Advertisement

ದಸರಾ ಆನೆಗಳಿಗೆ ಭೋಜನದ ಮೆನು ಸಿದ್ಧ

07:04 PM Sep 14, 2021 | Team Udayavani |

ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಪ್ರಮುಖ ಘಟ್ಟವಾದ ಜಂಬೂ ಸವಾರಿಯಲ್ಲಿ ಭಾಗವಹಿಸಲು ಅರಮನೆ
ಪ್ರವೇಶಿಸುತ್ತಿರುವ ಆನೆಗಳಿಗೆ ಪೌಷ್ಟಿಕ ಆಹಾರ ನೀಡಿ ಮತ್ತಷ್ಟು ಸದೃಢಗೊಳಿಸಲು ಅರಣ್ಯ ಇಲಾಖೆ ಭೋಜನದ ದೊಡ್ಡ ಮೆನುವನ್ನೇ ಸಿದ್ಧಪಡಿಸಿದೆ.

Advertisement

ಕಾಡಂಚಿನ ಆನೆ ಶಿಬಿರಗಳಿಂದ ಬಂದಿರುವ ಆನೆಗಳು ಸಾಕಷ್ಟು ಪ್ರಮಾಣದಲ್ಲಿ ಆಹಾರ ದೊರೆಯದೆ ಸೊರಗಿರುವುದರಿಂದ ಅವುಗಳಿಗೆ
ವಿಶೇಷ ಹಾರೈಕೆ ಮಾಡುವ ಸಲುವಾಗಿ ಮತ್ತು ಆರೋಗ್ಯ ವೃದ್ಧಿಗೆ ಪೌಷ್ಟಿಕ ಆಹಾರದ ದೊಡ್ಡ ಮೆನು ಸಿದ್ಧಪಡಿಸಿದ್ದು, ಬೂರಿ ಭೋಜನ ತಯಾರಿಸಲು ಸಕಲ ಸಿದ್ಧತೆ ನಡೆಸಿದೆ.

ಜಂಬೂ ಸವಾರಿ ಅಂಗವಾಗಿ ನಿತ್ಯ 2 ಬಾರಿ ತಾಲೀಮು ಹಾಗೂ ಜಂಬೂ ಸವಾರಿ ಹೊರಡುವ ದಿನದಂದು ಪಾಲ್ಗೊಳ್ಳಲು ಆನೆಗಳಿಗೆ ಹೆಚ್ಚಿನ
ಸಾಮರ್ಥ್ಯದ ಅವಶ್ಯಕತೆ ಇದೆ. ಹೀಗಾಗಿ ಆನೆಗಳ ಸಾಮರ್ಥ್ಯ ವೃದ್ಧಿಗೆ ಸಾಕಷ್ಟು ಪ್ರಮಾಣದಲ್ಲಿ ಹಸಿರು ಕಾಳು, ಕುಸುಬಲಕ್ಕಿ, ಉದ್ದಿನ ಕಾಳು,
ಈರುಳ್ಳಿ, ಗೋಧಿ, ಅವಲಕ್ಕಿ, ತರಕಾರಿ ಮಿಶ್ರಣದ ಪೌಷ್ಟಿಕ ಆಹಾರ ಒದಗಿಸಲು ಅಗತ್ಯ ದಿನಸಿ ಪದಾರ್ಥಗಳನ್ನು ಖರೀದಿಸಿಟ್ಟಿದೆ.ಕ್ಯಾಪ್ಟನ್‌ ಅಭಿಮನ್ಯು ನೇತೃತ್ವ ದಲ್ಲಿ ಅಶ್ವತ್ಥಾಮ, ವಿಕ್ರಮ, ಧನಂಜಯ, ಕಾವೇರಿ, ಚೈತ್ರಾ, ಗೋಪಾಲಸ್ವಾಮಿ, ಲಕ್ಷ್ಮೀ ಒಳಗೊಂಡ 8 ಆನೆಗಳ ತಂಡ ಈಗಾಗಲೇ ನಗರ ಅಶೋಕ ಪುರಂನ ಅರಣ್ಯ ಭವನದ ಆವರಣದಲ್ಲಿ ವಾಸ್ತವ್ಯ ಹೂಡಿದ್ದು, ಸೆ.16 ರಂದು ಬೆಳಗ್ಗೆ ಅರಮನೆ ಪ್ರವೇಶಿಸಲಿವೆ. ಅಂದಿನಿಂದಲೇ ಎಲ್ಲಾ ಆನೆಗಳಿಗೆವಿಶೇಷ ಆರೈಕೆ ಮತ್ತು ಆಹಾರ ನೀಡಲಾಗುತ್ತದೆ.

