Advertisement

ಈಜು ಕೊಳದಿಂದ ಪಾರಂಪರಿಕತೆಗೆ ಧಕ್ಕೆಯಾಗಿಲ್ಲ: ರೋಹಿಣಿ ಸಿಂಧೂರಿ

05:55 PM Jun 07, 2021 | Team Udayavani |

ಮೈಸೂರು: ಜಿಲ್ಲಾಧಿಕಾರಿಗಳ ಅಧಿಕೃತ ನಿವಾಸದ ಆವರಣದಲ್ಲಿನಿರ್ಮಾಣವಾಗಿರುವ ಈಜುಕೊಳದಿಂದ ಪಾರಂಪರಿಕತೆಹಾಗೂ ಕಟ್ಟಡಕ್ಕೆ ಯಾವುದೇ ರೀತಿಯ ಧಕ್ಕೆಯಾಗಿಲ್ಲ ಎಂದುನಿರ್ಗಮಿತ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ತಿಳಿಸಿದ್ದಾರೆ.

Advertisement

ನಿರ್ಮಿತಿ ಕೇಂದ್ರದಲ್ಲಿ ಜಾಗ ಇಲ್ಲ: ಈಜುಕೊಳ ನಿರ್ಮಾಣದಸಂಬಂಧ ಉಂಟಾಗಿರುವ ವಿವಾದ ಬಗ್ಗೆ ಪ್ರಾದೇಶಿಕಆಯುಕ್ತರಿಗೆ ಬರೆದಿರುವ ಪತ್ರದಲ್ಲಿ ಈ ವಿಷಯ ತಿಳಿಸಿರುವಅವರು, ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಈಜುಕೊಳನಿರ್ಮಿಸುವ ಪ್ರಸ್ತಾವನೆ ಇದೆ. ಈ ರೀತಿ ಕಾಮಗಾರಿ ಕೈಗೊಳ್ಳಲುಪ್ರತಿ ಜಿಲ್ಲೆಯಲ್ಲೂ ನಿರ್ಮಿತಿ ಕೇಂದ್ರಗಳಿವೆ. ಇವು ಸ್ಥಳೀಯವಾಗಿ ದೊರೆಯುವ ಸಂಪನ್ಮೂಲ ಬಳಸಿ, ಕಡಿಮೆವೆಚ್ಚದಲ್ಲಿ ಯಾವ ರೀತಿ ಕಾಮಗಾರಿ ನಡೆಸಬಹುದು ಎಂಬ ಬಗ್ಗೆ ಪೈಲಟ್‌ ಯೋಜನೆ ಮಾಡುತ್ತಿರುತ್ತಾರೆ.

ಅದೇ ರೀತಿ ಮೈಸೂರಿನ ನಿರ್ಮಿತಿಕೇಂದ್ರದವರು ಕಡಿಮೆ ವೆಚ್ಚದ ತಂತ್ರಜ್ಞಾನಬಳಕೆ ಬಗ್ಗೆ ಪೈಲಟ್‌ ಯೋಜನೆಯಾಗಿಕಳೆದ ಜನವರಿಯಲ್ಲಿ 28.72 ಲಕ್ಷ ರೂ.ವೆಚ್ಚದಲ್ಲಿ ಈಜುಕೊಳ ನಿರ್ಮಿಸಿದ್ದಾರೆ.ನಿರ್ಮಿತಿ ಕೇಂದ್ರದಲ್ಲಿ ಜಾಗ ಇಲ್ಲದಿದ್ದರಿಂದ ತಮ್ಮ ನಿವಾಸದಲ್ಲಿ ನಿರ್ಮಿಸಲಾಗಿದೆ ಎಂದು ಹೇಳಿದ್ದಾರೆ.

ಆಧಾರ ರಹಿತ: ಜಿಲ್ಲಾಧಿಕಾರಿ ನಿವಾಸ 5.15 ಎಕರೆಪ್ರದೇಶದಲ್ಲಿದೆ. ಪಾರಂಪರಿಕ ಕಟ್ಟಡಕ್ಕೂ ಈಜುಕೊಳನಿರ್ಮಿಸಿರುವ ಸ್ಥಳ ದೂರದಲ್ಲಿವೆ. ಹೀಗಾಗಿ ಈ ಸಂಬಂಧಮಾಡಿರುವ ಆರೋಪ ಆಧಾರರಹಿತ ಎಂದಿದ್ದಾರೆ.ಇದೇ ರೀತಿ ಕಟ್ಟಡಗಳಲ್ಲಿ ಅಂದರೆ ನಗರ ಪಾಲಿಕೆಯಲ್ಲಿಚುನಾವಣಾ ಶಾಖೆ, ವಸಂತಮಹಲ್‌ ಒಳಾವರಣದಲ್ಲಿ,ಪ್ರಾದೇಶಿಕ ಆಯುಕ್ತರ ಕಚೇರಿಯಲ್ಲಿ ಚಾಮುಂಡಿಸಭಾಂಗಣ, ಜಲದರ್ಶಿನಿ ಆವರಣದಲ್ಲಿ ಪಿಡಬ್ಲ್ಯುಡಿಅತಿಥಿಗೃಹ ನಿರ್ಮಿಸಲಾಗಿದೆ. ಆದರೆ, ಎಲ್ಲಿಯೂಪಾರಂಪರಿಕ ಕಟ್ಟಡಗಳಿಗೆ ಧಕ್ಕೆಯಾಗಿಲ್ಲ ಎಂದು ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next