Advertisement

ಡೀಡ್ ಸಂಸ್ಥೆವತಿಯಿಂದ ಆದಿವಾಸಿ ಹಾಡಿಗಳಲ್ಲಿ 600 ಪಡಿತರ ಕಿಟ್ ವಿತರಣೆ

03:27 PM Jun 18, 2021 | Team Udayavani |

ಹುಣಸೂರು: ತಾಲೂಕಿನ ವಿವಿಧ ಹಾಡಿಗಳಲ್ಲಿ ಬದುಕು ಕಟ್ಟಿಕೊಂಡಿರುವ ಜೇನು ಕುರುಬ ಸಮುದಾಯದ ಮಂದಿಗೆ ಡೀಡ್‌ ಸಂಸ್ಥೆವತಿಯಿಂದ ಪಡಿತರ ಕಿಟ್‌ ನ್ನು ಸಂಸ್ಥೆಯ ನಿರ್ದೇಶಕ ಡಾ.ಎಸ್.ಶ್ರೀಕಾಂತ್ ವಿತರಿಸಿದರು.

Advertisement

ಕೋವಿಡ್ ನಿಂದಾಗಿ ಕೊಡಗು ಮತ್ತಿತರ ಕಡೆಗಳಲ್ಲಿ ಕೂಲಿಗೂ ತೆರಳಲಾಗದೆ  ಸಂಕಷ್ಟದಲ್ಲಿರುವ ಹುಣಸೂರು ತಾಲೂಕಿನ ಸೋನಹಳ್ಳಿ, ಮಹದೇವಪುರ, ಉದ್ದೂರು, ಬಲ್ಲೇನಹಳ್ಳಿ, ಕಾಳೇನಹಳ್ಳಿ, ಕೊಟ್ಟಿಗೆ ಕಾವಲ್, ಪೆಂಜಳ್ಳಿ, ಮಾದಹಳ್ಳಿ, ದಾಸನಪುರ  ಹಾಡಿಗಳ  600 ಜೇನು ಕುರುಬ ಕುಟುಂಬಗಳಿಗೆ ಒಂದು ವಾರಕ್ಕಾಗುವ ಆಹಾರ ಧಾನ್ಯವನ್ನು ವಿತರಿಸಿ ಮಾತನಾಡಿದ ಶ್ರೀಕಾಂತ್‌,  ಕೋವಿಡ್ ಮಹಾಮಾರಿಯಿಂದ ರಕ್ಷಿಸಿಕೊಳ್ಳಬೇಕಾದ ಉಪಾಯಗಳ ಕುರಿತು ಅರಿವು ಮೂಡಿಸಲಾಯಿತು. ಆಯುರ್ವೇದ ಕಾಲೇಜಿನಿಂದ ವಿತರಿಸುವ ಸೋಕು ನಿವಾರಕದ ದ್ರಾವಣದ ಬಾಟಲುಗಳನ್ನು ಪಡೆದು ದಿನಕ್ಕೆ ಎರಡು ಬಾರಿ ಮಾಸ್ಕ್‌ ಗೆ ಸಿಂಪಡಿಸಿಕೊಂಡಲ್ಲಿ ಸರಾಗವಾಗಿ ಉಸಿರಾಡಬಹುದು, ಇದರಿಂದ  ಸೋಂಕು ತಗಲುವ ಸಾಧ್ಯತೆಗಳು ಕಡಿಮೆ ಎಂದರು.

ಇದನ್ನೂ ಓದಿ : ಜಿಂಕೆ ಮಾಂಸ, ಕೊಂಬು ಹಾಗೂ ಜೀವಂತ ಕಾಡುತೂಸು ವಶ : ಆರೋಪಿಗಳು ಪರಾರಿ

ಡೀಡ್ ಸಂಸ್ಥೆಯ ಪ್ರಕಾಶ್ ಮಾತಾನಾಡಿ, ಹೊರಗಿನ ಜನರು ತಮ್ಮ ಹಾಡಿಗಳಿಗೆ ಭೇಟಿ ಕೊಟ್ಟಾಗ ನೀವು ಮಾಸ್ಕ್ ಧರಿಸಿರಬೇಕು, ಸಾಮಾಜಿಕ ಅಂತರ ಕಾಪಾಡಿಕೊಳ್ಳಬೇಕು, ಕುದಿಸಿದ ನೀರಿನ ಹಬೆಯನ್ನು ದಿನಕ್ಕೆ ಎರಡು ಬಾರಿ ತೆಗೆದು ಕೊಳ್ಳಬೇಕು, ಕುಡಿಯಲು ಬಿಸಿ ನೀರು ಬಳಸಿ, ಬಿಸಿಯಾದ ಆಹಾರವನ್ನೇ ಸೇವಿಸುವಂತೆ ಮನವಿ ಮಾಡಿದರು.

