Advertisement

ತ್ಯಾಜ್ಯ ಮುಕ್ತ ನಗರಗಳಲ್ಲಿ ಮೈಸೂರು ಪ್ರಥಮ

06:06 AM May 20, 2020 | Lakshmi GovindaRaj |

ಮೈಸೂರು: ದೇಶದ ಸ್ವಚ್ಛ ನಗರ ಖ್ಯಾತಿಯ ಸಾಂಸ್ಕೃತಿಕ ನಗರಿ ಮೈಸೂರಿನ ಮುಡಿಗೆ ಮತ್ತೂಂದು ಗರಿಮೆ ಸೇರ್ಪಡೆಯಾಗಿದ್ದು, ತ್ಯಾಜ್ಯ ಮುಕ್ತ ನಗರಗಳಲ್ಲಿ ಫೈವ್‌ಸ್ಟಾರ್‌ ಪಡೆಯುವ ಮೂಲಕ ಮತ್ತೂಮ್ಮೆ ಮೈಸೂರು ನಗರ ಹೆಗ್ಗಳಿಕೆಗೆ  ಪಾತ್ರವಾಗಿದೆ. ದೇಶದಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ಸ್ವಚ್ಛ ಸರ್ವೇಕ್ಷಣೆ ಆರಂಭಿಸಿತ್ತು. ಈ ಸಂದರ್ಭ ಮೊದಲ ಹಾಗೂ 2ನೇ ವರ್ಷ ಮೈಸೂರು ಮೊದಲ ಸ್ಥಾನ ಪಡೆದುಕೊಂಡಿತ್ತು.

Advertisement

ನಂತರ 5ನೇ ಸ್ಥಾನ,  ಬಳಿಕ 10 ಲಕ್ಷ ಜನಸಂಖ್ಯೆ ಹೊಂದಿರುವ ನಗರಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಸೇರಿದಂತೆ ಹಲವು ಪ್ರಶಸ್ತಿ ಪಡೆದುಕೊಂಡಿತ್ತು. ಕೇಂದ್ರದ ನಗರಾಭಿವೃದಿಟಛಿ ಮಂತ್ರಾಲಯ ಬಿಡುಗಡೆ ಮಾಡಿದ ದೇಶದ ತ್ಯಾಜ್ಯ ಮುಕ್ತ ನಗರಗಳಲ್ಲಿ ಮೈಸೂರು ಫೈವ್‌ ಸ್ಟಾರ್‌ ಪಡೆದಿದ್ದು, ಪಟ್ಟಿಯಲ್ಲಿರುವ ದಕ್ಷಿಣ ಭಾರತದ ಏಕೈಕ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಮೈಸೂರು ತ್ಯಾಜ್ಯ ಮುಕ್ತ ನಗರಗಳ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಹೆಮ್ಮೆ ವಿಷಯ. ರಾಜ್ಯದ ಎಲ್ಲಾ ನಗರಗಳಿಗೂ ಮಾದರಿಯಾದ ಮೈಸೂರಿನ ಜಿಲ್ಲಾಡಳಿತ, ಜನಪ್ರತಿನಿಧಿಗಳು, ನಾಗರಿಕರು, ಸಂಘಸಂಸ್ಥೆಗಳಿಗೆ ಅಭಿನಂದನೆ. 
-ಎಸ್‌.ಟಿ.ಸೋಮಶೇಖರ್‌, ಸಚಿವ

ಈ ಬಾರಿ 7 ಸ್ಟಾರ್‌ ನಗರಗಳನ್ನು ಗುರುತಿಸಿಲ್ಲ. ಬದಲಿಗೆ 5 ಫೈವ್‌ ಸ್ಟಾರ್‌ ನಗರ ಗುರುತಿಸಿದ್ದು, ಅದರಲ್ಲಿ ಮೈಸೂರು ಸ್ಥಾನ ಪಡೆದಿದೆ. ನಗರದ ಸ್ವಚ್ಛತೆ ಕಾಪಾಡಿಕೊಂಡಿದ್ದರಿಂದ ಮೈಸೂರಿಗೆ ಈ ಸ್ಥಾನ ಲಭಿಸಿದೆ. 
-ಡಾ.ನಾಗರಾಜ್, ನಗರ ಪಾಲಿಕೆ ಆರೋಗ್ಯಾಧಿಕಾರಿ

Advertisement

Udayavani is now on Telegram. Click here to join our channel and stay updated with the latest news.

Next