ಇದನ್ನೂ ಓದಿ:ಬಿಜೆಪಿ ಮುಕ್ತ ಬಬಲೇಶ್ವರಕ್ಕೆ ನಾಂದಿ: ಶಾಸಕ ಎಂ.ಬಿ. ಪಾಟೀಲ

ಮೆನುವಿನಲ್ಲಿ ಏನೇನಿದೆ:
ಪ್ರತಿನಿತ್ಯ ಆನೆಗಳಿಗೆ ಹೊಟ್ಟೆ ತುಂಬುವಷ್ಟು ಹುಲ್ಲು, ಹಾಗೂ ಸೊಪ್ಪು ನೀಡುವ ಜೊತೆಗೆ ಬೆಳಗ್ಗೆ 6.30 ಮತ್ತು ರಾತ್ರಿ 7ಗಂಟೆಗೆ ಆನೆಗಳಿಗೆ ಹಸಿರು ಕಾಳು, ಕುಸುಬಲಕ್ಕಿ, ಉದ್ದಿನ ಕಾಳು, ಈರುಳ್ಳಿ, ಉದ್ದಿನ ಕಾಳು, ಗೋಧಿ, ಅವಲಕ್ಕಿ, ತರಕಾರಿ ಮಿಶ್ರಣದ ಆಹಾರ ನೀಡಲಾಗುವುದು. ಸಂಜೆ ಸ್ವಲ್ಪ ಪ್ರಮಾಣದಲ್ಲಿ ಭತ್ತ, ತೆಂಗಿನಕಾಯಿ, ಬೆಲ್ಲ ಹಾಗೂ ಹಿಂಡಿಯನ್ನು ಭತ್ತದ ಒಣ ಹುಲ್ಲಿನ ಜತೆ ನೀಡಲಾಗುವುದು. ಈ ಸಂದರ್ಭ ಹಸುವಿನ ಬೆಣ್ಣೆಯನ್ನೂ ಆನೆಗಳಿಗೆ ಕೊಡಲಾಗುತ್ತದೆ.

Advertisement

ಈಗಾಗಲೇ ಅರಣ್ಯ ಭವನದ ಆವರಣದಲ್ಲಿ ಬೀಡುಬಿಟ್ಟರಿವ ದಸರಾ ಆನೆಗಳು ಸೆ.15ರ ವರೆಗೆ ಅಲ್ಲೆ ಇರುವುದರಿಂದ ಕಬ್ಬು, ಬೆಲ್ಲ, ಭತ್ತ,
ತೆಂಗಿನಕಾಯಿ, ಬತ್ತದ ಒಣ ಹುಲ್ಲುಗಳನ್ನು ನೀಡಲಾಗುತ್ತಿದೆ. ಅರಮನೆ ಪ್ರವೇಶಿಸಿದ ನಂತರ ವಿಶೇಷ ಆಹಾರ ನೀಡಲಾಗುತ್ತದೆ. ಸೆ. 16ರಂದು
ಬೆಳಗ್ಗೆ 6 ರಿಂದ 6.30 ವರೆಗೆ ವಿಶೇಷ ಪೂಜೆಯನ್ನು ನೆರವೇರಿಸಿ,ಕಾಲ್ನಡಿಗೆಯಲ್ಲಿಅರಮನೆಪ್ರವೇಶಿಸಲಿವೆ ಎಂದು ಡಿಸಿಎಫ್ಕರಿಕಾಳನ್‌ ತಿಳಿಸಿದ್ದಾರೆ.

ಆನೆಗಳ ಆರೋಗ್ಯದ ಬಗ್ಗೆ ವಿಶೇಷ ನಿಗಾ ಇಡುವ ಉದ್ದೇಶದಿಂದ ಆನೆಗಳು ಅರಮನೆ ಪ್ರವೇಶಿಸಿದ ನಂತರ ಆ.17 ಅಥವಾ 18 ರಂದು
ಆನೆಗಳ ತೂಕ ಪರೀಕ್ಷಿಸಲಾಗುವುದು. ಒಂದು ವೇಳೆ ಕಳೆದ ವರ್ಷಕ್ಕಿಂತ ಸಾಕಷ್ಟು ಪ್ರಮಾಣದಲ್ಲಿ ತೂಕ ಇಳಿಕೆಯಾಗಿದ್ದಲ್ಲಿ ಅವುಗಳಿಗೆ ವಿಶೇಷ ಆರೈಕೆ ದೊರೆಯಲಿದೆ. ಆನೆಗಳು ತಾಲೀಮು ಮುಗಿಸಿ ಬಂದ ನಂತರ ಅವುಗಳನ್ನು ಸ್ನಾನ ಮಾಡಿಸಿ ಶುಚಿಗೊಳಿಸುವ ಕಾರ್ಯ ನಿತ್ಯ ನಡೆಯುತ್ತದೆ. ಒಂದು ತಿಂಗಳಅವಧಿಯಲ್ಲಿಆನೆಗಳಆರೋಗ್ಯದಲ್ಲಿ ಏರುಪೇರಾಗದಂತೆ ನೋಡಿಕೊಳ್ಳಲು ಅರಣ್ಯ ಇಲಾಖೆ ಸಿದ್ಧತೆಕೈಗೊಂಡಿದೆ.

