ಮೈಸೂರು: ಕಳೆದ ವರ್ಷದಂತೆ ಈ ಬಾರಿಯೂ ಭಕ್ತರಿಲ್ಲದೇಆಷಾಢ ಶುಕ್ರವಾರದ ಅಮಾವಾಸ್ಯೆ ಪೂಜೆ ನಾಡ ದೇವತೆ ಚಾಮುಂಡೇಶ್ವರಿಯ ಸನ್ನಿಧಿಯಲ್ಲಿ ನೆರವೇರಿತು.
ಕೊರೊನಾ ಸೋಂಕು ತಡೆಯುವ ಉದ್ದೇಶದಿಂದ ಜಿಲ್ಲಾಡಳಿತ, ಆಷಾಢ ಮಾಸದ ಎಲ್ಲಾ ಶುಕ್ರವಾರ ಚಾಮುಂಡಿ ಬೆಟ್ಟಕ್ಕೆಸಾರ್ವಜನಿಕರಿಗೆ ನಿರ್ಬಂಧ ವಿಧಿಸಲಾಗಿರುವ ಹಿನ್ನೆಲೆ ಯಾವುದೇಭಕ್ತರಿಲ್ಲದೇ, ದೇವಾಲಯಕ್ಕೆ ಸೀಮಿತವಾದಂತೆ ನಾಡ ದೇವತೆಚಾಮುಂಡೇಶ್ವರಿಗೆ ಆಷಾಢ ಅಮಾವಾಸ್ಯೆ ಪೂಜೆ ಅತ್ಯಂತಸರಳವಾಗಿ ನಡೆಯಿತು.ಜಿಲ್ಲಾಧಿಕಾರಿ ಆದೇಶದ ಮೇರೆಗೆ ದೇವಾಲಯದ ಅರ್ಚಕರುಹಾಗೂ ಸಿಬ್ಬಂದಿ ನೇತೃತ್ವದಲ್ಲಿ ಪ್ರಧಾನ ಅರ್ಚಕರು ಚಾಮುಂಡೇಶ್ವರಿದೇವಿಯ ಉತ್ಸವ ಮೂರ್ತಿಗೆ ವಿಶೇಷ ಅಲಂಕಾರ ಮಾಡಿ, ದೇವಾಲಯದ ಸುತ್ತಲೂ ಮೆರವಣಿಗೆ ನಡೆಸಿ ದೇವಿಗೆಪೂಜೆ ಸಲ್ಲಿಸಿದರು.
ಚಾಮುಂಡಿ ಬೆಟ್ಟದ ಪ್ರಧಾನ ಅರ್ಚಕರಾದ ಡಾ.ಶಶಿಶೇಖರದೀಕ್ಷಿತ್ ಮಾತನಾಡಿ, ಆಷಾಢಕ್ಕೂ ಮೊದಲು ಬರುವ ಅಮಾವಾಸ್ಯೆಇದಾಗಿದ್ದು, ನಾಳೆಯಿಂದ ಅಧಿಕೃತವಾಗಿ ಆಷಾಢಪ್ರಾರಂಭವಾಗಲಿದೆ. ಶ್ರವಣದಲ್ಲಿ ವಿಷ್ಣುವನ್ನು ಹಾಗೂಕಾರ್ತೀಕದಲ್ಲಿ ಮಹದೇಶ್ವರರನ್ನು ಪೂಜಿಸುವ ಮಾದರಿಯಲ್ಲಿಆಷಾಢದಲ್ಲಿ ಶಕ್ತಿ ದೇವತೆಯಾಗಿ ಚಾಮುಂಡೇಶ್ವರಿಯನ್ನುಪೂಜಿಸಲಾಗುತ್ತದೆ.
ಅದರಲ್ಲೂ ಮತ್ತೂಂದು ವಿಶೇಷ ಎಂದರೆಆಷಾಢದಲ್ಲಿ ಬೇರೆ ಯಾವುದೇ ಕಾರ್ಯಗಳು ನಡೆಯುವುದಿಲ್ಲ.ಹೀಗಾಗಿ ಕುಟುಂಬ ಸಮೇತರಾಗಿ ದೇವರ ಪೂಜೆ ಮಾಡುವುದು ಆಷಾಢದ ವಿಶೇಷವಾಗಿದೆ ಎಂದು ಹೇಳಿದರು.ಗಣ್ಯರು ಭೇಟಿ: ಕೊರೊನಾ ಹಿನ್ನೆಲೆಯಲ್ಲಿ ಕೇವಲ ಕೆಲವೇಗಣ್ಯರಿಗಷ್ಟೇ ಚಾಮುಂಡಿ ಬೆಟ್ಟಕ್ಕೆ ಪ್ರವೇಶಕ್ಕೆ ಅವಕಾಶಕಲ್ಪಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬೆಳಗ್ಗೆಯೇ ಗ್ರಾಮೀಣಾಭಿವೃದ್ಧಿಹಾಗೂ ಪಂಚಾಯತ್ ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪಭೇಟಿ ನೀಡಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದರು.
ಬಳಿಕ ಶಾಸಕಸಿ.ಎಸ್.ಪುಟ್ಟರಾಜು ಭೇಟಿ ನೀಡಿ ದರ್ಶನ ಪಡೆದರು. ಇವರಹೊರತಾಗಿ ಮತ್ಯಾರಿಗೂ ದರ್ಶನಕ್ಕೆ ಅವಕಾಶ ನೀಡಿರಲಿಲ್ಲ. ಬೆಟ್ಟಕ್ಕೆತೆರಳುವ ಎಲ್ಲಾ ಮಾರ್ಗಗಳಲ್ಲಿ ಪೊಲೀಸರು ಬ್ಯಾರಿಕೇಡ್‌ಅಳವಡಿಸಿ ಬಿಗಿ ಬಂದೋಬಸ್ತ್ ಮಾಡಿದ್ದರು.ನಗರದಲ್ಲಿಯೂ ಸಹ ಯಾವುದೇ ಆಚರಣೆಗೆ ಅವಕಾಶ ಇರದಹಿನ್ನೆಲೆಯಲ್ಲಿ ಎಲ್ಲಿಯೂ ಸಹ ಯಾವುದೇ ರೀತಿಯ ಆಷಾಢಸಂಭ್ರಮ ಕಾಣಲಿಲ್ಲ. ಕೆಲವು ದೇವಾಲಯಗಳಲ್ಲಿ ಪೂಜಾಕಾರ್ಯಕ್ಕೆ ಮಾತ್ರವೇ ಸಿಮಿತವಾಗಿದ್ದವು.