-ಪ್ರವೇಶದರ ಏಕರೂಪ ನಿಗದಿ
ಮೈಸೂರು: ವಿಶ್ವವಿಖ್ಯಾತ ಮೈಸೂರು ಅರಮನೆಯ ಪ್ರವೇಶ ದರವನ್ನು ಏಕರೂಪಗೊಳಿಸಲು ತೀರ್ಮಾನಿಸಲಾಗಿದೆ.
ಮೈಸೂರು ಅರಮನೆ ಮಂಡಳಿ ಅಧ್ಯಕ್ಷರೂ ಆದ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಸುಭಾಷ್‌ಚಂದ್ರ ಕುಂಠಿಯಾ ಅಧ್ಯಕ್ಷತೆಯಲ್ಲಿ ನಡೆದ ಅರಮನೆ ಮಂಡಳಿ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಯಿತು.
Advertisement
ಭಾರತೀಯರಿಗೆ ನಿಗದಿಪಡಿಸಿದ್ದ ಪ್ರವೇಶ ದರವನ್ನು 40 ರೂ.ಗಳಿಂದ 50 ರೂ.ಗೆ ಹೆಚ್ಚಿಸಲಾಗಿದೆ. ವಿದೇಶಿಯರಿಗೂ ಸಹಾ ಇದೇ ದರ ಅನ್ವಯವಾಗಲಿದೆ. ಮಕ್ಕಳಿಗೆ ನಿಗದಿಪಡಿಸಲಾಗಿದ್ದ 10 ರೂ. ಪ್ರವೇಶ ದರವನ್ನು ಹಾಗೆಯೇ ಮುಂದುವರಿಸಲು ಹಾಗೂ ಐದು ವರ್ಷದ ಒಳಗಿನ ಮಕ್ಕಳಿಗೆ ಉಚಿತ ಪ್ರವೇಶಕ್ಕೆ ಸಭೆ ತೀರ್ಮಾನಿಸಿದೆ.
Related Articles
Advertisement
ಚಾಮುಂಡಿ ಬೆಟ್ಟದಲ್ಲಿರುವಂತೆ ಸಿಐಐ ವತಿಯಿಂದ ಸಿಎಸ್‌ಆರ್ ಯೋಜನೆಯಡಿ ಪಾರಂಪರಿಕ ಕಟ್ಟಡವಾದ ಅರಮನೆಯ ವಿನ್ಯಾಸಕ್ಕೆ ಧಕ್ಕೆಯಾಗದ ರೀತಿಯಲ್ಲಿ ಹೈಟೆಕ್ ಹಸಿರು ಶೌಚಾಲಯಗಳನ್ನು ಪ್ರಾಚ್ಯವಸ್ತು ಮತ್ತು ಪರಂಪರೆ ಇಲಾಖೆಯಿಂದ ಅನುಮತಿ ಪಡೆದು ನಿರ್ಮಿಸಲು ಸಭೆ ನಿರ್ಧರಿಸಿತು.
ಇತ್ತೀಚೆಗೆ ಅರಮನೆಗೆ ಭೇಟಿ ನೀಡುತ್ತಿರುವ ಪ್ರವಾಸಿಗರ ಸಂಖ್ಯೆ ಹಚ್ಚುತ್ತಿರುವುದರಿಂದ, ಪ್ರತಿ ದಿನ ಧ್ವನಿ-ಬೆಳಕು ಕಾರ್ಯಕ್ರಮದ ನಂತರ, ಅರಮನೆ ವಿದ್ಯುತ್ ದೀಪಗಳನ್ನು 5 ನಿಮಿಷಗಳ ಬದಲಿಗೆ 15 ನಿಮಿಷ ಬೆಳಗಲು ಹಾಗೂ ಭಾನುವಾರ ಮತ್ತು ಸರ್ಕಾರಿ ರಜಾ ದಿನಗಳಂದು 1 ಗಂಟೆ ಬೆಳಗಿಸಲು ತೀರ್ಮಾನಿಸಲಾಯಿತು.
ಸಭೆಯಲ್ಲಿ ಮಂಡಳಿ ಸದಸ್ಯರುಗಳಾದ ಲೋಕೋಪಯೋಗಿ ಇಲಾಖೆ, ಕಾನೂನು ಇಲಾಖೆ ಕಾರ್ಯದರ್ಶಿಗಳು, ಪ್ರಾಚ್ಯವಸ್ತು ಮತ್ತು ಸಂಗ್ರಹಾಲಯಗಳ ನಿರ್ದೇಶನಾಲಯದ ಆಯುಕ್ತರು, ಅರಮನೆ ಮಂಡಳಿ ಕಾರ್ಯನಿರ್ವಾಹಕ ನಿರ್ದೇಶಕರಾದ ಜಿಲ್ಲಾಧಿಕಾರಿ ಡಿ.ರಂದೀಪ್, ಅರಮನೆ ಮಂಡಳಿ ಉಪ ನಿರ್ದೇಶಕ ಟಿ.ಎಸ್.ಸುಬ್ರಹ್ಮಣ್ಯ ಉಪಸ್ಥಿತರಿದ್ದರು.