ಮೈಸೂರು: ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ವಿಶ್ವ ಬ್ರಾತೃತ್ವ ದಿನವಾದ ಬುಧವಾರದಂದು ನಗರದ ಮಂಜುನಾಥಪುರದಲ್ಲಿ ಪಾದಯಾತ್ರೆೆ ಕೈಗೊಳ್ಳುವ ಮೂಲಕ ಸೌಹಾರ್ದತೆಯ ಸಂದೇಶ ಸಾರಿದರು.
ಹೆಚ್ಚು ದಲಿತರು ವಾಸಿಸುವ ಮಂಜುನಾಥಪುರದ ಬೀದಿಗಳಲ್ಲಿ ಸಂಚರಿಸಿದ ಶ್ರೀಗಳು ನಂತರ ಸ್ಥಳೀಯ ನಿವಾಸಿ ಚೌಡಪ್ಪ- ರಾಜಮ್ಮ ದಂಪತಿಯ ಮನೆಗೆ ಭೇಟಿ ನೀಡಿದರು. ಈ ವೇಳೆ ಸ್ವಾಮೀಜಿಯವರನ್ನು ತುಳಸಿ ಹಾರ ನೀಡಿ ಬರ ಮಾಡಿಕೊಂಡ ದಂಪತಿ ಪಾದಮುಟ್ಟಿಿ ನಮಸ್ಕರಿಸಿದರು.
ಚೌಡಪ್ಪ ಹೃದ್ರೋಗಿಯಾಗಿದ್ದು, ರಾಜಮ್ಮ ಕ್ಯಾನ್ಸರ್ ಕಾಯಿಲೆಯಿಂದ ಬಳಲುತ್ತಿಿದ್ದಾರೆ. ಈ ಕುಟುಂಬ ಒಬ್ಬ ಮಗನ ದುಡಿಮೆಯಿಂದಲೇ ಬದುಕು ನಡೆಸುತ್ತಿದೆ. ಮನೆಯ ಸಂಕಷ್ಟವನ್ನು ಕೇಳಿ ತಿಳಿದ ಶ್ರೀಗಳು ಕುಟುಂಬಕ್ಕೆೆ ನೆರವು ನೀಡಲಾಗುವುದು ಎಂದು ‘ಭರವಸೆ ನೀಡಿದರು.
ಪಾದಯಾತ್ರೆೆಗೆ ಮಳೆ ಅಡ್ಡಿ : ಪೇಜಾವರ ಶ್ರೀಗಳ ಪಾದಯಾತ್ರೆೆ ಮಧ್ಯಾಹ್ನ 3.30ಕ್ಕೆೆ ನಿಗದಿಯಾಗಿತ್ತು. ಆದರೆ,ಸ್ವಾಮೀಜಿ ಬರುವಾಗ 4.50 ಆಗಿತ್ತು. ಪಾದಯಾತ್ರೆೆ ಪ್ರಾಾರಂಭಿಸಿ ಚೌಡಪ್ಪ-ರಾಜಮ್ಮ ದಂಪತಿ ಮನೆಗೆ ಆಗಮಿಸುತ್ತಿಿದ್ದಂತೆಯೇ ಧಾರಾಕಾರ ಮಳೆ ಸುರಿಯಿತು. ಚೌಡಪ್ಪ-ರಾಜಮ್ಮ ದಂಪತಿಯೊಂದಿಗೆ ಮಾತುಕತೆ ನಡೆಸಿದ ನಂತರ ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನಕ್ಕೆ ಸಂಜೆ 5.15ಕ್ಕೆೆ ಆಗಮಿಸಿದ ಶ್ರೀಗಳು ಪೂಜೆ ಸಲ್ಲಿಸಿ ನಿರ್ಗಮಿಸಿದರು.
ವೀಲ್ ಚೇರ್ ಬಳಕೆ: ಆರೋಗ್ಯ ಸಮಸ್ಯೆೆಯಿಂದ ಬಳಲುತ್ತಿಿರುವ ಪೇಜಾವರ ಶ್ರೀಗಳು ವೀಲ್‌ಚೇರ್‌ನಲ್ಲಿ ಕುಳಿತು ಪಾದಯಾತ್ರೆೆ ಮೆರವಣಿಗೆಯಲ್ಲಿ ಸಾಗಿದರು. ಶ್ರೀಗಳಿಗೆ ಮಾರ್ಗದ ಉದ್ದಕ್ಕೂ ಹೂವು ಹಾಸಿ ಪೂರ್ಣಕುಂಭ ಸ್ವಾಗತ ಕೋರಲಾಯಿತು. ಪಾದಯಾತ್ರೆೆಯಲ್ಲಿ ನೂರಾರು ಸಂಖ್ಯೆೆಯಲ್ಲಿ ಸ್ಥಳೀಯ ನಿವಾಸಿಗಳು ಪಾಲ್ಗೊಂಡಿದ್ದರು.
ಶ್ರೀಗಳ ಭೇಟಿ ಹಿನ್ನೆೆಲೆಯಲ್ಲಿ ಗ್ರಾಮದಲ್ಲಿ ತಳಿರು ತೋರಣ ಕಟ್ಟಿಿ ಶೃಂಗರಿಸಲಾಗಿತ್ತು, ಶ್ರೀ ವೀರಾಂಜನೇಯ ಸ್ವಾಮಿ ದೇವಸ್ಥಾನದ ಆವರಣದಲ್ಲಿ ಭಜನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಸಮಾಜದಲ್ಲಿ ಸಾಮರಸ್ಯ ಮೂಡಿಸುವ ಸಲುವಾಗಿ ಪಾದಯಾತ್ರೆೆ ಕೈಗೊಂಡಿದ್ದೇನೆ. ಆ ಕಾರಣಕ್ಕೆೆ ಚಾರ್ತುಮಾಸ್ಯ ವ್ರತ ಕೈಗೊಂಡಿದ್ದರೂ ಎಲ್ಲ ಕಟ್ಟುಪಾಡುಗಳನ್ನು ಬದಿಗಿಟ್ಟು ಮಂಜುನಾಥಪುರದಲ್ಲಿ ಪಾದಯಾತ್ರೆೆ ಕೈಗೊಂಡಿದ್ದೇನೆ ಎಂದು ಶ್ರೀಗಳು ತಿಳಿಸಿದರು.
ಈ ಸಂದರ್ಭ ರಾಮಕೃಷ್ಣ ಆಶ್ರಮದ ಸ್ವಾಮೀಜಿಗಳಾದ ಸ್ವಾಮಿ ಯುಕ್ತೇಶಾನಂದ ಮಹಾರಾಜ್, ಸ್ವಾಮಿ ಶಿವಕಾಂತಾನಂದ ಮಹಾರಾಜ್, ಮಾತಾ ಅಮೃತಾನಂದಮಯಿ ಮಠದ ಶ್ರೀ ಕೃಷ್ಣ ಬ್ರಹ್ಮಚಾರಿ ಸ್ವಾಮೀಜಿ ಉಪಸ್ಥಿತರಿದ್ದರು.