Advertisement

ರಂಗಾಯಣದಲ್ಲಿ ಗರಿಗೆದರಿದ ರಂಗ ಚಟುವಟಿಕೆ

02:47 PM Aug 09, 2021 | Team Udayavani |

ಮೈಸೂರು: ಕೋವಿಡ್‌ ಎರಡನೇ ಅಲೆ ಹಿನ್ನೆಲೆ ಲಾಕ್‌ಡೌನ್‌ನಿಂದಾಗಿ ಸತತ3 ತಿಂಗಳ ಕಾಲ ಸ್ತಬ್ಧವಾಗಿದ್ದ ಮೈಸೂರಿನ ರಂಗಾಯಣದ ಅಂಗಳದಲ್ಲಿ ಮತ್ತೆ ರಂಗ ಸದ್ದು ಆರಂಭವಾಗಿದೆ.

Advertisement

90 ದಿನಕ್ಕೂ ಹೆಚ್ಚುಕಾಲ ಮನೆಯಲ್ಲೇ ಇದ್ದಕಲಾವಿದರೀಗ ರಂಗಾಯಣದ ಅಂಗಳದತ್ತ ಮುಖ ಮಾಡಿದ್ದಾರೆ. ಖ್ಯಾತ ರಂಗ ನಿರ್ದೇಶಕ ಪ್ರಕಾಶ್‌ ಬೆಳವಾಡಿ ನಿರ್ದೇಶನದಲ್ಲಿ ಪ್ರಸ್ತುತಪಡಿಸುತ್ತಿರುವ, ಹಿರಿಯ ಸಾಹಿತಿ ಡಾ.ಎಸ್‌. ಎಲ್‌.ಭೈರಪ್ಪ ರಚಿತಕಾದಂಬರಿ ಪರ್ವ ನಾಟಕದ ರಿಯರ್ಸಲ್‌ನಲ್ಲಿ ರಂಗಾಯಣ ಕಲಾವಿದರು ನಿರಂತರಾಗಿದ್ದಾರೆ.

1989ರಲ್ಲಿ ಅಸ್ತಿತ್ವಕ್ಕೆ ಬಂದ ರಂಗಾಯಣ ದಿ.ಬಿ.ವಿ.ಕಾರಂತರ ಕನಸಿನ ಕೂಸು. ರಂಗಾಯಣ ಬಿ.ವಿ.ಕಾರಂತರ ಕಲ್ಪನೆ,ಕನಸು ಹಾಗೂ ಪ್ರತಿಜ್ಞೆಗಳನ್ನು ಒಳಗೊಂಡ ಕಲಾವಿದರು, ತಾಂತ್ರಿಕವರ್ಗ ಮತ್ತು ಸಿಬ್ಬಂದಿ ಶ್ರಮದಿಂದ ತಲೆ ಎತ್ತಿ ನಿಂತಿದೆ. ಆದರೆ,31 ವರ್ಷದ ಇತಿಹಾಸದಲ್ಲಿ ಒಂದು ವರ್ಷದ ಅಂತರದಲ್ಲಿ 2 ಬಾರಿ ಕೋವಿಡ್‌ ಲಾಕ್‌ಡೌನ್‌ ಕಾರಣದಿಂದ ದೀರ್ಘ‌ಕಾಲ ತನ್ನೆಲ್ಲ ಚಟುವಟಿಕೆ ನಿಲ್ಲಿಸಿ ಮೌನಕ್ಕೆ ಶರಣಾಗಿತ್ತು. ಆದರೆ,ಕಳೆದೊಂದು ವಾರದಿಂದ ಮತ್ತೆ ರಂಗಾಯಣದ ಅಂಗಳದಲ್ಲಿ ರಂಗ ಚಟುವಟಿಕೆಗಳು ಪುನಾರಂಭಗೊಂಡಿವೆ.

