Advertisement

ದೇವಾಲಯ ನೆಲಸಮ ಅಕ್ಷಮ್ಯ ಅಫರಾಧ: ಸಂಸದ ಪ್ರತಾಪ ಸಿಂಹ ಕಿಡಿ

08:42 PM Sep 12, 2021 | Team Udayavani |

ಮೈಸೂರು: ದೇವಾಲಯ ನೆಲಸಮ ಕುರಿತಂತೆ ಆಕ್ರೋಶ ವ್ಯಕ್ತಪಡಿಸಿರುವ ಸಂಸದ ಪ್ರತಾಪ ಸಿಂಹ ಇದೊಂದು ಅಕ್ಷಮ್ಯ ಅಫರಾಧ  ಎಂದು ಕಿಡಿಕಾರಿದ್ದಾರೆ.

Advertisement

ಅವರು ನಂಜನಗೂಡಿನ ಹುಚ್ಚಗಣಿ ಗ್ರಾಮಕ್ಕೆ ಸಂಸದ ಪ್ರತಾಪ್ ಸಿಂಹ ಭೇಟಿದ್ದು ಬಳಿಕ ದೇವಾಲಯ ನೆಲಸಮಗೊಳಿಸಿರುವ ಸ್ಥಳಕ್ಕೆ ಭೇಟಿ ನೀಡಿ ಗ್ರಾಮಸ್ಥರ ಜತೆ ಮಾತುಕತೆ ನಡೆಸಿದರು.

ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳು ಸುಪ್ರೀಂಕೋರ್ಟ್ ಆದೇಶವನ್ನು ಸರಿಯಾದ ರೀತಿಯಲ್ಲಿ ಪರಿಶೀಲನೆ ಮಾಡಿಲ್ಲ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಅಧಿಕಾರಿಗಳ ಎಡವಟ್ಟಿನಿಂದ ಹಿಂದೂ ಧಾರ್ಮಿಕ ಸ್ಥಳ ಮತ್ತು ಭಾವೈಕ್ಯತೆಗೆ ಧಕ್ಕೆ ಬಂದಿದೆ ಎಂದರು.

ಶ್ರೀ ಶಕ್ತಿ ಮಹಾದೇವಮ್ಮ ದೇವಾಲಯ ಬರೋಬ್ಬರಿ 800 ವರ್ಷಗಳ ಇತಿಹಾಸವುಳ್ಳ ದೇವಾಲಯವಾಗಿದೆ. ಯಾರಿಗೂ  ತೊಂದರೆಯಾಗದಿದ್ದ ದೇವಾಲಯವನ್ನು  ನೆಲಸಮಗೊಳಿಸಿದ್ದು ಅಕ್ಷಮ್ಯ ಅಫರಾಧವಾಗಿದ್ದು ಇದನ್ನು ಸಮರ್ಥಿಸಲು ಸಾಧ್ಯವೇ ಎಂದು ಹೇಳಿದರು.

ಇದನ್ನೂ ಓದಿ:ಗಣಪನ ಕೊರಳಲ್ಲಿ ಹೆಡೆ ಬಿಚ್ಚಿ ಭಕ್ತರಿಗೆ ದರ್ಶನ ನೀಡಿದ ಜೀವಂತ ನಾಗರ ಹಾವು !

Advertisement

ಇದೊಂದು ಇತಿಹಾಸ ಪೂರ್ವದ ದೇವಾಲಯ ಎಂಬುವುದಕ್ಕೆ ಈ ವೀರಗಲ್ಲುಗಳೇ ಸಾಕ್ಷಿ ಹೇಳುತ್ತಿವೆ ಇದನ್ನು ಕೂಡ ಅಧಿಕಾರಿಗಳು ಗಮನಿಸಿಲ್ಲ  ಇನ್ನು 92 ದೇವಾಲಯಗಳು ರಾಜ್ಯದ ವಿವಿಧ ಮೂಲೆ ಗಳಲ್ಲಿವೆ ಅವುಗಳನ್ನು ಯಾವುದೇ ಕಾರಣಕ್ಕೂ ಅಧಿಕಾರಿಗಳು ಮುಟ್ಟಲು ಬಿಡುವುದಿಲ್ಲ ಎಂದು ಗುಡುಗಿದರು .

ಅಧಿಕಾರಿಗಳಿಗೆ ತಕ್ಕ ಪಾಠ ಕಲಿಸುತ್ತೇವೆ ನೀವು ಆತಂಕಕ್ಕೆ ಒಳಗಾಗುವುದು ಬೇಡಿ ಎಂದ ಅವರು  ಈಗಾಗಲೇ ದಾನಿಗಳು ದೇವಾಲಯ ನಿರ್ಮಾಣಕ್ಕೆ ಭೂಮಿ ನೀಡಲು ಮುಂದಾಗಿದ್ದಾರೆ ಅಲ್ಲದೆ ಉತ್ತಮ ರೀತಿಯಲ್ಲಿ ದೇವಾಲಯ ನಿರ್ಮಾಣ ಮಾಡಲು ನಾವು ಸಹಕರಿಸುತ್ತೇವೆ ಎಂದು ಹೇಳಿದ್ದಾರೆ.

ಇಲ್ಲಿಯ  ವಾಸ್ತವ ವರದಿಯನ್ನು ಈಗಾಗಲೇ ಪರಿಶೀಲನೆ ಮಾಡಲಾಗಿದೆ ಇದನ್ನು ಬಿಜೆಪಿ ಪಕ್ಷದ ದೊಡ್ಡ ಮಟ್ಟದ ನಾಯಕರು ಹಾಗೂ ಹಿರಿಯ ಅಧಿಕಾರಿಗಳ ಜೊತೆ  ತಾವು ಚರ್ಚೆ ಮಾಡಿದ್ದು ಮುಂದಿನ ಘಟನೆಗೆ ಕಾದು ನೋಡಿ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next