Advertisement

Yuva Dasara: ಹುಚ್ಚೆದ್ದು ಕುಣಿಸಿದ ಯುವ ದಸರಾ

12:57 PM Oct 19, 2023 | Team Udayavani |

ಮೈಸೂರು: ಯುವ ಮನಸ್ಸುಗಳನ್ನು ಸಂಭ್ರ ಮದ ಅಲೆಯಲ್ಲಿ ತೇಲಿಸುವ ಯುವ ದಸರಾಗೆ ಬುಧವಾರ ಸಂಭ್ರಮದ ಚಾಲನೆ ದೊರೆಯಿತು. ಮಹಾರಾಜ ಕಾಲೇಜು ಮೈದಾನದ ವರ್ಣರಂಜಿತ ವೇದಿಕೆಯಲ್ಲಿ, ಸಾವಿರಾರು ಯುವಕ, ಯುವತಿಯರ ಶಿಳ್ಳೆ, ಚಪ್ಪಾಳೆ, ಘೋಷಣೆಗಳ ನಡುವೆ ನಟ ಶಿವರಾಜಕುಮಾರ್‌ ಹಾಡಿದ ಹಾಡಿಗೆ ಯುವ ಸಮೂಹ ಸಂಭ್ರಮಿಸಿತು.

Advertisement

ಶಿವರಾಜಕುಮಾರ್‌ ವೇದಿಕೆ ಆಗಮಿಸಿ ಅಭಿಮಾನಿಗಳತ್ತ ಕೈ ಬೀಸುತ್ತಿದ್ದಂತೆ ಮೈದಾನದ ತುಂಬೆಲ್ಲಾ ಶಿಳ್ಳೆ, ಘೋಷಣೆ ಮೊಳಗಿತು.

ಬಳಿಕ ಮಾತನಾಡಿದ ಶಿವರಾಜಕುಮಾರ್‌, ನಾನು ಎರಡನೇ ಬಾರಿಗೆ ಯುವ ದಸರಾದಲ್ಲಿ ಭಾಗವಹಿಸುತ್ತಿದ್ದೇನೆ. ಸರ್ಕಾರ ಸರಳವಾಗಿ ದಸರಾ ಆಚರಣೆ ಮಾಡುತ್ತಿದ್ದರೂ ಹೆಚ್ಚು ಖುಷಿ ಪಡಿ. ಜೀವನದಲ್ಲಿ ಖುಷಿ ಇರಬೇಕು. ಓದುವ ಸಮಯದಲ್ಲಿ ಓದಬೇಕು. ಖುಷಿ ಪಡುವ ಸಮಯದಲ್ಲಿ ಖುಷಿಯಾಗಿರಿ. ತಂದೆ ತಾಯಿಯನ್ನು ಚೆನ್ನಾಗಿ ನೋಡಿಕೊಳ್ಳಿ. ಪ್ರಾಮಾಣಿಕವಾಗಿದ್ದರೆ ಸಾಧನೆ ಸಾಧ್ಯ ಎಂದರು.

ಮೋಡಿ: ಸರಿಗಮಪ ರನ್ನರ್‌ ಅಪ್‌ ಐಶ್ವರ್ಯ ರಂಗರಾಜ್‌ ತಮ್ಮ ಗಾಯನದ ಮೂಲಕ ಮೋಡಿ ಮಾಡಿದರು. ಸಾವಿರಾರು ಯುವಕ, ಯುವತಿಯರು ಕುಣಿದು ಕುಪ್ಪಳಿಸಿದರು. ಕನ್ನಡ ಕೋಗಿಲೆ ಸೀಸನ್‌-5ರ ದಿವ್ಯಾ ರಾಮಚಂದ್ರ, ಜೋಕೆ ನಾನು ಬಳ್ಳಿಯ ಮಿಂಚು, ರಸಿಕಾ, ರಸಿಕಾ ಬಲು ಮೆಲ್ಲನೆ ತೂರಾಡು ಹಾಡಿನ ಮೂಲಕ ನೀರಸವಾಗಿದ್ದ ಯುವ ದಸರಾಗೆ ಜೋಶ್‌ ತಂದರು.

