Advertisement

ಮೈಸೂರು ಸ್ಯಾಂಡಲ್‌ ನಕಲಿ ಸಾಬೂನು; BJP ನಾಯಕರ ನಂಟು: ಪ್ರಿಯಾಂಕ್‌

11:51 PM Jan 17, 2024 | Team Udayavani |

ಬೆಂಗಳೂರು: ಹಲವು ದಿನಗಳಿಂದ ವ್ಯಾಪಕವಾಗಿ ನಡೆಯುತ್ತಿರುವ ಪ್ರತಿಷ್ಠಿತ ಮೈಸೂರು ಸ್ಯಾಂಡಲ್‌ ಸಾಬೂನಿನ ನಕಲಿ ಉತ್ಪನ್ನಗಳ ತಯಾರಿಕೆಯಲ್ಲಿ ಬಿಜೆಪಿ ನಾಯಕರ ನಂಟು ಇದೆ ಎಂದು ಆರೋಪಿಸಿರುವ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಸಚಿವ ಪ್ರಿಯಾಂಕ್‌ ಖರ್ಗೆ, ಈ ನಕಲಿ ದಂಧೆಯಲ್ಲಿ ಬಿಜೆಪಿ ನಾಯಕರ ಪಾಲು ಎಷ್ಟು ಎಂಬುದನ್ನು ಸ್ವತಃ ಆ ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದರು.

Advertisement

ಮೈಸೂರು ಸ್ಯಾಂಡಲ್‌ ಸಾಬೂನಿನ ನಕಲಿ ಉತ್ಪನ್ನಗಳ ತಯಾರಿಕಾ ಜಾಲಕ್ಕೂ ಮತ್ತು ಬಿಜೆಪಿ ನಾಯಕರಿಗೂ ಉತ್ತಮ ಒಡನಾಟ ಇರುವುದು ಈ ಸಂಬಂಧ ಕೆಎಸ್‌ಡಿಎಲ್‌ ನಡೆಸಿದ ಕಾರ್ಯಾಚರಣೆಯಿಂದ ಬೆಳಕಿಗೆ ಬಂದಿದೆ. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರು, ವಿಪಕ್ಷದ ನಾಯಕರು ಈ ಬಗ್ಗೆ ಉತ್ತರಿಸಬೇಕು. ಇವರನ್ನು ಕೂಡ ರಾಮ ಭಕ್ತರು ಅಂತ ಹೇಳಿ ಬೀದಿಗಿಳಿದು ಹೋರಾಟ ಮಾಡುತ್ತೀರಾ? ಅಥವಾ ಪಕ್ಷದಿಂದ ವಜಾ ಮಾಡಿ ರಾಜ್ಯದ ಜನರಿಗೆ ಉತ್ತರ ನೀಡುತ್ತೀರಾ ಎಂಬುದನ್ನು ಸ್ಪಷ್ಟಪಡಿಸಬೇಕೆಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ಕೇಳಿದರು.

ಸಾಬೂನಿನ ನಕಲಿ ಉತ್ಪನ್ನಗಳ ತಯಾರಿಕೆಗೆ ಸಂಬಂಧಿಸಿದ ಕೆಎಸ್‌ಡಿಎಲ್‌ ನಡೆಸಿದ ಕಾರ್ಯಾಚರಣೆಯಲ್ಲಿ ರಾಕೇಶ್‌ ಜೈನ್‌ ಮತ್ತು ಮಹಾವೀರ್‌ ಜೈನ್‌ ಎಂಬವರ ವಿರುದ್ಧ ಎಫ್ಐಆರ್‌ ದಾಖಲಿಸಿದ್ದು, ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅವರಿಬ್ಬರೂ ಬಿಜೆಪಿಯ ಸಕ್ರಿಯ ಕಾರ್ಯಕರ್ತರು ಎನ್ನುವುದು ವಿಚಾರಣೆಯಿಂದ ತಿಳಿದುಬಂದಿದೆ. ಅಲ್ಲದೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹಾಗೂ ತೆಲಂಗಾಣ ಶಾಸಕ ರಾಜಾಸಿಂಗ್‌ ಅವರ ಒಡನಾಡಿಗಳಾಗಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಚಿತ್ತಾಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಆಗಿದ್ದ ಮಣಿಕಂಠ ರಾಥೋಡ್‌, ಮಾಜಿ ಶಾಸಕ ವಾಲ್ಮೀಕಿ ನಾಯಕ್‌ ಅವರ ಪುತ್ರ ವಿಠಲ್‌ ನಾಯಕ್‌ ಜತೆಗೂ ಇವರು ಒಡನಾಟ ಇಟ್ಟುಕೊಂಡಿ¨ªಾರೆ. ಇಷ್ಟೆಲ್ಲ ಒಡನಾಟ ಇರುವ ಆರೋಪಿಗಳ ಜತೆ ರಾಜ್ಯ ಬಿಜೆಪಿ ನಾಯಕರು ಸಂಪರ್ಕ ಹೊಂದಿರುವುದಿಲ್ಲವೇ ಎಂದು ಖರ್ಗೆ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next