Advertisement

Mysuru Dasara: ಸಾಂಪ್ರದಾಯಿಕ ಪೂಜೆಯೊಂದಿಗೆ ಇಂದು ಗಜಪಡೆ ಅರಮನೆ ಪ್ರವೇಶ

12:52 AM Aug 23, 2024 | Team Udayavani |

ಮೈಸೂರು: ನಾಗರಹೊಳೆ ಹುಲಿ ಸಂರಕ್ಷಿತಾರಣ್ಯ ಪ್ರದೇಶದಿಂದ ಗಜಪಡೆ ಮೈಸೂರಿಗೆ ಆಗಮಿಸಿದ್ದು, ಶುಕ್ರವಾರ ಸಾಂಪ್ರದಾಯಿಕ ಪೂಜೆಯೊಂದಿಗೆ ಅರ ಮನೆ ಪ್ರವೇಶಿಸ ಲಿವೆ. ಮೈಸೂರು ದಸರಾ ಪ್ರಮುಖ ಆಕರ್ಷಣೆಯಾದ ಜಂಬೂ ಸವಾ ರಿಯಲ್ಲಿ ಪಾಲ್ಗೊಳ್ಳಲು ನಾಡಿಗೆ ಆಗಮಿಸಿರುವ ಗಜಪಡೆ ನಗರದ ಅರಣ್ಯ ಭವನದಲ್ಲಿ ಬೀಡುಬಿಟ್ಟಿವೆ.

Advertisement

ಸ್ವಾಗತ ಕಾರ್ಯಕ್ರಮ: ಶುಕ್ರವಾರ ಬೆಳಗ್ಗೆ 8ಕ್ಕೆ ಅರಣ್ಯ ಭವನದಲ್ಲಿ ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳಿಗೆ ಪೂಜೆ ನೆರ ವೇರಿಸಿ ಅರಮನೆಗೆ ಕಳಿಸಿ ಕೊಡಲಾಗುತ್ತದೆ. ಬಳಿಕ ಅರಮನೆಗೆ ನಡಿಗೆ ಮೂಲಕ ತೆರ ಳುವ ಆನೆಗಳಿಗೆ ಅರ ಮನೆ ಜಯ ಮಾ ರ್ತಾಂಡ ದ್ವಾರ ದಲ್ಲಿ ಸ್ವಾಗತಿಸಲಾಗುತ್ತಿದೆ. ಮೊದಲ ತಂಡದಲ್ಲಿ ಆಗಮಿಸಿ ರುವ ಎಲ್ಲ 9 ಆನೆ ಗಳಿಗೆ ಶನಿವಾರ ಧನ್ವಂತರಿ ರಸ್ತೆಯಲಿರುವ ವೇ ಬ್ರಿಡ್ಜ್ ನಲ್ಲಿ ತೂಕ ಪರೀಕ್ಷೆ ನಡೆಸಲಾಗುತ್ತದೆ.

ಗಜಪಡೆಗೆ ಅರಣ್ಯ ಇಲಾಖೆ ಮೆನು ಸಿದ್ಧಪಡಿಸಿದೆ. ಹೊಟ್ಟೆ ತುಂಬುವಷ್ಟು ಹುಲ್ಲು, ಸೊಪ್ಪು ನೀಡಲಾಗುವುದು. ಬೆಳಗ್ಗೆ 6.30 ಮತ್ತು ರಾತ್ರಿ 7ಕ್ಕೆ ಹಸಿರುಕಾಳು, ಕುಸುಬಲಕ್ಕಿ, ಉದ್ದಿನಕಾಳು, ಈರುಳ್ಳಿ, ಗೋಧಿ, ಅವಲಕ್ಕಿ, ತರಕಾರಿ ಮಿಶ್ರಣದ ಆಹಾರ ನೀಡಲಾಗುತ್ತದೆ. ಸಂಜೆ ಸ್ವಲ್ಪ ಪ್ರಮಾಣದಲ್ಲಿ ಭತ್ತ, ತೆಂಗಿನಕಾಯಿ, ಬೆಲ್ಲ, ಭತ್ತದ ಒಣಹುಲ್ಲಿನ ಜತೆ ಹಿಂಡಿ, ಅಲ್ಪ ಪ್ರಮಾಣದಲ್ಲಿ ಬೆಣ್ಣೆ ನೀಡಲಾಗುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next