Advertisement
ಗಜಪಯಣಕ್ಕೆ ಚಾಲನೆ ನೀಡುವ ನಾಗರಹೊಳೆ ಉದ್ಯಾನದ ಹೆಬ್ಬಾಗಿಲು ಸಿಂಗರಿಸಲಾಗಿದ್ದು, ರಸ್ತೆಯುದ್ದಕ್ಕೂ ಸ್ವಾಗತ ಕಮಾನು ಅಳವಡಿಸಲಾಗಿದೆ. ಇನ್ನು ಕಾರ್ಯಕ್ರಮ ನಡೆಯುವ ವೇದಿಕೆಯ ಆನೆಗಳ ಚಿತ್ತಾರ ಬಿಡಿಸಿ ಅಲಂಕಾರಗೊಳಿಸಲಾಗಿದೆ. ಜರ್ಮನ್ ಟೆಂಟ್ನ ವೇದಿಕೆ ಹಾಗೂ ವಿಐಪಿ ಗಳಿಗೆ ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕ ಆಸನದ ವ್ಯವಸ್ಥೆ ಮಾಡಲಾಗಿದೆ. ಹಾಗೆಯೇ 3,500 ಮಂದಿಗೆ ಊಟದ ಪ್ಯಾಕೆಟ್ ವ್ಯವಸ್ಥೆ ಹಾಗೂ 900 ಮಂದಿ ವಿಐಪಿಗಳಿಗೆ ಭೋಜನ ವ್ಯವಸ್ಥೆ ಕಲ್ಪಿಸಲಾಗಿದೆ.
ವೀರನಹೊಸಹಳ್ಳಿಗೆ ಎಪಿಸಿಸಿಎಫ್ ಕುಮಾರ್ ಪುಷ್ಕರ್, ಪ್ರಾಜೆಕ್ಟ್ ಟೈಗರ್ ಹೆಡ್ ರಮೇಶ್ಕುಮಾರ್, ಮೈಸೂರು ವೃತ್ತದ ಅರಣ್ಯ ಸಂರಕ್ಷಣಾಧಿಕಾರಿ ಮಾಲತಿಪ್ರಿಯಾ, ಡಿಸಿಎಫ್ಗಳಾದ ಡಾ.ಐ.ಬಿ.ಪ್ರಭುಗೌಡ, ಡಾ.ಪಿ.ಎ.ಸೀಮಾ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಸಿದ್ದತೆ ಕುರಿತು ಪರಿಶೀಲಿಸಿದರು. ಈ ವೇಳೆ ಆರ್.ಎಫ್.ಒಗಳಾದ ಸಂತೋಷ್ಕುಮಾರ್, ಅಭಿಷೇಕ್, ಪಶುವೈದ್ಯ ಡಾ.ಮುಜೀಬ್ ರೆಹಮಾನ್ ಮತ್ತಿತರರಿದ್ದರು.
Related Articles
Advertisement