾ ಬಂಟರ ಸಂಘದ ಅಧ್ಯಕ್ಷ ದಾಸಣ್ಣ ಆಳ್ವ ಕುಳೂರು ಬೀಡು ಅಧ್ಯಕ್ಷತೆ ವಹಿಸಿದ್ದರು. ಐಲ ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನದ ಆಡಳಿತ ಮೊಕ್ತೇಸರ ನಾರಾಯಣ ಹೆಗ್ಡೆ ಕೋಡಿಬೈಲು,  ಪಟ್ಲ ಫೌಂಡೇಶನ್‌ ಕೇಂದ್ರ ಸಮಿತಿಯ ಮಾಗದರ್ಶಕ ಪಟ್ಲಗುತ್ತು ಮಹಾಬಲ ಶೆಟ್ಟಿ ಶುಭಾಂಶನೆ ಗೈದರು.

Advertisement

ಮುಖ್ಯ ಅತಿಥಿಗಳಾಗಿ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಗೋವಿಂದ ಭಟ್‌ ಸೂರಿಕುಮೇರಿ, ಅಂತರಾಷ್ಟಿÅàಯ  ಕಬಡ್ಡಿಪಟು ಮಂಜಲೊ¤àಡಿ ಭಾಸ್ಕರ ರೈ, ಕೇಪು ಗ್ರಾಮ ಪಂಚಾಯತ್‌ ಮಾಜಿ ಉಪಾಧ್ಯಕ್ಷ ಚೆಲ್ಲಡ್ಕ ರಾಧಾಕೃಷ್ಣ ಶೆಟ್ಟಿ ದಡ್ಡಂಗಡಿ, ಚಿಪ್ಪಾರು ಅಮ್ಮೇರಿ ಶ್ರೀ ಬ್ರಹ್ಮ ಬೈದರ್ಕಳ ಗರೋಡಿ ಪ್ರಧಾನ ಕಾರ್ಯದರ್ಶಿ ಅಜಿತ್‌ ಎಂ.ಸಿ ಲಾಲ್‌ಬಾಗ್‌, ತಾಳಮದ್ದಳೆ ಅರ್ಥದಾರಿ ಲತಾ ಎನ್‌.ನಾವಡ, ಯಕ್ಷಧ್ರುವ ಪಟ್ಲ ಫೌಂಡೇಶನ್‌ ಉಪ್ಪಳ ಘಟಕದ ಗೌರವಾಧ್ಯಕ್ಷ  ಪಿ.ಆರ್‌.ಶೆಟ್ಟಿ ಪೊಯೆÂಲು, ಕೋಳಾರು ಸತೀಶ್ಚಂದ್ರ ಭಂಡಾರಿ, ಗೌರವ ಸಲಹೆಗಾರ ಡಾ.ಶ್ರೀಧರ ಭಟ್‌, ದೇವಕಾನ ಕೃಷ್ಣ ಭಟ್‌, ಬೊಳ್ಳಾರು ನಾರಾಯಣ ಶೆಟ್ಟಿ, ಮೀನಾರು ವಿಶ್ವನಾಥ ಆಳ್ವ,  ಡಾ.ಜಯಪ್ರಕಾಶ ನಾರಾಯಣ ತೊಟ್ಟೆತ್ತೋಡಿ, ಶ್ರೀಧರ ಶೆಟ್ಟಿ ಮುಟ್ಟಂ, ಪುರುಷೋತ್ತಮ ಭಂಡಾರಿ, ಸುರೇಶ್‌ ಶೆಟ್ಟಿ ಬಳಕ, ಸುಧೀರ್‌ಕುಮಾರ್‌ ರೈ ಮೊದಲಾದವರು ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್‌ ಉಪ್ಪಳ ಘಟಕದ ವತಿಯಿಂದ ಕೇಂದ್ರ ಸಮಿತಿಗೆ 1 ಲಕ್ಷ ರೂ.ಗಳ ಚೆಕ್‌ ಹಸ್ತಾಂತರಿಸಲಾಯಿತು. ಭಾಗವತ ರಾಮ ಸಾಲಿಯಾನ್‌ ಪ್ರಾರ್ಥನೆ ಹಾಡಿದರು. ಉಪ್ಪಳ ಘಟಕದ ಸಂಚಾಲಕ ಯೋಗೀಶ್‌ ರಾವ್‌ ಚಿಗುರುಪಾದೆ ಸ್ವಾಗತಿಸಿದರು. ಜಯಪ್ರಕಾಶ್‌ ಶೆಟ್ಟಿ ದಡ್ಡಂಗಡಿ ವಂದಿಸಿದರು. ಸತೀಶ್‌ ಶೆಟ್ಟಿ ಒಡ್ಡಂಬೆಟ್ಟು ಮತ್ತು ರಾಜಾರಾಮ್‌ ರಾವ್‌ ಕಾರ್ಯಕ್ರಮ ನಿರ್ವಹಿಸಿದರು.

ಕಾರ್ಯಕ್ರಮ ಮೊದಲು ತೆಂಕುತಿಟ್ಟಿನ ಖ್ಯಾತ ಕಲಾವಿದರಿಂದ ಭಸ್ಮಾಸುರ ಮೋಹಿನಿ ಮತ್ತು ಬಳಿಕ  ಶಬರಿಮಲೆ ಅಯ್ಯಪ್ಪ ಯಕ್ಷಗಾನ ಪ್ರದರ್ಶನ ಕಿಕ್ಕಿರಿದ ಪ್ರೇಕ್ಷಕರ ಸಮ್ಮುಖ ಪ್ರದರ್ಶಿಸಲ್ಪಟ್ಟಿತು.

Advertisement

Udayavani is now on Telegram. Click here to join our channel and stay updated with the latest news.

Next