ಸದಾಕಾಲ ವೇದಿಕೆ ಮೇಲೆ ವಿಜೃಂಭಿಸುತ್ತಿದ್ದ ರಂಗಾಯಣದ ಕಲಾವಿದರು ಲಾಕ್‌ಡೌನ್‌ ಕಾರಣ ಮನೆಯಲ್ಲೇ ಇದ್ದರು. ಇದೀಗ ರಂಗಾಯಣ ಅಂಗಳಕ್ಕೆ ಆಗಮಿಸಿರುವ ಅವರು,ಕಳೆದ 8 ದಿನಗಳಿಂದಲೂ “ಪರ್ವ’ ನಾಟಕದ ರಿಯರ್ಸನಲ್ಲಿ ಮಗ್ನರಾಗಿದ್ದಾರೆ. ಪರಸ್ಪರ ಅಂತರ ಕಾಯ್ದುಕೊಳ್ಳುವ ಮೂಲಕ ತಂಡಗಳಾಗಿ ತಮ್ಮಲ್ಲೇ ವಿಭಜಿಸಿಕೊಂಡು ನಾಟಕ ಅಭ್ಯಾಸ ಮಾಡುತ್ತಿದ್ದಾರೆ. ಎಲ್ಲ ಅಂದುಕೊಂಡಂತೆ ನಡೆದರೆ ರಂಗಾಯಣದ ಅಂಗಳದಲ್ಲಿ ಅಗಸ್ಟ್‌ ಅಂತ್ಯದಲ್ಲಿ ನಾಟಕ ಪ್ರದರ್ಶನ ಏರ್ಪಡಿಸಲಾಗುವುದು ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಮತ್ತೆ ರಾಗ ರಂಗಾಯಣ: ವರ್ಷದ ಆರಂಭದಲ್ಲಿ ರೂಪಿಸಲಾಗಿದ್ದ ರಾಗರಂಗಾಯಣ ಕಾರ್ಯಕ್ರಮ ಮತ್ತೆ ಆರಂಭ ಮಾಡುವ ನಿಟ್ಟಿನಲ್ಲಿ ರಂಗಾಯಣ ಸಿದ್ಧತೆ ನಡೆಸಿದೆ. ಪ್ರತಿ ತಿಂಗಳು ನಡೆಯುವ ಈ ಕಾರ್ಯಕ್ರಮವನ್ನು ಆಗಸ್ಟ್‌ 14ರಿಂದ ಪ್ರಾರಂಭಿಸಲು ಚಿಂತಿಸಲಾಗಿದೆ. ರಂಗ ಚಟುವಟಿಕೆಗಳೊಂದಿಗೆ ಸಂಗೀತದ ರಸ ಸ್ವಾದವನ್ನು ರಸಿಕರಿಗೆ ನೀಡುವ ದೃಷ್ಟಿಯಿಂದ ರಾಗ ರಂಗಾಯಣ ಕಾರ್ಯಕ್ರಮ ರೂಪಿಸಿರುವುದು ವಿಶೇಷ. ಶೇ.60ರಷ್ಟು ಪೂರ್ಣಗೊಂಡ ದಾಖಲೀಕರಣ: ರಂಗಾಯಣದ ಕಳೆದ 31 ವರ್ಷಗಳ ಎಲ್ಲ ರಂಗಪ್ರಯೋಗಗಳು, ಬೀದಿ ನಾಟಕಗಳು ಹಾಗೂ

Advertisement

ಇದನ್ನೂ ಓದಿ:ಸ್ನೇಹ ಸೇತು ಮುರಿದ ಆನ್ ಲೈನ್..! ನಾವೆಂದು ಸೇರೋದು ಮತ್ತೆ?  