ಆನೆಗಳಿಗೆ 17ರಿಂದ ತಾಲೀಮು ಆರಂಭ
ಸೆ.16ರಂದು ಬೆಳಗ್ಗೆ ಆನೆಗಳು ಅರಮನೆ ಪ್ರವೇಶಿಸಿದ ಮರುದಿನದಿಂದ (ಸೆ.17) ತಾಲೀಮು ಆರಂಭಗೊಳ್ಳಲಿದೆ. ಆರಂಭದಲ್ಲಿ ಅರಮನೆ ಆವರಣದಲ್ಲೇ ಆನೆಗಳಿಗೆ ತಾಲೀಮು ನಡೆಯಲಿದೆ. ಬಳಿಕ ಅರಮನೆ ಆವರಣದಿಂದ ಬನ್ನಿಮಂಟಪದವರೆಗೆ ನಿತ್ಯ ತಾಲೀಮು ನಡೆಸಲಿವೆ. ಆರಂಭದಲ್ಲಿ ಬರಿ ಮೈಲಿಯಲ್ಲಿ ತಾಲೀಮು ನಡೆಯಲಿದೆ. ಐದು ದಿನಕಳೆದ ನಂತರ ಭಾರ ಹೊರುವ ತಾಲೀಮು ಪ್ರಾರಂಭವಾಗಲಿದೆ. ಆ ಅವಧಿಯಲ್ಲಿ ಅಭಿಮನ್ಯು, ಧನಂಜಯ, ವಿಕ್ರಮ, ಗೋಪಾಲಸ್ವಾಮಿ ಆನೆಗಳಿಗೆ ಭಾರ ಹೊರಿಸಲಾಗುತ್ತದೆ. ಅಶ್ವತ್ಥಾಮ ಹೊಸ ಆನೆ ಯಾಗಿದ್ದು,2017ರಲ್ಲಿ ಸಕಲೇಶಪುರದಲ್ಲಿ ಹಿಡಿದಿರುವ ಈ ಆನೆ2.85 ಮೀಟರ್‌ ಎತ್ತರವಿದೆ. ಈ ವರ್ಷ ಇನ್ನಷ್ಟು ಪಳಗಿಸಬೇಕು ಎಂದು ದಸರಾಗೆ ಆಯ್ಕೆ ಮಾಡಿಕೊಳ್ಳಲಾಗಿದೆ. ಮುಂದಿನ ವರ್ಷದಲ್ಲಿ ದಸರಾ ಉಪಯೋಗಿಸಬೇಕು ಎಂಬ ಉದ್ದೇಶವಿದೆ. ಹಾಗಾಗಿ, ಅತ್ವತ್ಥಾಮ ಆನೆಗೆ
ಈ ಬಾರಿ ಭಾರ ಹೊರುವ ತಾಲೀಮು ನಡೆಯಲ್ಲ ಎಂದು ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ತಾಲೀಮಿಗೆ ಹೆಚ್ಚಿನ ಸಾಮರ್ಥ್ಯದ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ಈ ನಾಲ್ಕು ಆನೆಗಳಿಗೆ ಸಾಮರ್ಥ್ಯ ವೃದ್ಧಿಗೆ ಹೆಚ್ಚಿನ ಪ್ರಮಾಣದಲ್ಲಿ ಆಹಾರ ದೊರೆಯಲಿದೆ. ಈ ಗಂಡಾನೆ ಗಳೊಂದಿಗೆ ಹೆಣ್ಣಾನೆಗಳಾದ ಕಾವೇರಿ, ಲಕ್ಷ್ಮೀ, ಚೈತ್ರಾಕೂಡ ತಾಲೀಮು ನಡೆಸಲಿವೆ.

ಜಂಬೂ ಸವಾರಿಯಲ್ಲಿ ಭಾಗವಹಿಸುವ ಗಜಪಡೆಗೆ ಪ್ರತಿಬಾರಿಯಂತೆ ಈ ಬಾರಿಯೂ ಬೆಳಗ್ಗೆ ಹಾಗೂ ಸಂಜೆ ವಿಶೇಷ ಆಹಾರ ನೀಡಲಾಗುವುದು. ಆನೆಗಳು ಆ.16ರಂದು ಅರಮನೆ ಪ್ರವೇಶಿಸಲಿದ್ದು, ಅಂದಿನಿಂದಲೇ ವಿಶೇಷ ಆಹಾರ ನೀಡಲಾಗುವುದು. ಜೊತೆಗೆ ಸೆ.17ರಿಂದ ಆನೆಗಳಿಗೆ ತಾಲೀಮು ನಡೆಯಲಿದೆ.
– ಡಾ.ವಿ.ಕರಿಕಾಳನ್‌, ಡಿಸಿಎಫ್

– ಸತೀಶ್‌ ದೇಪುರ

Advertisement

Udayavani is now on Telegram. Click here to join our channel and stay updated with the latest news.

Next