ಮಂಡ್ಯ: ವಿವಿಧ ಸಂಘಟನೆಗಳುಹಾಗೂ ಜಿಲ್ಲೆಯ ಜನಪ್ರತಿನಿಧಿಗಳು ಹಾಗೂ ಕಾಂಗ್ರೆಸ್ ನಾಯಕರ ಒತ್ತಡಕ್ಕೆ ಮಣಿದು ಸರ್ಕಾರ ಮೈಷುಗರ್‌ಕಾರ್ಖಾನೆಯನ್ನು ಸರ್ಕಾರಿ ಸ್ವಾಮ್ಯದಲ್ಲಿಯೇ ಉಳಿಸುವ ಮುಖ್ಯಮಂತ್ರಿಗಳ ನಿಲುವಿಗೆ ಜಿಲ್ಲೆಯ ಜನರ ಪರವಾಗಿ ಅಭಿನಂದನೆ ಸಲ್ಲಿಸಲಾಗುವುದು ಎಂದು ಮಂಡ್ಯ ಜಿಲ್ಲಾ ರೈತ ಹಿತರಕ್ಷಣಾ ಸಮಿತಿಯ ಸಂಘಟನಾ ಕಾರ್ಯದರ್ಶಿಸುನಂದ ಜಯರಾಂ ತಿಳಿಸಿದರು.
ಇದಕ್ಕೆ ಶ್ರಮಿಸಿದ ಮಾಜಿ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿ, ಸಿದ್ದರಾಮಯ್ಯ ಹಾಗೂ ಕೆಪಿಸಿಸಿ ಅಧ್ಯಕ್ಷಡಿ.ಕೆ.ಶಿವಕುಮಾರ್ ಹಾಗೂ ಆನೇಕಸಂಘಟನೆಗಳ ಮುಖಂಡರಿಗೂ ಧನ್ಯವಾದ ಅರ್ಪಿಸುತ್ತೇವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಸರ್ಕಾರ ತನ್ನ ನಿಲುವಿಗೆ ಬದ್ಧವಾಗಿಶೀಘ್ರದಲ್ಲೇ ಕಾರ್ಖಾನೆ ಆರಂಭಕ್ಕೆಆದ್ಯತೆ ನೀಡಬೇಕು ಹಾಗೂ ಕಾರ್ಖಾನೆಯ 1,750 ಕೋಟಿ ರೂ. ಮೌಲ್ಯದಆಸ್ತಿ ರಕ್ಷಣೆಗೆ ಮುಂದಾಗಬೇಕೆಂದು ಆಗ್ರಹಿಸಿದರು.
ಮೈಷುಗರ್ ಕಾರ್ಖಾನೆಉಳಿವಿಗಾಗಿ ಜು.9ರಿಂದ ನಿರಂತರಧರಣಿ ನಡೆಸಲು ಪ್ರಗತಿಪರ ಸಂಘಟನೆಗಳು ತೀರ್ಮಾನಿಸಿದ್ದ ಧರಣಿಯನ್ನುಮುಖ್ಯಮಂತ್ರಿಗಳ ಹೇಳಿಕೆಯಿಂದತಾತ್ಕಾಲಿಕವಾಗಿ ಹಿಂಪಡೆಯಲಾಗಿದೆಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಕೆ.ಟಿ.ಶ್ರೀಕಂಠೇಗೌಡಮಾತನಾಡಿ,ಮೈಷುಗರ್‌ಉಳಿವಿಗಾಗಿ ಜಿಲ್ಲೆಯಲ್ಲಿ ನಡೆದಹೋರಾಟದಲ್ಲಿ ಪ್ರಥಮ ಹಂತದಯಶಸ್ಸು ಗಳಿಸಲಾಗಿದೆ ಎಂದರು.
ಸಂಸದರ ನಯವಾದ ಮಾತು ಸರಿಯಲ್ಲ: ಜಿಲ್ಲೆ ಹಾಗೂ ರಾಜ್ಯದ ಜೀವನಾಡಿಯಾಗಿರುವ ಕನ್ನಂಬಾಡಿ ಆಣೆಕಟ್ಟೆಬಗ್ಗೆ ಪದೇ ಪದೆ ಬಿರುಕಿನ ಮಾತನಾಡಿ,ಮೈಷುಗರ್ ವಿಚಾರವನ್ನು ಬದಿಗೆಸರಿಸುವ ಸಂಸದೆ ಸುಮಲತಾ ಅವರನಯವಾದ ಮಾತು ಸರಿಯಲ್ಲ ಎಂದುರೈತ ನಾಯಕಿ ಸುನಂದ ಜಯರಾಂಅತೃಪ್ತಿ ವ್ಯಕ್ತಪಡಿಸಿದರು.
ಗೋಷ್ಠಿಯಲ್ಲಿ ಮುಖಂಡರಾದಬಿ.ಟಿ.ವಿಶ್ವನಾಥ್, ಸಿ.ಕುಮಾರಿ,ಶಂಭೂನಹಳ್ಳಿ ಕೃಷ್ಣ, ಬೋರಾಪುರಶಂಕರೇಗೌಡ, ಎಂ.ಬಿ.ಶ್ರೀನಿವಾಸ್, ಪಣಕನಹಳ್ಳಿ ನಾಗಣ್ಣ, ದೇವಿ, ತುಳಸೀಧರ್‌ಹಾಗೂ ವೇಣುಗೋಪಾಲ್‌ಹಾಜರಿದ್ದರು.