ನಂಜನಗೂಡು: ಜಲಾಶಯಗಳಿಂದ ಹೆಚ್ಚು ನೀರುಬಿಡು ತ್ತಿರುವುದರಿಂದ ಕಪಿಲಾ ನದಿಯಲ್ಲಿ 45 ಸಾವಿರಕ್ಯುಸೆಕ್ ನೀರು ಹರಿದು ಬರುತ್ತಿದ್ದು, ನೀರು ಹರಿವುಮತ್ತಷ್ಟು ಹೆಚ್ಚಾದರೆ ಪ್ರವಾಹ ಎದುರಾಗುವಸಾಧ್ಯತೆ ಇದೆ. ಶ್ರೀ ಕಂಠೇಶ್ವರನ ಸನ್ನಿಧಿಯ ಸ್ನಾನಘಟ್ಟದಲ್ಲಿ ನೀರುಹೆಚ್ಚು ಆವರಿಸಿರುವುದರಿಂದ ಭಕ್ತರಿಗೆ ಸ್ನಾನ ಹಾಗೂಮುಡಿ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.
ಶನಿವಾರ ಗುರು ಪೂರ್ಣಿಮಿ ಹಿನ್ನೆಲೆಯಲ್ಲಿ ದೇಗುಲಕ್ಕೆ ಆಗಮಿಸಿದ್ದ ಭಕ್ತರು ಕಪಿಲಾ ನದಿಯ ಸ್ನಾನ ಘಟ್ಟದಲ್ಲಿಮಿಂದೇಳಲಾರದೆ ಪರದಾಡಿದರು.
ನಿರ್ಬಂಧ: ದೇವಾಲಯದ ಎದುರಿನ ಕಪಿಲಾಸ್ನಾನಘಟ್ಟದಲ್ಲಿ ನದಿಗಿಳಿಯುವುದನ್ನು ತಾಲೂಕು ಆಡಳಿತಹಾಗೂ ದೇವಾಯದ ಅಧಿಕಾರಿಗಳು ನಿರ್ಬಂಧ ವಿಧಿಸಿದ್ದಾರೆ. ಜೊತೆಗೆ ಮುಡಿ ಸೇವೆಯನ್ನೂ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ಒಂದು ವೇಳೆ ಮುಡಿಗೆ ಅವಕಾಶ ನೀಡಿದರೆ ಕಪಿಲೆ ನದಿಗೆ ಇಳಿಯುತ್ತಾರೆ ಎಂಬ ಉದ್ದೇಶದಿಂದ ಮುನ್ನೆಚ್ಚರಿಕೆ ಕ್ರಮವಾಗಿ ಮುಡಿಕಟ್ಟೆಯನ್ನುತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.
ನಿರ್ಬಂಧದ ನಡುವೆಯೂ ಭಕ್ತರು ನದಿ ಆಚೆ ಹೆಜ್ಜಿಗೆಬದಿಯ ದಡಕ್ಕೆ ತೆರಳಿ ಸ್ನಾನ ಮಾಡಿ ದೇಗುಲಕ್ಕೆಆಗಮಿಸಿ, ದೇವರ ದರ್ಶನ ಪಡೆದರು.ಕಪಿಲೆ ನೀರು ಐತಿಹಾಸಿಕ ಪರುಶರಾಮ ದೇವಾಲಯವನ್ನು ಸುತ್ತುವರಿಯಲಾರಂಭಿಸಿದೆ. ಈಗಾಗಲೇ ಹದಿನಾರು ಕಾಲು ಮಂಟಪ ಭಾಗಶಃ ಮುಳುಗಿಹೋಗಿದೆ.