ಬುಡಕಟ್ಟು ಕೃಷಿಕರ ಸಂಘದ ಕಾರ್ಯದರ್ಶಿ ಜಯಪ್ಪ ಮಾತಾನಾಡಿ, ಈ ಕೋರೋನಾ ಸಂದರ್ಭದಲ್ಲಿ ಕೂಲಿಯೂ ಇಲ್ಲದೇ ಹಸಿವು ಕೊರಾನಾಗಿಂತಲೂ ಹೆಚ್ಚಾಗಿ ನಮ್ಮ ಜನರನ್ನು ಕಾಡುತ್ತಿದ್ದಿರುವ. ಕಷ್ಟದ ಸಮಯದಲ್ಲಿ ದಾನಿಗಳೂ ಕೈ ಜೋಡಿಸುವುದರ ಜೊತೆಗೆ ಭಾರತ ಸರ್ಕಾರದ ಮಹತ್ವಾಂಕಾಂಕ್ಷೆಯೋಜನೆಗಳಲ್ಲೊಂದಾಗಿರುವ ಪೌಷ್ಟಿಕ ಆಹಾರ ವಿತರಿಸುವ ಯೋಜನೆಯನ್ನು ಯೋಜನೆಯನ್ನು ಒಂದು ವರ್ಷಕ್ಕೆ ವಿಸ್ತರಿಸಬೇಕೆಂದು ಮನವಿ ಮಾಡಿದರು.

Advertisement

ಕೋವಿಡ್ ನಂತರ ನಂತರದಲ್ಲಿ ಉಗ್ರ ಹೋರಾಟ

ಹುಣಸೂರು ತಾಲೂಕಲ್ಲಿ 1838 ಜೇನುಕುರುಬ ಸಮುದಾಯದ ಕುಟುಂಬಗಳು ಕಾಡಿಂದ ಹೊರಹಾಕಿದ ಮೇಲೆ ಭೂಮಿ ಇಲ್ಲದೇ ಕೂಲಿ ಮಾಡಿ ಬದುಕುತ್ತಿವೆ, ಹೈಕೋರ್ಟ್ ಆದೇಶವಿದ್ದರೂ ಸರ್ಕಾರ ಪುನರ್ವಸತಿ ಕಲ್ಪಿಸದೆ ಸತಾಯಿಸುತ್ತಿರುವುದರಿಂದ ಆದಿವಾಸಿಗಳು ಕೂಲಿಯಿಂದಲೇ ಜೀವನ ನಡೆಸಬೇಕಿದೆ. ಸ್ವಾಭಿಮಾನಿಗಳಾದ ನಾವು ಇಲ್ಲಿಯವರೆಗೆ ಕಾದದ್ದು ಸಾಕು ಇತರರಂತೆ ಹೋರಾಟ ನಡೆಸುವುದು ಅನಿವಾರ್ಯವಾಗಿದ್ದು, ಕೋವಿಡ್ ನಂತರ ನಂತರದಲ್ಲಿ ಉಗ್ರ ಹೋರಾಟ ನಡೆಸಲು ಸಹಕಾರ ನೀಡಬೇಕೆಂದರು,

ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷ ಪಿ.ಕೆ.ರಾಮು ಮಾತಾನಾಡಿ ಕೋವಿಡ್ ಲಸಿಕೆ ಕುರಿತು ಆಲಸ್ಯಬೇಡ ಎಲ್ಲರೂ ಲಸಿಕೆ ಹಾಕಿಸಿಕೊಳ್ಳಿರೆಂದು ಮನವಿ ಮಾಡಿದರು. ಈ ವೇಳೆ ಆಯಾ ಹಾಡಿಗಳ ಮುಖಂಡರು ಹಾಜರಿದ್ದರು.

ಇದನ್ನೂ ಓದಿ : ಇಲ್ಲಿ ಎಲ್ಲದಕ್ಕೂ “ಅರ್ಥ” ನಮ್ಮ ಇರುವಿಕೆಯನ್ನು ಆಧರಿಸಿರುತ್ತದೆ..!

Advertisement

Udayavani is now on Telegram. Click here to join our channel and stay updated with the latest news.

Next