ಕುಂಬಳೆ: ಯುವಮೋರ್ಚಾ ಮುಖಂಡ ಹಾಗೂ ಆತನ ತಂದೆ ನಿಗೂಢ ಸಾವಿಗೆ ಸಂಬಂಧಿಸಿ ಪ್ರಚಾರ ಮಾಡಲಾದ ಆಡಿಯೋ ಸಂದೇಶದಲ್ಲಿ ಆರೋಪಿಸಲ್ಪಟ್ಟ ವ್ಯಕ್ತಿಗಳು ಯಾರು? ಈ ಇಬ್ಬರ ಸಾವಿನಲ್ಲಿ ಆಡಿಯೋ ಸಂದೇಶದಲ್ಲಿ ತಿಳಿಸಲಾದ ನಾಲ್ಕು ಮಂದಿಯ ಪಾತ್ರವೇನು? ಎನ್ನುವ ಕುರಿತು ಗುಪ್ತಚರ ವಿಭಾಗಗಳು ತನಿಖೆ ಆರಂಭಿಸಿದೆ.
ಬಂಬ್ರಾಣ ಕಲ್ಕುಳದ ಮೂಸ ಕ್ವಾರ್ಟರ್ಸ್‌ನಲ್ಲಿ ವಾಸಿಸುತ್ತಿದ್ದ ಲೋಕನಾಥ (51) ಎರಡು ದಿನಗಳ ಹಿಂದೆ ಉಳ್ಳಾಲ ಸೋಮೇಶ್ವರ ಕಡಪ್ಪುರದಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಅವರ ಪುತ್ರ, ಯುವಮೋರ್ಚಾ ಕುಂಬಳೆ ಮಂಡಲ ಸಮಿತಿ ಉಪಾಧ್ಯಕ್ಷರಾಗಿದ್ದ ರಾಜೇಶ್ (30) ಕಳೆದ ತಿಂಗಳು 10ರಂದು ನಾಪತ್ತೆಯಾಗಿದ್ದು, 12ರಂದು ಉಳ್ಳಾಲ ಬೆಂಗರೆ ಸಮುದ್ರದಲ್ಲಿ ಶವವಾಗಿ ಪತ್ತೆಯಾಗಿದ್ದರು.
ನಿಗೂಢ ಸಾವಿನ ಬಗ್ಗೆ ಸಮಗ್ರ ತನಿಖೆ ನಡೆಸಬೇಕೆಂದು ಒತ್ತಾಯಿಸಿ ನಾಗರಿಕ ಕ್ರಿಯಾ ಸಮಿತಿ ರೂಪೀಕರಿಸಲಾಗಿತ್ತು. ಮಗನ ಸಾವಿನ ನಿಗೂಢತೆಗಳ ಕುರಿತು ತನಿಖೆ ನಡೆಸಬೇಕೆಂದು ಆಗ್ರಹಿಸಿ ಲೋಕನಾಥ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ದೂರು ನೀಡಿದ್ದರು. ಅದರ ಬೆನ್ನಲ್ಲೇ ಅವರ ಮೃತದೇಹ ಸೋಮೇಶ್ವರ ಸಮುದ್ರದಲ್ಲಿ ಪತ್ತೆಯಾಗಿತ್ತು. ಸಾವಿಗೆ ಮುನ್ನ ಅವರು ಸ್ನೇಹಿತರ ಸಹಿತ ಕೆಲವರಿಗೆ ಆಡಿಯೋ ಸಂದೇಶ ಕಳುಹಿಸಿದ್ದರು. ತನ್ನ ಹಾಗೂ ಮಗನ ಸಾವಿಗೆ ನಾಲ್ಕು ಮಂದಿ ಕಾರಣ ಎಂದು ಆಡಿಯೋ ಸಂದೇಶದಲ್ಲಿ ತಿಳಿಸಿದ್ದರೆನ್ನಲಾಗಿದೆ. ಈ ಕುರಿತು ಗುಪ್ತಚರ ತನಿಖೆ ನಡೆಯುತ್ತಿದೆ.
ಈ ನಡುವೆ ಆ. 5ರಂದು ಪಣಂಬೂರು ಪೊಲೀಸರು ಬೈಕ್ ಕಳ್ಳ ಮಂಗಳೂರು ಕಸಬಾ ಬೇಂಗ್ರೆ ನಿವಾಸಿ ಅಹಮದ್ ನಿನಾನ್ ಯಾನೆ ಚಿನ್ನುನನ್ನು ಬಂಧಿಸಿದ್ದು, ತನಿಖೆಯ ವೇಳೆ ಆರೋಪಿ ತಾನು ಕಾಪುವಿನಲ್ಲೂ ಬೈಕ್ ಕಳವು ಮಾಡಿರುವ ಬಗ್ಗೆ ಬಾಯಿ ಬಿಟ್ಟಿದ್ದ. ಈ ಬಗ್ಗೆ ಪಣಂಬೂರು ಪೊಲೀಸರು ಕಾಪು ಪೊಲೀಸರಿಗೆ ಮಾಹಿತಿ ನೀಡಿದ್ದು, ಕಾಪು ಕ್ರೈಂ ಎಸ್ಸೈ ಪುರುಷೋತ್ತಮ್ ಅವರು ಮೇಲಧಿಕಾರಿಗಳ ಮಾರ್ಗದರ್ಶನದಂತೆ ಆರೋಪಿಯನ್ನು ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಿ ಬೈಕ್ ಕಳವು ನಡೆಸಿರುವ ಸ್ಥಳಕ್ಕೆ ಕರೆದೊಯ್ದು ಮಹಜರು ನಡೆಸಿದ್ದಾರೆ.
ನ್ಯಾಯಾಂಗ ಬಂಧನ
ತನಿಖೆಯ ಬಳಿಕ ಆರೋಪಿಯನ್ನು ಮತ್ತೆ ಮಂಗಳೂರು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಆರೋಪಿಗೆ 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.