ಬಳಿಕ ಗಾಯಕ ವ್ಯಾಸರಾಜ್‌ ಸೋಸಲೆ ತಮ್ಮ ಕಂಚಿನ ಕಂಠದಲ್ಲಿ ಚಕ್ರವರ್ತಿ ಚಿತ್ರದ ನೋಡೋ ಕತ್ತು ಎತ್ತಿ ಬಂದ ಚಕ್ರವರ್ತಿ ಹಾಡನ್ನು ಹಾಡಿ ಯುವಕರು ಶಿಳ್ಳೆ ಹಾಕುತ್ತ ಕುಣಿದು ಕುಪ್ಪಳಿಸುವಂತೆ ಮಾಡಿದರು.

Advertisement

ನೃತ್ಯ ವೈಭವ:  ನಟಿ ರಾಧಿಕಾ ನಾರಾಯಣ್‌ ಜಿಲ್‌ ತಾ ಜಿಲ್‌ ತಾ ರೇ ಹಾಡಿಗೆ ಮನಮೋಹಕವಾಗಿ ನೃತ್ಯ ಮಾಡಿದರು. ಬಿಗ್‌ ಬಾಸ್‌ ಖ್ಯಾತಿಯ ಕಿಶನ್‌ ಬೆಳಗಲಿ ಕಾಂತಾರ ಚಿತ್ರದ ಸಿಂಗಾರ ಸಿರಿಯೇ ಹಾಡಿಗೆ ಅದ್ಬುತವಾಗಿ ನೃತ್ಯ ಮಾಡಿದರು.

ಶರಣ್‌ ಮೆರುಗು: ಬಳಿಕ ವೇದಿಕೆಗೆ ಆಗಮಿಸಿದ ನಟ ಶರಣ್‌, ರ್‍ಯಾಂಬೋ-2 ಚಿತ್ರದ ಚುಟು ಚುಟು ಅಂತೈತಿ ಹಾಡು ಹಾಡಿ ಯುವ ದಸರಾಗೆ ಮತ್ತಷ್ಟು ಮೆರುಗು ನೀಡಿದರು. ಇವರಿಗೆ ಗಾಯಕಿ ದಿವ್ಯಾ ರಾಮಚಂದ್ರ ಸಾಥ್‌ ನೀಡಿದರು. ಬಳಿಕ ನಟ ಸಾಧು ಕೋಕಿಲಾ ತಮ್ಮ ಹಾಸ್ಯದಿಂದ ನೆರೆದಿದ್ದವರನ್ನು ನಗೆಗಡಲಲ್ಲಿ ತೇಲಿಸಿದರು. ನಟರಾದ ಅಜಯ್‌ ರಾವ್‌, ರಿಷಿ ಇದ್ದರು.

ಈ ಮುನ್ನ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಯುವ ದಸರಾ ಉದ್ಘಾಟಿಸಿದರು. ಶಾಸಕರಾದ ಕೆ.ಹರೀಶ್‌ಗೌಡ, ಟಿ.ಎಸ್‌.ಶ್ರೀವತ್ಸ, ತನ್ವೀರ್‌ ಸೇಠ್ ಮೇಯರ್‌ ಶಿವಕುಮಾರ್‌, ಉಪ ಮೇಯರ್‌ ಡಾ.ಜಿ.ರೂಪಾ ಇತರರಿದ್ದರು.

ಆರಂಭದಲ್ಲಿ ಖಾಲಿ; ನಂತರ ರಷ್‌ :

ಮೈಸೂರು: ಆರಂಭದಲ್ಲಿ ಮೈದಾನದಲ್ಲಿ ಹಾಕಲಾಗಿದ್ದ ಕುರ್ಚಿ ಖಾಲಿ ಖಾಲಿಯಾಗಿದ್ದವು. ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಮಹದೇವಪ್ಪ ಉದ್ಘಾಟಿಸಿ ಭಾಷಣ ಮಾಡಿ ತೆರಳಿದರೂ ಅರ್ಧ ಮೈದಾನ ಖಾಲಿಯಾಗಿತ್ತು. ಬರದ ಹಿನ್ನೆಲೆ ತೆರೆದ ಹಾಸನದ ವ್ಯವಸ್ಥೆ ಮಾಡಿದ್ದರಿಂದ ಕಾರ್ಯಕ್ರಮ ಮಂಕಾಗಿತ್ತು. 9 ಗಂಟೆ ವೇಳೆಗೆ ಮೈದಾನ ಭರ್ತಿಯಾಯಿತು.

Advertisement

Udayavani is now on Telegram. Click here to join our channel and stay updated with the latest news.

Next