Advertisement

ನಾಳೆಯಿಂದ ಮೈಸೂರು ಮೃಗಾಲಯ ಪುನರಾರಂಭ

03:45 AM Feb 02, 2017 | |

ಮೈಸೂರು: ಹಕ್ಕಿಜ್ವರ (ಎಚ್‌5ಎನ್‌8 ವೈರಾಣು) ಸೋಂಕು ಹರಡುವಿಕೆ ಭೀತಿಯಿಂದ ಜ. 4ರಿಂದ ಸಾರ್ವಜನಿಕರಿಗೆ ಪ್ರವೇಶ ನಿರ್ಬಂಧಿಸಿದ್ದ ಮೈಸೂರು ಮೃಗಾಲಯ ಫೆ. 3ರಿಂದ ಸಾರ್ವಜನಿಕರಿಗೆ ಮುಕ್ತಗೊಳ್ಳುತ್ತಿದೆ. ಘಟನೆಗೆ ಸಂಬಂಧಿಸಿದಂತೆ ಪಕ್ಷಿಗಳ ರಕ್ತ, ಹಿಕ್ಕೆ ಮಾದರಿಯನ್ನು ಶೇಖರಿಸಿ ಪ್ರಯೋಗಾಲಯಕ್ಕೆ ಕಳುಹಿಸಲಾಗಿತ್ತು. ಎರಡು ಹಂತದ ಪರೀಕ್ಷೆಯಲ್ಲಿಯೂ ಮೃಗಾಲಯದ ಪಕ್ಷಿಗಳಿಗೆ ಸೋಂಕು ತಗುಲದಿರುವುದು ಧೃಡಪಟ್ಟಿದ್ದು, ಪಕ್ಷಿಗಳ ಮಾದರಿ ವರದಿ ನೆಗೆಟಿವ್‌ ಬಂದಿದೆ. ಕೇಂದ್ರ ಮೃಗಾಲಯ ಪ್ರಾಧಿಕಾರದ ಮಾರ್ಗಸೂಚಿಯಂತೆ ಪಶುಸಂಗೋಪನಾ ಇಲಾಖೆ ಅನುಮತಿಯ ಮೇರೆಗೆ ಮೃಗಾಲಯವನ್ನು ಫೆ. 3ರಿಂದ ಸಾರ್ವಜನಿಕ ವೀಕ್ಷಣೆಗೆ ಮುಕ್ತಗೊಳಿಸಲಾಗುತ್ತಿದೆ ಎಂದು ಶ್ರೀ ಚಾಮರಾಜೇಂದ್ರ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕಿ ಕಮಲಾ ತಿಳಿಸಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next