ರಂಗಗೀತೆಗಳು ಮತ್ತಿತರ ರಂಗ ಚಟುವಟಿಕೆಗಳ ಬಗ್ಗೆ ಈಗಾಗಲೇ ಸಾಕ್ಷ್ಯಚಿತ್ರ ತಯಾರಿಸಲಾಗಿದೆ. ಜತೆಗೆ ರಂಗಾಯಣದಲ್ಲಿ ಪ್ರಯೋಗಗೊಂಡ ಎಲ್ಲ ನಾಟಕಗಳನ್ನು ದಾಖಲೀಕರಣ ಮಾಡಲುಕೊರೊನಾ ಮೊದಲ ಅಲೆಯ ಲಾಕ್‌ಡೌನ್‌ ಸಮಯದಲ್ಲೇ ಚಿಂತಿಸಲಾಗಿತ್ತು. ರಂಗಾಯಣದ ಹಿರಿಯ ಕಲಾವಿದರು 100ಕ್ಕೂ ಹೆಚ್ಚು ನಾಟಕಗಳನ್ನು ಪ್ರಸ್ತುತಪಡಿಸಿದ್ದಾರೆ. ಇನ್ನು ಭಾರತೀಯ ರಂಗ ಕೇಂದ್ರದ ವಿದ್ಯಾರ್ಥಿಗಳು 20 ರಿಂದ 25 ಹಾಗೂ ಸಂಚಾರಿ ರಂಗ ತಂಡವು 10 ನಾಟಕಗಳನ್ನು ಪ್ರಸ್ತುತಪಡಿಸಿದೆ. ಈ ಪೈಕಿ ಈಗಾಗಲೇ ಶೇ.60ರಷ್ಟು ನಾಟಕಗಳನ್ನು ದಾಖಲಿಸಲಾಗಿದೆ ಎಂದು ರಂಗಾಯಣ ನಿರ್ದೇಶಕರು ತಿಳಿಸಿದ್ದಾರೆ.

ಕೋವಿಡ್‌ 3ನೇಭೀತಿ
ಈಗಾಗಲೇ 1 ಮತ್ತು 2ನೇ ಅಲೆಗೆ ಸಿಕ್ಕಿ ನಲುಗಿರುವ ರಂಗಭೂಮಿಗೆ ಸಂಭವನೀಯ 3ನೇ ಅಲೆಯೂ ಆತಂಕ ತಂದೊಡ್ಡಿದೆ. ಕಳೆದ 15 ದಿನಗಳ ಹಿಂದೆ ರಂಗಾಯಣದ ಆವರಣದಲ್ಲಿ ಒಂದೊಂದಾಗಿಯೇ ರಂಗಚಟುವಟಿಕೆಗಳು ಆರಂಭವಾಗಿತ್ತಾದರೂಮತ್ತೆ ಮೈಸೂರಿನಲ್ಲಿ ವೀಕೆಂಡ್‌ ಕರ್ಫ್ಯೂ ಮತ್ತು ನೈಟ್‌ ಕರ್ಫ್ಯೂ ಜಾರಿ ಮಾಡಿರುವುದು ರಂಗಭೂಮಿಗೆ ಮತ್ತೆ ಕರಿನೆರಳು ಆವರಿಸುವ ಸಾಧ್ಯತೆಯಿದೆ ಎಂಬುದು ಕಲಾವಿದರ ಅಳಲು.

ರಂಗಾಯಣ ಕಲಾವಿದರು ಎಂದಿನಂತೆ ತಮ್ಮ ಚಟುವಟಿಕೆಯಲ್ಲಿ ಮಗ್ನರಾಗಿದ್ದಾರೆ. ರಂಗ ನಿರ್ದೇಶಕ ಪ್ರಕಾಶ್‌ ಬೆಳವಾಡಿ ನಿರ್ದೇಶನದಲ್ಲಿ ಪ್ರಸ್ತುತಪಡಿಸುತ್ತಿರುವ ಡಾ.ಎಸ್‌.ಎಲ್‌.ಭೈರಪ್ಪ ರಚಿತ ಕಾದಂಬರಿ ಪರ್ವ ನಾಟಕದ ತಾಲೀಮು ಮತ್ತೆ ಆರಂಭಗೊಂಡಿದ್ದು, ಆ.21ರಿಂದ ಪ್ರದರ್ಶನ ನೀಡುವ ಚಿಂತನೆ ಇದೆ.
– ಅಡ್ಡಂಡ ಸಿ.ಕಾರ್ಯಪ್ಪ, ರಂಗಾಯಣ ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next